day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj 12ನೇ ವರ್ಷದ ಭಾವಗೀತೆ ಸ್ಪರ್ಧಾ ಕಾರ್ಯಕ್ರಮ….. ಶೃಂಗೇರಿ…. – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

12ನೇ ವರ್ಷದ ಭಾವಗೀತೆ ಸ್ಪರ್ಧಾ ಕಾರ್ಯಕ್ರಮ….. ಶೃಂಗೇರಿ….

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

12ನೇ ವರ್ಷದ ಭಾವಗೀತೆ ಸ್ಪರ್ಧಾ ಕಾರ್ಯಕ್ರಮ…..
ಶೃಂಗೇರಿ….

*ಜೇಸೀಸ್ ಶಾಲೆ, ಶೃಂಗೇರಿ*. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗಾನಸಿರಿ ಮ್ಯೂಸಿಕಲ್, ಶೃಂಗೇರಿ, ಇವರ ಪ್ರಯೋಜಕತ್ವದಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ 12ನೇ ವರ್ಷದ ಭಾವಗೀತೆ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು..
ಈ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀಸೀ ಸ್ಕೂಲ್ ಮ್ಯಾನೇಜ್ಮೆಂಟ್ ಕಮಿಟಿಯ ಉಪಾಧ್ಯಕ್ಷರಾದ ಡಾ,ಹೆಚ್.ಜಿ ಲಕ್ಷ್ಮೀನಾರಾಯಣ್ ರವರು ವಹಿಸಿದ್ದರು.
ಕಾರ್ಯಕ್ರಮವನ್ನು ಶೃಂಗೇರಿಯ ಪ್ರಸಿದ್ಧ ವೈದ್ಯರಾದ ಜ್ಯೋತಿ ಹೋಮಿಯೋ ಕ್ಲಿನಿಕ್ ನ ಡಾ. ಅಣ್ಣದೊರೆ .ಕೆ. ಸಿ ಇವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶೃಂಗೇರಿಯ ಆರಕ್ಷಕ ಠಾಣೆಯ ಸಹಾಯಕ ಪೊಲೀಸ್ ಉಪ -ನಿರೀಕ್ಷಕರಾದ ಡಾ.ಮೋಹನ್ ರಾಜಣ್ಣ
ಮಾತನಾಡುತ್ತಾ ಭಾವನೆಗಳಿಗೂ ಮಾನವನಿಗೂ ನಿಕಟ ಸಂಭಂದ ವಿದೆ ಮನ್ನಸ್ಸಿನ ಭಾವನೆ ಗಳು ಮೂರ್ತ ರೂಪ ತಾಳಿ ರಾಗ. ತಾಳ. ಲಯ ಬದ್ದ ವಾಗಿ ಹೊರ ಹೊಮ್ಮಿದಾಗ ಭಾವಗೀತೆ ಗಳು ಸೃಷ್ಟಿ ಯಾಗುತ್ತವೆ ಭಾವನೆಗಳಿಂದ ತುಂಬಿದ ಭಾವ ಗೀತೆ ಗಳನ್ನು ಕೇಳುತ್ತಾ ಅದರ ಒಳ ಹರಿವುಗಳನ್ನು ಅರಿತು ಕೊಂಡಾಗ ಮನುಷ್ಯ ನ ಮನಸ್ಸು ವಿಕಸಿತಗೊಳ್ಳು ತ್ತದೆ ಎಂದರು.
ಇಂಗ್ಲಿಷ್ ಸಾಹಿತ್ಯ ವಿಪುಲ ಪ್ರಕಾರ ಗಳ ಅರಿವು ನಮ್ಮಲ್ಲಿ ಭಾವ ಗೀತೆ ಗಳ ಸೃಷ್ಟಿ ಗೆ ಕಾರಣ ವಾಯಿತು. ಬಿ ಎಂ ಶ್ರೀ ಯವರ ಇಂಗ್ಲಿಷ್ ಗೀತೆ ಗಳ ಕನ್ನಡ ದಲ್ಲಿ ಮಾನವನ ವಿವಿಧ ಮನೋ ಭೂಮಿಕೆಗಳು ಭಾವಗೀತೆ ಗಳಾಗಿ ಬರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೆ.ಎಸ್.ನ… ಕುವೆಂಪು. ಬೇಂದ್ರೆ. ಪುತಿನ. ಮೊದಲಾದವರಿಂದ ಅದು ಬೆಳೆದು ಕಾವ್ಯ ರಸಿಕರ ಮನಸ್ಸನ್ನು ಅವರಿಸಿಕೊಂಡು ಕನ್ನಡ ದಲ್ಲಿ ಭಾವಗೀತೆ ಸಾಹಿತ್ಯ ಪ್ರಕಾರ ವನ್ನು ಸಮೃದ್ಧ ಗೊಳಿಸುತ್ತದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ನ್ಯೂಸ್ ಮಲ್ನಾಡ್ ವಾಹಿನಿಯ ಪತ್ರಕರ್ತರಾದ ಶ್ರೀಯುತ ಅಭಿನವ ಇವರು ಆಗಮಿಸಿದ್ದರು.
ಕಾರ್ಯಕ್ರಮದ ತೀರ್ಪುಗಾರಿಕೆಯನ್ನು ಶ್ರೀಯುತ ರವಿ, ಕೊಪ್ಪ ಇವರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶೃಂಗೇರಿ ಜೆ. ಸಿ .ಐ ನ ಪೂರ್ವಾಧ್ಯಕ್ಷರು
ಹಾಗೂ ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಯುತ ಶಿವಾನಂದರಾವ್, ಹೆಗ್ಗಡೆ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ವೈದ್ಯರವರು ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿ ಬಿ.ಜಿ.ಎಸ್ ಶಾಲೆಯ ಕು// ಅಚಲ, ಪ್ರಥಮ ಸ್ಥಾನವನ್ನು ಪಡೆದರೆ, ದ್ವಿತೀಯ ಸ್ಥಾನವನ್ನು ಜೆ.ಬಿ.ವಿ.ಕೆ ಶಾಲೆಯ ಪೂರ್ಣ ಶ್ರೀ ಹಾಗೂ ತೃತೀಯ ಸ್ಥಾನವನ್ನು ಶೃಂಗೇರಿಯ ಜೇಸೀಸ್ ಶಾಲೆಯ ಕು//ಅನ್ವಿತಾ ಎನ್.ಕೆ ಇವರು ಪಡೆದರು. ಈ ವಿಜೇತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಪ್ರಾಯೋಜಕರು ವಿಶೇಷ ಬಹುಮಾನವನ್ನು ನೀಡಿ ಗೌರವಿಸಿದರು.

About Author

Leave a Reply

Your email address will not be published. Required fields are marked *