day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸಾಮಾಜಿಕ ಬದುಕಿನ ಒಳಪುಟ……….. – AVIN TV

लाइव कैलेंडर

December 2024
M T W T F S S
 1
2345678
9101112131415
16171819202122
23242526272829
3031  

AVIN TV

Latest Online Breaking News

ಸಾಮಾಜಿಕ ಬದುಕಿನ ಒಳಪುಟ………..

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸಾಮಾಜಿಕ ಬದುಕಿನ ಒಳಪುಟ………..

ಆಳವಾಗಿ ಪ್ರೀತಿಸುವವರು ಒಂದಷ್ಟು ಜನ,
ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ,…..

ಮೆಚ್ಚುವವರಿಗೆ ಬರವಿಲ್ಲ,
ಟೀಕಿಸುವವರು ಕಡಿಮೆಯೇನಿಲ್ಲ,…….

ಅಸೂಯೆ ಒಳಗೊಳಗೆ,
ಕುಹುಕ ನಗು ಮೇಲಿನ ಹೊದಿಕೆ,….

ಎತ್ತಿ ಕಟ್ಟುವವರು ಹಲವರು,
ಎಚ್ಚರಿಸುವವರು ಕೆಲವರು,……

ಹೃದಯ ತಟ್ಟುವವರು ಇದ್ದಾರೆ,
ಬೆನ್ನಿಗೆ ಇರಿಯುವವರೂ ಉಂಟು,……

ಧೈರ್ಯ ತುಂಬುವವರು,
ಭಯ ಪಡಿಸುವವರು,
ಜೊತೆಯಾಗುವವರು,
ದೂರ ಸರಿಯುವವರು,
ಸ್ವಾಗತಿಸುವವರು,
ವಿರೋಧಿಸುವವರು,……

ತಪ್ಪು ಅರ್ಥೈಸಿಕೊಂಡವರು,
ನಿಜದ ಅನುಭಾವಿಗಳು,
ಪೂರ್ವಾಗ್ರಹ ಪೀಡಿತರು,
ವಿಶಾಲ ದೃಷ್ಟಿಯವರು,
ಮಜಾ ತೆಗೆದುಕೊಳ್ಳುವವರು,
ಹಿತ ಬಯಸುವವರು,…..

ನಿರ್ಲಿಪ್ತರು – ನಿರ್ಲಕ್ಷ್ಯವಹಿಸುವವರು,
ಹಿಂಸಾವಾದಿಗಳು, ಕರುಣಾಮಯಿಗಳು,
ಮೇಲೆತ್ತುವವರು,
ಕೆಳಗೆ ತುಳಿಯುವವರು,
ಸ್ವಾಭಿಮಾನಗಳು,
ಮಾರಿಕೊಂಡವರು,……

ಮುಖವಾಡ ಧರಿಸಿರುವವರು,
ಸಹಜ ಸ್ವಭಾವದವರು,
ಆಕ್ರೋಶ ನುಡಿಯ ಮಾತುಗಳು
ಮೆಲು ಧ್ವನಿಯ ವಿನಯಿಗಳು,
ನಗುನಗುತ್ತಾ ಅಳಿಸುವವರು,
ಅಳುವಿನಲ್ಲಿ ನಗುತ್ತಾ ಜೊತೆಯಾಗುವವರು,…..

ನಿಜ ವೀರರು,
ರಣ ಹೇಡಿಗಳು,
ಬಹುಮಾನಿಸುವವರು,
ಅವಮಾನಿಸುವವರು,
ಪ್ರೇರೇಪಿಸುವವರು,
ಪ್ರಚೋದಿಸುವವರು,
ತ್ಯಾಗಿಗಳು – ಸ್ವಾರ್ಥಿಗಳು,
ಜಾಣ ಪೆದ್ದರು – ಪೆದ್ದ ಜಾಣರು,……

ನವ ರಸಗಳು,
64 ವಿದ್ಯೆಗಳು,
ಊಹೆಗೂ ನಿಲುಕದ ಮನಸುಗಳು……

18 ರ ಕನಸುಗಳು,
30 ರ ಆಸೆಗಳು,
50 ರ ಭರವಸೆಗಳು,
70 ರ ನೋವುಗಳು,
ಸಾಮಾಜಿಕ ಜಾಲತಾಣಗಳ ಅಭಿಪ್ರಾಯಗಳು,….

ಯೇಸುವನ್ನೇ ಶಿಲುಬೆಗೇರಿಸಿದರು,
ಬಸವನನ್ನೇ ಕೊಂದರು,
ಅಬ್ರಹಾಂ ಲಿಂಕನ್ನನ್ನನ್ನೇ ಇಲ್ಲವಾಗಿಸಿದರು,
ಪೈಗಂಬರನನ್ನೇ ಓಡಿಸಿದರು,
ಗಾಂಧಿಗೇ ಗುಂಡಿಕ್ಕಿದರು,…….

