day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj Ration Card: ಅಂತ್ಯೋದಯ, ಬಿಪಿಎಲ್ ಕಾರ್ಡ್​​​ದಾರರಿಗೆ ಬಿಗ್​ ಶಾಕ್! ನಿಮ್ಮ ಮನೆಯಲ್ಲಿ ಫೋರ್ ವೀಲರ್ ವೆಹಿಕಲ್ ಇದೆಯಾ? – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

Ration Card: ಅಂತ್ಯೋದಯ, ಬಿಪಿಎಲ್ ಕಾರ್ಡ್​​​ದಾರರಿಗೆ ಬಿಗ್​ ಶಾಕ್! ನಿಮ್ಮ ಮನೆಯಲ್ಲಿ ಫೋರ್ ವೀಲರ್ ವೆಹಿಕಲ್ ಇದೆಯಾ?

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

Ration Card: ಅಂತ್ಯೋದಯ, ಬಿಪಿಎಲ್ ಕಾರ್ಡ್​​​ದಾರರಿಗೆ ಬಿಗ್​ ಶಾಕ್! ನಿಮ್ಮ ಮನೆಯಲ್ಲಿ ಫೋರ್ ವೀಲರ್ ವೆಹಿಕಲ್ ಇದೆಯಾ?
ನಾಲ್ಕು ಚಕ್ರದ ವಾಹನ ಇರುವವರ ಪಡಿತರ ರದ್ದು ವಿಚಾರವಾಗಿ ಭಾರೀ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಅಂತ್ಯೋದಯ, BPL ಕಾರ್ಡ್ ಪರಿಷ್ಕರಣೆಗೆ ಸರ್ಕಾರ ಮುಂದಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ತಹಶೀಲ್ದಾರರ ನೇತೃತ್ವದಲ್ಲಿ ನೋಟಿಸ್ ‌ಜಾರಿ ಮಾಡಲಾಗಿದೆ.
ಸರ್ಕಾರದ ಸೂಚನೆ ಮೇರೆಗೆ ರಾಜ್ಯಾದ್ಯಂತ ತಾಲೂಕು ಆಡಳಿತದಿಂದ ರೂಲ್ಸ್ ಜಾರಿ ಆಗ್ತಿದ್ದು, ಫೋರ್ ವೀಲರ್ ವೆಹಿಕಲ್ ಇರುವವರಿಗೆ ಇನ್ಮುಂದೆ ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ನಾಲ್ಕು ಚಕ್ರದ ವಾಹನ ಇದ್ದು ಅಂತ್ಯೋದಯ, BPL ಕಾರ್ಡ್ ಇದ್ದರೆ ವಾಪಸ್ ನೀಡುವಂತೆ ಸೂಚನೆ ನೀಡಲಾಗಿದೆ.
ಸರ್ಕಾರದ ಆದೇಶದ‌ ಮೇರೆಗೆ ತಾಲೂಕು ಆಡಳಿತದಿಂದ ಅಂತ್ಯೋದಯ, ಬಿಪಿಎಲ್ ಕಾರ್ಡ್ ದಾರರಿಗೆ ಖಡಕ್ ಎಚ್ಚರಿಕೆ ನೀಡಲಾಗಿದ್ದು, ತಕ್ಷಣವೇ ಅಂತ್ಯೋದಯ, BPL ಕಾರ್ಡ್ ವಾಪಸ್ ನೀಡುವಂತೆ ಸೂಚನೆ ನೀಡಲಾಗಿದೆ.

ವಾಪಸ್ ನೀಡದಿದ್ದರೆ ಕಾನೂನು ಕ್ರಮದ ಜೊತೆ ದಂಡದ ಎಚ್ಚರಿಕೆಯನ್ನು ನೀಡಲಾಗಿದ್ದು, ತಾಲೂಕು ಕಚೇರಿ, ಆಹಾರ ಖಾತೆಗೆ ಕಾರ್ಡ್ ವಾಪಸ್ ನೀಡುವಂತೆ ಸೂಚನೆ ನೀಡಲಾಗಿದೆ. ಇದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲೇ 52 ಸಾವಿರದ 200 ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.

ಕಳೆದ ತಿಂಗಳು ಅನರ್ಹ ಪಡಿತರದಾರರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿತ್ತು, ಭಾರೀ ವಿರೋಧದ ನಡುವೆಯೂ ನಾಲ್ಕು ಚಕ್ರದ ವಾಹನ ಇರುವವರ ಪಡಿತರ ಕಾರ್ಡ್ ರದ್ದು ಮಾಡಲಾಗಿದೆ. ಅಲ್ಲದೇ, ಸರ್ಕಾರಿ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಸಲ್ಲಿಕೆ ಮಾಡುತ್ತಿರುವವರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ ಭೂಮಿ, ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತಲೂ ವಿಸ್ತಾರವಾದ ಮನೆ ಹೊಂದಿರುವವರ ಕಾರ್ಡ್ ರದ್ದಾಗಲಿದೆ…
ಇದರೊಂದಿಗೆ ವಾರ್ಷಿಕ ಆದಾಯ 1 ಲಕ್ಷದ 20 ಸಾವಿರ ಇರುವವರ ಪಡಿತರ ಕಾರ್ಡ್ ರದ್ದು ಆಗಲಿದ್ದು, ಕಾರ್ಡ್ ವಾಪಸ್ ನೀಡದೆ ಇದ್ದರೆ ಅಗತ್ಯ ವಸ್ತುಗಳ ಕಾಯ್ದೆ 1955, IPC ಅಡಿ ಕಾನೂನು ಕ್ರಮದ ಜೊತೆ ದಂಡದ‌ ಎಚ್ಚರಿಕೆ ನೀಡಲಾಗಿದೆ.

About Author

Leave a Reply

Your email address will not be published. Required fields are marked *