day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕಾಫ಼ಿ ನಾಡ ದೊರೆ ನಮ್ಮನ್ನಗಲಿ ಇಂದಿಗೆ ಐದು ವರ್ಷ. – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

ಕಾಫ಼ಿ ನಾಡ ದೊರೆ ನಮ್ಮನ್ನಗಲಿ ಇಂದಿಗೆ ಐದು ವರ್ಷ.

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/
  • #ನಿರುತ್ತರವಾಗೇ_ಉಳಿದ_ಅದೊಂದು‌_ಆತ್ಮ.

ಕಳೆದ‌ ಬಾರಿಯ ಮಳೆ ಆರಂಭವಾಗಿದ್ದೇ ಜುಲೈನ ಕೊನೆಯ ದಿನಗಳಲ್ಲಿ.
ಮಳೆಗಿಂತ ಜೋರಿದ್ದಿದ್ದು ಮಲೆನಾಡಿಗರ ಕಣ್ಣೀರು.
ಕಾಫಿ ನಾಡ ದೊರೆಯೊಬ್ಬ ಹತಾಶೆಯಲ್ಲಿ ನೇತ್ರಾವತಿಗೆ ತನ್ನನ್ನೊಪ್ಪಿಸಿದ್ದ.
ಆ ನೋವಿಂದಲೋ ಏನೋ ಭೂತಾಯಿಯ ಒಡಲು ಮಲೆನಾಡ ಇತಿಹಾಸದಲ್ಲಿ ಕಂಡು ಕೇಳರಿಯದಂತೆ ಹಲವೆಡೆ ಭೂಕುಸಿತದೆಸರಲ್ಲಿ ಬಿರಿದು ಹೋಗಿತ್ತು
ಹತ್ತು ಹಲವು ಹತಾಶೆಗಳು ಸ್ವಾಭಿಮಾನವನ್ನು ಬದಿಗಿಡಲು ಬಿಡದೇ ಬದುಕನ್ನೇ ಬದಿಗಿಟ್ಟು ನೇತ್ರೆಯಲ್ಲಿ ಕೊನೆಯ ಬಾರಿ‌ ಉಸಿರಾಡಿದ್ದರು‌ #ಸಿದ್ದಾರ್ಥ.
ಎದೆಬಡಿತ ನಿಲ್ಲುವ ಮೊದಲು ಮೂಡಿದ ,ಕಾಡಿದ ಚಿಂತೆಗಳೇನು,ಅನುಭವಿಸಿದ ನೋವುಗಳೇನು,
ನಂಬಿದವರು ಮಾಡಿದ ಮೋಸಗಳ ಬಗ್ಗೆ ಮನದಾಳದ‌ ನಿಲುವುಗಳೇನು,ಖುದ್ದು ನೇತ್ರೆ ಮಾತ್ರ ಬಲ್ಲಳು.
ಮಳೆಯನಾಡಿನ‌ ಸಿರಿವಂತ ಹುಡುಗನೊಬ್ಬ ಜಾತಿ,ಧರ್ಮ,ಅಂತಸ್ತನ್ನು ಮೀರಿ ಲಕ್ಷಾಂತರ ಜನರ ಪಾಲಿನ ಆಶಾಕಿರಣವಾಗಿ ಬೆಳೆದು ಕಟ್ಟಿದೆಲ್ಲ ಸಾಮ್ರಾಜ್ಯವನ್ನು ಬಿಟ್ಟು ಕಾರಣ ಹೇಳದೆ ಮಡುವು ಗಟ್ಟಿದ್ದ ನೋವಿನೊಂದಿಗೆ ಸೃಷ್ಟಿಕರ್ತನೆಡೆಗೆ ಪಯಣ ಬೆಳೆಸಿದ್ದ.
ಹಾಗೇ ಅಸ್ತಂಗತವಾಗಿತ್ತು ಮಲೆನಾಡ ಸೂರ್ಯ.