ನಮ್ಮ ತನವೂ ಇರಬೇಕು,
ಹೊಂದಾಣಿಕೆಯೂ ಆಗಬೇಕು,
ಸಹಕಾರವೂ ಸಿಗಬೇಕು…..
ವೈವಿಧ್ಯತೆಯೂ ಬೆರೆಯಬೇಕು,
ಅತಿರೇಕಗಳ ನಡುವೆ ಸಮನ್ವಯ.. ‌…

ಈ ಎಲ್ಲದರ ನಡುವೆ ‌ವಾಸ್ತವದ ಬದುಕು,
ವ್ಯಾವಹಾರಿಕ ಬದುಕು, ನೆಮ್ಮದಿಯ ಜೀವನದ ಹುಡುಕಾಟ…….

ವಯಸ್ಸಿನ ಅಂತರ,
ಹಣಕಾಸಿನ ವ್ಯತ್ಯಾಸ,
ಜಾತಿಯ ಕಂದರ,
ವಿದ್ಯೆಯ ಭಿನ್ನತೆ,
ಅಧಿಕಾರದ ಅಸಮಾನತೆ,

ಬದುಕನ್ನು ಬಯಸುವವರಿಗೆ,
ಹೆದರಿಕೆ, ನಾಚಿಕೆ, ಅವಮಾನ,
ಆಸೆ, ಸಾವನ್ನು ಸ್ವಾಗತಿಸುವವರಿಗೆ…….

ಹೀಗೆ ಬದುಕೊಂದು ಊಹೆಗೆ ನಿಲುಕದ ಅನಂತದೆಡೆಗೆ ಪಯಣ…….

ಅದರಲ್ಲಿ,

ಬರುವವರಿಗೆ ಸ್ವಾಗತ,
ಹೋಗುವವರಿಗೆ ವಂದನೆಗಳು,…..

ಮೆಚ್ಚುವವರಿಗೆ ಧನ್ಯವಾದಗಳು,
ಟೀಕಿಸುವವರಿಗೆ ನಮಸ್ಕಾರಗಳು,….

ಅಭಿಮಾನಿಸುವವರಿಗೆ ಕೃತಜ್ಞತೆಗಳು,
ಅಸೂಯೆಪಡುವವರಿಗೆ ಸಹಾನುಭೂತಿಗಳು,…..

ಪ್ರೀತಿಸುವವರಿಗೆ ನಗು,
ದ್ವೇಷಿಸುವವರಿಗೆ ನಿರ್ಲಕ್ಷ್ಯ,…..

ಸಹಾಯ ಮಾಡುವವರಿಗೆ ಸಲಾಂ,
ತೊಂದರೆ ಕೊಡುವವರಿಗೆ ಗುಡ್ ಬೈ,…..

ಆತ್ಮೀಯರಿಗೊಂದಷ್ಟು ಅಪ್ಪುಗೆ,
ಪರಿಚಿತರಿಗೊಂದಷ್ಟು ಸಲುಗೆ,…..

ಪ್ರೋತ್ಸಾಹಿಸುವವರಿಗೆ ನಮನಗಳು,
ಕಾಲೆಳೆಯುವವರಿಗೆ ತಿರಸ್ಕಾರಗಳು,….

ಜೊತೆಯಾಗುವವರಿಗೆ
ಯಶಸ್ಸಾಗಲಿ,
ದೂರಾವಾಗುವವರಿಗೆ ಒಳ್ಳೆಯದಾಗಲಿ,……

ಗೆದ್ದವರಿಗೆ ಅಭಿನಂದನೆಗಳು,
ಸೋತವರಿಗೆ ಹಿತ ನುಡಿಗಳು,…..

ಹೀಗೆ, ಎಲ್ಲಾ ಭಾವನೆಗಳೊಂದಿಗೆ, ಸಾಗುತ್ತಲೇ ಇದೆ ಬದುಕು,….

ನನ್ನದು, ನಿಮ್ಮದು, ಎಲ್ಲರದೂ,

ಬದುಕಿನೊಂದಿಗೆ ಸರಸವಾಡುತ್ತಾ,
ವಿಧಿಯೊಂದಿಗೆ ಚೆಲ್ಲಾಟವಾಡುತ್ತಾ,
ಬರುವುದನ್ನು ಸ್ವೀಕರಿಸುತ್ತಾ,
ಹೋಗುವುದನ್ನು ಬೀಳ್ಕೊಡುತ್ತಾ,
ನಗುತ್ತಾ, ಅಳುತ್ತಾ,….‌…‌‌‌

ಸಾಗುತ್ತಲೇ ಇರಲಿ ಜೀವನ…..

ಕೊನೆಯೇ ಇಲ್ಲವೇನೋ ಎಂಬ ಭಾವದೊಂದಿಗೆ..‌‌‌…………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……

About Author

Leave a Reply

Your email address will not be published. Required fields are marked *