day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj *RTO ಅಧಿಕಾರಿಗಳ, ಬ್ರೋಕರ್​ಗಳ ಲಂಚಗುಳಿತನಕ್ಕೆ ಬೀಳಲಿದೆ ಬ್ರೇಕ್* – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

*RTO ಅಧಿಕಾರಿಗಳ, ಬ್ರೋಕರ್​ಗಳ ಲಂಚಗುಳಿತನಕ್ಕೆ ಬೀಳಲಿದೆ ಬ್ರೇಕ್*

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*RTO ಅಧಿಕಾರಿಗಳ, ಬ್ರೋಕರ್​ಗಳ ಲಂಚಗುಳಿತನಕ್ಕೆ ಬೀಳಲಿದೆ ಬ್ರೇಕ್*

*ಇನ್​ಸ್ಪೆಕ್ಟರ್​ಗಳಿಲ್ಲದೆಯೇ ಆಗಲಿದೆ ವಾಹನಗಳ ಎಫ್​ಸಿ*

ಆರ್​ಟಿಒ ಇನ್ಸ್‌ಪೆಕ್ಟರ್​ಗಳಿಲ್ಲದೆಯೇ ಇನ್ಮುಂದೆ ಆಗಲಿದೆ ಎಫ್​ಸಿ! ಎಫ್​ಸಿ ಮಾಡಲು ಸಾರಿಗೆ ಇಲಾಖೆ Automatic Testing Station (ATS) ತೆರೆದಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನೆಲಮಂಗಲ ಆರ್​ಟಿಒದಲ್ಲಿ ಎಟಿಎಸ್ ಸೆಂಟರ್​​ಗಳನ್ನು ತೆರೆಯಲಾಗಿದೆ. ಈ ಸೆಂಟರ್​​ಗಳಿಗೆ ವಾಹನಗಳನ್ನು ತೆಗೆದುಕೊಂಡು ಹೋದರೆ ಸಾಕು, ಆ ಮಷಿನ್​ಗಳೇ ವಾಹನಗಳಿಗೆ ಪಾಸ್ ಅಥವಾ ಫೇಲ್ ಸರ್ಟಿಫಿಕೇಟ್ ನೀಡುತ್ತವೆ. ಯಾವುದೇ ಆರ್​ಟಿಓ ಅಧಿಕಾರಿಗಳು, ಬ್ರೋಕರ್​​ಗಳ ಹಾವಳಿ ಇಲ್ಲದೆ ವಾಹನಗಳ ಎಫ್​ಸಿ ಮಾಡಿಸಿಕೊಳ್ಳಬಹುದು‌.

ಈ ಹಿಂದೆ ವಾಹನಗಳಿಗೆ ಎಫ್​ಸಿ ಮಾಡಿಸಬೇಕು ಅಂದರೆ ಗಂಟೆಗಟ್ಟಲೆ ಕಾಯಬೇಕಿತ್ತು. ಆದರೆ ಈಗ ಹತ್ತು ನಿಮಿಷಗಳಲ್ಲಿ ಎಫ್​ಸಿ ಆಗುತ್ತದೆ!

ನಿಯಮಗಳ ಪ್ರಕಾರ, ಯೆಲ್ಲೋ ಬೋರ್ಡ್ ಹೊಸ ವಾಹನಗಳಾಗಿದ್ದರೆ, ಏಳು ವರ್ಷದ ಒಳಗಿನ ವಾಹನಗಳು ಎರಡು ವರ್ಷಕ್ಕೊಮ್ಮೆ ಎಫ್​ಸಿ ಮಾಡಿಸಬೇಕು. ಏಳು ವರ್ಷದ ನಂತರ ವಾಹನಗಳಿಗೆ ಪ್ರತಿವರ್ಷ ಎಫ್​ಸಿ ಮಾಡಿಸಬೇಕು. ವೈಟ್ ಬೋರ್ಡ್ ವಾಹನಗಳಿಗೆ ಹದಿನೈದು ವರ್ಷಕ್ಕೊಮ್ಮೆ ಎಫ್​ಸಿ ಮಾಡಿಸಬೇಕು. ನಂತರ ಐದು ವರ್ಷಕೊಮ್ಮೆ ಎಫ್​ಸಿ ಮಾಡಿಸಬೇಕು.

*ಎಫ್​ಸಿ ಮಾಡುವಾಗ ನಡೆಸುವ ತಪಾಸಣೆಗಳು ಏನೇನು?*

* ಇಂಜಿನ್ ಸೌಂಡ್
* ಹೊಗೆ ತಪಾಸಣೆ
* ಸ್ಪೀಡ್ ಗವರ್ನರ್
* ಹೆಡ್ ಲೈಟ್
* ಇಂಡಿಕೇಟರ್
* ವೈಪರ್
* ಹಾರನ್
* ಬ್ರೇಕ್ ಲೈಟ್ಸ್
* ಪೇಟಿಂಗ್
* ಬಾಡಿ ಡೆಟೋರೆಟೆಡ್
* ಟೈರ್​ಗಳ ತಪಾಸಣೆ
* ವೆಹಿಕಲ್ ವೈಬ್ರೇಷನ್
* ಇಂಜಿನ್ ಆಯಿಲ್ ಫಿಟ್ನೆಸ್

*ಅಕ್ರಮ ತಡೆಗೆ ಎಟಿಎಸ್ ಮಷಿನ್ ಹೇಗೆ ಸಹಕಾರಿ?*

ಈ ಹಿಂದೆ ಎಫ್​ಸಿಗೆ ಹೋಗುವ ವಾಹನಗಳಲ್ಲಿ ಎಲ್ಲಾ ಸರಿ ಇದ್ದರೂ ಆರ್​ಟಿಒ ಇನ್ಸ್‌ಪೆಕ್ಟರ್​ಗಳು ಏನಾದರೂ ಕಾರಣ ಹೇಳಿ ಎಫ್​ಸಿ ಫೇಲ್ ಮಾಡಿಸುತ್ತಿದ್ದರು. ಇದೀಗ ಈ ಎಟಿಎಸ್​ಗಳಿಂದ ಆ ರೀತಿ ಮಾಡಲು ಆಗುವುದಿಲ್ಲ. ಪ್ರತಿಯೊಂದನ್ನೂ ಈ ಮಷಿನ್​​ಗಳು ಪರಿಶೀಲನೆ ಮಾಡಲಿವೆ. ಈ ಮಷಿನ್ ಮೂಲಕ ಸ್ಥಳದಲ್ಲೇ ವಾಹನ ಮಾಲೀಕರಿಗೆ ಎಫ್​ಸಿ ಸರ್ಟಿಫಿಕೇಟ್ ದೊರೆಯುತ್ತದೆ. ಈ ಬಗ್ಗೆ ವಾಹನ ಮಾಲೀಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಹೊಸದಾಗಿ ಓಪನ್ ಆಗಿರುವ ಎಟಿಎಸ್ ಸೆಂಟರ್​ಗಳಿಂದ ವಾಹನ ಮಾಲೀಕರಿಗೆ ಕಿರಿಕಿರಿ ತಪ್ಪುವುದರ ಜತೆಗೆ ಹಣ ಉಳಿಯುವುದಂತೂ ಗ್ಯಾರಂಟಿ.

About Author

Leave a Reply

Your email address will not be published. Required fields are marked *