ಕೆಫೆ ಕಾಫೀ ಡೇ
ಎಬಿಸಿ
ವೇ ಟು ವೆಲ್ತ್
ಸಿಕಾಲ್
ಡ್ಯಾಫ್ಕೋ
ಕೆಂಗೇರಿಯ 50 ಎಕರೆಯ ವಿಶಾಲ ಗ್ಲೋಬಲ್ ಟೆಕ್ನಾಲಜಿ ವಿಲೇಜ್
12000 ಎಕರೆ ಕಾಫೀ ತೋಟ
ಸೆರಾಯ್ ಮತ್ತು ಅಂಡಮಾನಿನ ಹ್ಯಾವ್ಲಾಕ್ ದ್ವೀಪದ ಬೇರ್ ಫೂಟ್ ರೆಸಾರ್ಟ್
ಫ್ರೆಂಚ್ ಗಯಾನದ ಟಿಂಬರು ತೋಟ…….
ಇವೊಂದಿಷ್ಟು ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು‌ ಪಡೆದ ಮಲೆನಾಡಿಗನ ಸಾಧನೆಯ ತುಣುಕುಗಳು ಅಸ್ಟೆ.

ಅಮೇರಿಕನ್ ದೈತ್ಯ ಸ್ಟಾರ್ ಬಕ್ಸ್ ಭಾರತಕ್ಕೆ ಬರುವ ಮೊದಲೇ ಭಾರತದಲ್ಲಿ ಕಾಫೀ ಕಲ್ಚರ್ ಅನ್ನು ಹುಟ್ಟುಹಾಕಿ ಅದಕ್ಕೊಂದು ದೇಶಿ ಟಚ್ಚನ್ನು ಕೊಟ್ಟವರು ಸಿದ್ದಾರ್ಥ.
1996 ರಲ್ಲಿ ಮೂಡಿದ ಸಿಸಿಡಿ ಅವರಿದ್ದಷ್ಟೂ ದಿನ ಸ್ಟಾರ್ ಬಕ್ಸ್ ಗಾಗಲಿ ಬರಿಸ್ತಾಗಾಗಲೀ ಸೈಡು ಹೊಡೆದುಕೊಂಡೇ ಇತ್ತು.
ಮಲೆನಾಡಿನ‌ ಅದೆಸ್ಟೋ ಇಂಗ್ಲೀಷು ಬಾರದ,ಅರ್ಧಂಭರ್ಧ ಓದಿದ ಯುವಕ/ಯುವತಿಯರು ಇಲ್ಲೆಲ್ಲಾ ತುಂಬಿಕೊಂಡು ಬದುಕು ಕಟ್ಟಿಕೊಳ್ಳಲು ನೆರವಾದವರು ಸಿದ್ದಾರ್ಥ.
ಅವರ ಹಲವಾರು ಕಂಪೆನಿಗಳಲ್ಲಿ ,ಕಾಫೀ ಎಸ್ಟೇಟುಗಳಲ್ಲಿ ಕನ್ನಡಿಗರು ವಿಶೇಷವಾಗಿ ಮಲೆನಾಡಿಗರು ಕಾಣಿಸಿಕೊಳ್ಳತೊಡಗಿದರು.
ತಾನು ಬೆಳೆದ ಊರಿನ ಬಗ್ಗೆ ಸಹಜವಾಗಿಯೇ ಎಂತವನಿಗೂ ಅದೆಂತಹದೋ ವಿಶೇಷ ಒಲವು ಇದ್ದೇ ಇರುತ್ತೆ.
ಆದರೆ ಬೆರಳೆಣಿಕೆಯಷ್ಟು ಮಂದಿ ಬಿಟ್ಟು ಮಿಕ್ಕವರೆಲ್ಲ ಅವರಿಗೆ ಮಾಡಿದ್ದು ಮೋಸವೇ.
ಅಂತಹ ಲಕ್ಷ ಲಕ್ಷ ಮೋಸಗಳ ಫಲವೇ ಸಿದ್ದಾರ್ಥನೆಂಬ ಸಿದ್ದಾರ್ಥ ನೇತ್ರೆಯ ಪಾಲಾಗಿದ್ದು.
ಅಣ್ಣ ಅಣ್ಣ ಎನ್ನುತ್ತಲೇ ಅವರ ಬೆನ್ನಿ ಗಿರಿ ದವರು ಸಾವಿರ ಸಾವಿರ ಮಂದಿ.
ಇದೆಲ್ಲ ಅವರಿಗೆ ಗೊತ್ತಿರಲಿಲ್ಲವೇನೆಂದಲ್ಲ.
ಅವರ ಕ್ಷಮಿಸಿ‌ ಸುಮ್ಮನಾಗುವ,ಗೊತ್ತಿದ್ದೂ ಗೊತ್ತಿಲ್ಲದಂತೆ ಇರುವ ವಿಶಾಲ‌ ಮನೋಭಾವ‌ ಅವರಿಗೆ ಮುಳುವಾಯ್ತಷ್ಟೆ.

ಆದರೆ ಬ್ಯುಸಿನೆಸ್ಸು ನಿಂತಿರೋದು ಒಳ್ಳೆಯತನವೊಂದರಿಂದ ಮಾತ್ರವಲ್ಲ.
ಉದ್ಯಮಿಯೊಬ್ಬನಿಗೆ ಎಸ್ಟು ಹಣವಿದ್ದರೂ ಕಮ್ಮಿಯೇ.
ಆತನ ಇನ್ವೆಸ್ಟುಮೆಂಟಿಗೆ ಬಂಡವಾಳ ಯಾವ ಮೂಲದಿಂದ ಬಂದರೂ ಸರಿಯೇ ಅದನ್ನು ವಾಪಾಸು ಪಡೆದೇ ಪಡೆಯುತ್ತೇನೆಂಬ ಹುಂಬತನ ಇರಲೇಬೇಕು.
ಪುಕ್ಕಲರಿಗೆ ಸಾಮ್ರಾಜ್ಯ ಕಟ್ಟಲು ಆಗುವುದೇ ಇಲ್ಲ.
ಉದ್ಯಮಿಯೊಬ್ಬ ಕೇವಲ ತನ್ನ‌ ಸಾಮ್ರಾಜ್ಯ ಕಟ್ಟಿಕೊಳ್ಳುವುದಿಲ್ಲ.
ಸಾವಿರಾರು ಜನರಿಗೆ ಉದ್ಯೋಗ ನೀಡಿರುತ್ತಾನೆ.
ಆರ್ಥಿಕ‌ ಒಳ,ಹೊರ ಹರಿವಿಗೆ ಕಾರಣನಾಗಿರುತ್ತಾನೆ.
ತೆರಿಗೆಯ ಮೂಲಕ ಸರ್ಕಾರದ ಆದಾಯದ ಮೂಲವಾಗಿರುತ್ತಾನೆ.
ಜಿಡಿಪಿಯಲ್ಲಿ ಅವನದೂ ಪಾತ್ರ ಇರುತ್ತೆ.
ಯಾವುದೇ ದೇಶವೊಂದರ ಏಳ್ಗೆಗೆ ಉದ್ಯಮಿಯ ಜರೂರತ್ತು ಇದ್ದೇ ಇರುತ್ತೆ.
ಆದರೆ ಬಂಡವಾಳಿಗರ ಮೋಸ,ಅಸಹಕಾರ,ಕಾನೂ‌ನು ಕಾಯ್ದೆಗಳ‌ ಅಸ್ತ್ರ,ನೌಕರರ ಮೋಸ,ಸೋರಿಕೆ,ಕೊಳ್ಳೆ ಹೊಡೆಯುವಿಕೆ,ರಾಜಕೀಯ ಅಸ್ತ್ರಗಳು,ಹೊಸದಾಗಿ ರೂಪುಗೊಳ್ಳುವ ಕಾಯ್ದೆಗಳು ಎಂಥಹ ಉದ್ಯಮವನ್ನೂ ಮಕಾಡೆ‌ ಮಲಗಿಸುತ್ತವೆ.
ಅದೊಂದು ಫೈನಾನ್ಷಿಯಲ್ ಡಿಸಿಪ್ಲೀನು.
ಹದ ತಪ್ಪಿದರೆ ಸೂತ್ರ,ದಾರ ಎರಡೂ ಇಲ್ಲವಾಗುತ್ತೆ.
ಕಾಫೀ‌ ದೊರೆ ಈ‌ ಸುಳಿಗೆ ಸಿಕ್ಕಿ ಹಾಕಿಕೊಂಡರಷ್ಟೆ.

ಉತ್ತರದ ನೀರವ್ ಮೋದಿ,ಲಲಿತ್ ಮೋದಿ ನಮ್ಮದೇ ರಾಜ್ಯದ ವಿಜಯ್ ಮಲ್ಯ ರಂತೆ ರಾತ್ರೋ ರಾತ್ರಿ ಫ್ಲೈಟು ಹತ್ತಿ‌ ವಿದೇಶದಲ್ಲಿರುವ ವಿಲ್ಲಾಗಳಲ್ಲಿ ವಿದೇಶಿ ಕಾನೂನಿನ‌ ಅಸ್ತ್ರದೊಂದಿಗೆ ಉಳಿದೆಲ್ಲ‌ ಸಮಯವನ್ನು ಐಷಾರಾಮಿಯಾಗೇ ಕಳೆದು ಬಿಡಬಹುದಿತ್ತು.
ಆದರೆ ಆತ ರೈತಕುಟುಂಬದ ಮಗ.
ಸ್ವಾಭಿಮಾನಿ,
ನಿಷ್ಕಪಟಿ
ಯಾರಿಗೂ ಯಾಮಾರಿಸಿ ಓಡಿಹೋಗಲಿಲ್ಲ.
ತಾನೇ ಬೆಳೆಸಿ ಬೆಳೆದು ನಿಂತ ಯುಧ್ದ ಭೂಮಿಯಲ್ಲೇ ವ್ಯವಸ್ಥೆಯ ಹಾಗೂ ತನ್ನವರ ವ್ಯವಸ್ಥಿತ ಮೋಸಕ್ಕೆ ಸಿಕ್ಕು ಮರ್ಯಾದೆಗೆ ಅಂಜಿ ಯಾರಿಗೂ ತಲೆಬಾಗಲಾರೆನೆಂದು‌ ನಿರ್ಧರಿಸಿ ಸಾವಿಗೆ ತಲೆಬಾಗಿದ ತ್ಯಾಗಿಯಾತ.
ಅವರದೇ ಸಾಲಿನಲ್ಲಿ ಹೇಳೋದಾದರೆ
“My Intention Was Never To Cheat Or Mislead Anybody,And I Have Failed As An Entrepreneur”

#ನಾನು_ಉದ್ಯಮಿಯಾಗಿ_ವಿಫಲನಾದೆ ಎಂದು ಶತಕೋಟಿಯ ಒಡೆಯನೊಬ್ಬ ಹೇಳಬೇಕೆಂದರೆ ಆತನೆಸ್ಟು ನೋವು ತಿಂದಿರಬೇಡ.
ಈಗ ಹೇಳಿ ಆತನ ಸಾವಿಗೆ ನೀವು ಕಾರಣರೆಷ್ಟು?
ಆತನ ಹತ್ತು ಹಲವು ಕಾಫೀ ಎಸ್ಟೇಟುಗಳಲ್ಲಿ ಸುಳ್ಳು ಲೆಕ್ಕ‌ ಕೊಟ್ಟು ಕಾಫೀ,ಮೆಣಸು,ಕಾರ್ಮಿಕರ ಲೆಕ್ಕದಲ್ಲಿ ದುಡ್ಡು ಹೊಡೆದವರ ಪಾಲೆಷ್ಟು?
ಅವರೆಸರಲ್ಲಿ ತೋಟ ಮಾಡಿಕೊಂಡು ಸತ್ತ ಮೇಲೆ‌ ಉಂಡೆನಾಮ‌ ಹಾಕಿದವರ ಪಾಲೆಷ್ಟು?
ಸಿಸಿಡಿ ಯಲ್ಲಿ ಗ್ರಾಹಕರಿಗೆ ಬಿಲ್ಲು ಕೊಡದೆ ಸಣ್ಣದಾಗೇ ದಿನಂಪ್ರತಿ ಯಾಮಾರಿಸುತ್ತ ಗಂಟು ಮಾಡಿಕೊಂಡವರೆಷ್ಟು?
ಉದ್ಯೋಗದ ಅರ್ಹತೆಯೆ ಇಲ್ಲದೆ ಯಾವುದೋ ವಾಮಮಾರ್ಗ ಹಿಡಿದು ಲಕ್ಷಗಳವರೆಗೆ ಮೈಂಡ್ ಟ್ರೀ ಯಿಂದ ಎಬಿಸಿ ವರೆಗೆ ನಿಮ್ಮ ಅರ್ಹತೆಗೂ ಮೀರಿ ಪಡೆದ ಸಂಬಳಗಳೆಷ್ಟು?
ಬೋನಸ್ಸುಗಳೆಷ್ಟು?
ಮುಂಡಾಯಿಸಿದ ದುಡ್ಡಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ,ವಿದೇಶಿ ಶಿಕ್ಷಣ,ಕೋಟಿ ಗಟ್ಟಲೆ ಮನೆ,ಬಂಗಲೆ,ಅದೆ ಮಕ್ಕಳಿಗೆ ಅವರದೇ ಕಂಪೆನಿಗಳಲ್ಲಿ ಕೆಲಸ ಕೊಡಿಸಿದವರೆಷ್ಟೋ?
ಡೊನೆಷನ್ನು‌ ಪಡೆದು, ಕೊಡಿಸಿ ಅವರ ಕೈ ಭಾರಕ್ಕೆ ಕಾರಣರಾದವರೆಷ್ಟು?
ಚುನಾವಣಾ ಸಮಯದಲ್ಲಿ ಅಣ್ಣ ಅಂತ ಕೈ ಕಾಲು ಹಿಡಿದು ಲಕ್ಷಗಟ್ಟಲೆ ಕೋಟಿಗಟ್ಟಲೆ ಮುಂಡಾಯಿಸಿದವರೆಷ್ಟು?
ಅವರ ರೆಸಾರ್ಟುಗಳಲ್ಲಿ ಉಚಿತವಾಗಿ‌ ಕುಡಿದು ತಿಂದು ಪೋಸು ಕೊಟ್ಟವರ ಪಾಪದ ಪಾಲೆಷ್ಟು?
ಅವರು ಕೊಟ್ಟ ಹೈ ಎಂಡ್ ಕಾರುಗಳಲ್ಲಿ ಐಷಾರಾಮಿಯಾಗಿ ಬದುಕಿದವರೆಷ್ಟು?
ಒಬ್ಬ ಐಎಎಸ್ ಅಧಿಕಾರಿಗೆ ಒಂದೋ ಒಂದುವರೆ ಲಕ್ಷ ತಿಂಗಳ ಪಗಾರಿರುವಾಗ ಕೆಲವು ಅಯೋಗ್ಯರಿಗೆ ತಿಂಗಳಿಗೆ ನಾಲ್ಕೈದು ಲಕ್ಷಗಟ್ಟಲೇ ಸಂಬಳವಂತೆ.
ಎಲ್ಲರೂ ಬದುಕಿದ್ದಾಗ ಚೆನ್ನಾಗೇ ಕೊಳ್ಳೆ ಹೊಡೆದರು.
ಜಿಗಣೆಯು ರಕ್ತ ಹೀರಿದಂತೆ.
ಸತ್ತ ಮೇಲೂ ಬಿಟ್ಟಿಲ್ಲ‌ ಬಿಡಿ.
ಸಿದ್ದಾರ್ಥ ಸತ್ತ ಮೇಲೆ ಅವರ ಒಡೆತನದ #ಡ್ಯಾಪ್ಕೋ ಪೀಠೋಪಕರಣಗಳ ಕಂಪನೆಯನ್ನು ಮಚ್ಚಲಾಯಿತು.
ಆಗ ಅಳಿದುಳಿದಿದ್ದ ಪೀಠೋಪಕರಣಗಳನ್ನು ವ್ಯವಸ್ಥಿತವಾಗಿ ಇದೇ ಇಂದ್ರಜಾಲದ ಮಂದಿಯೇ ಮತ್ತದೇ ಬಿಟ್ಟಿ ದರದಲ್ಲಿ ಮತ್ತದೆ ಬ್ರಾಂಡೆಡ್ ಬಟ್ಟೆ,ಬ್ರಾಂಡೆಡ್ ಕಾರುಗಳಲ್ಲಿ ಬಂದು ಕೊಳ್ಳೆ ಹೊಡೆದುಕೊಂಡು ಹೋದದ್ದನ್ನು‌ ಕಣ್ಣಾರೆ ನೋಡಿದ್ದೇನೆ.
ಕೆಲವರ ಸಂಸ್ಕಾರವೇ ಅಂತಹದ್ದು,ಬದುಕಿದ್ದಾಗಲೂ ಕಿತ್ತು ತಿನ್ನೋದು,ಸತ್ತ ಮೇಲೂ‌ ಇನ್ನೇನಾದರೂ‌ ತಿನ್ನಲು‌ ಸಿಗುತ್ತದೆಯಾ ಎಂದು ನೋಡುವುದು.
ಮಹಾಭಾರತದಲ್ಲಿ ಶ್ರೀ ಕೃಷ್ಣ ಹೇಳುವಂತೆ ಅಧರ್ಮದಿಂದಾಗಿ ಮನುಕುಲವೇ ನಾಶವಾಗಿ ಒಂದು ಮನ್ವಂತರವೇ ಬದಲಾಗದ ಹೊರತು ಇಂತಹವರು ಬದಲಾಗಲಾರರು.
ಎಲ್ಲವನ್ನೂ ಮೌನಿಯಾಗಿಯೇ ಬದುಕಿದ್ದಾಗ ಸಹಿಕೊಂಡರೆನೋ‌ ಸಿದ್ದಾರ್ಥ.

ಸಿದ್ದಾರ್ಥ ಇಸ್ಟ ಆಗುತ್ತಿದ್ದದ್ದು ಅವರ ಸರಳತೆಯಿಂದಾಗಿ.
ಪ್ರಚಾರದಿಂದ ಅವರು ಸದಾ ದೂರವೇ.
ಒಂದಷ್ಟು ನಾಚಿಕೆ ಸ್ವಭಾವದ ವ್ಯಕ್ತಿತ್ವ.
ಬಹಳಷ್ಟು ಜನ ಇವರನ್ನು ಮಾವ ಎಸ್ ಎಂ ಕೃಷ್ಣ ಪ್ರಭಾವದಿಂದಲೇ ಬೆಳೆದರೇನೋ ಎಂದುಕೊಂಡಿದ್ದಾರೆ.
ಖಂಡಿತಾ ತಪ್ಪು.
ಅವರ ಮೂಲ ಊರು‌ ಮೂಡಿಗೆರೆಯ ತನೂಡಿ ಕುಟುಂಬ ಆರ್ಥಿಕವಾಗಿ ಪ್ರಬಲವಾದದ್ದೇ.
ಬಯಲುಸೀಮೆಯ ಎಸ್ ಎಂ ಕೃಷ್ಣರಿಗೆ ಕಾಫೀ ಸಾಮ್ರಾಜ್ಯ ಕಟ್ಟುವ ಯೋಜನೆ ಯೋಚನೆ ಕನಸು ಮನಸಿನಲ್ಲೂ ಬಂದಿರಲಿಕ್ಕಿಲ್ಲ.
ಅದೇನಿದ್ದರೂ ಸಿದ್ದಾರ್ಥರ ಹಸಿವೆಂಬ ಸತತ ಪರಿಶ್ರಮದ ತಪಸ್ಸಿನ‌ ಫಲವಷ್ಟೆ.
ಆದರೆ ತಪಸ್ಸು ಮಾಡಿದವನು ಮಾತ್ರ ನಮ್ಮೊಂದಿಗಿಲ್ಲ.

ಸಿದ್ದಾರ್ಥರ ಅಂತಿಮ ಸಂಸ್ಕಾರದ ದಿನ ನೆರೆದಿದ್ದ ಜನಸ್ತೋಮ ಮತ್ತೊಮ್ಮೆ‌ ಚಿಕ್ಕಮಗಳೂರಿನಲ್ಲಿ ಎಂದಿಗೂ ಸೇರದು.
ಅಂದು ಸೇರಿದ್ದವರಲ್ಲಿ ಬಹುತೇಕರಿಗೆ ನೇರವಾಗಿ ಸಿದ್ದಾರ್ಥರಿಂದ ಯಾವುದೇ ಉಪಕಾರಗಳಾಗಿರಲಿಲ್ಲ.
ತಿಂದು ಉಂಡವರು‌ ಅಲ್ಲೂ ಮುಂಚೂಣಿಯಲ್ಲೇ ನಿಂತು‌ ಕಣ್ಣೀರು ಹಾಕಿ ಮಾಡಿದ ಪಾಪಕ್ಕೊ‌ದಿಷ್ಟು ಪ್ರಾಯಶ್ಚಿತ್ತ ಮಾಡಿಕೊಂಡಿರಬಹುದು.
ಆದರೆ ಸಿದ್ದಾರ್ಥರ ಪರಿಚಯವೇ ಇಲ್ಲದೆ ಅವರನ್ನು ಸ್ಪೂರ್ತಿಯ ಸೆಲೆಯಾಗಿ ನೋಡಿದ ನನ್ನಂತವರ ದುಃಖ ಹತಾಶೆ ಅವರ ಮತ್ತು‌‌ ಆ ಮೇರು ವ್ಯಕ್ತಿತ್ವದ ನಿಜವಾದ ಸಂಪಾದನೆ.
ಅದೊಂದು‌ ಭಾವುಕ ಮಿಲನವಷ್ಟೆ.
ಊರಿನ ಹೆಮ್ಮೆಯ ಪ್ರತೀಕವೊಂದರ ಅಕಾಲಿಕ ಮರಣದ ಅಂತರ್ಗತ ನೋವು.

ಸಿದ್ದಾರ್ಥರ ಅಂತಿಮ ದಿನಗಳು ಕಷ್ಟಕರವಾಗಿದ್ದವೇನೋ?
ಆದಾಯ ತೆರಿಗೆಯ ಬಾಲಕೃಷ್ಣನ್ ಬೆನ್ನು ಬಿದ್ದಿದ್ದ.
ಐಟಿ ಅಟ್ಯಾಚುಮೆಂಟುಗಳು ಇದ್ದ ಆಸ್ತಿಗಳ‌ ಮಾರಾಟಕ್ಕೆ ತಡೆಯಾಗಿಸಿದವು.
ಡೀ ಮಾನಿಟೈಸೇಷನ್ನು ಕೈ ಸಾಲ ಪಡೆದವರಿಂದ ದೊಡ್ಡ ಹೊಡೆತ ಕೊಟ್ಟಿತ್ತು.
ತಂದೆ ಗಂಗಯ್ಯ ಹೆಗ್ಗಡೆ ಕೋಮಾ‌ ಸೇರಿದ್ದರು.
ಆ ಪುಣ್ಯಾತ್ಮನಿಗೆ ಮಗ ಸತ್ತದ್ದೂ‌ ಗೊತ್ತಾಗಲೇ ಇಲ್ಲ.ಮಗನ ಸಾವು ಅರಿಯುವ ಸಂಕಟವೇ ಬಾರದಿರಲೆಂದು ಖುದ್ದು ಭಗವಂತನೇ ಕೋಮಾಗೆ ಹೋಗಿಸಿದ್ದನೇನೋ?
ಮಗ ತೀರಿಕೊಂಡ ಕೆಲವೇ ದಿನಗಳಿಗೆ ಆ ಹಿರಿಜೀವವೂ ಇಹಲೋಕ ತ್ಯಜಿಸಿತ್ತು.

ಜುಲೈ 29,2019 ಸಿದ್ದಾರ್ಥ ನೇತ್ರೆಯಲ್ಲಿ ಉಸಿರುಚೆಲ್ಲಿದ ದಿನ.
ಸರಳವಾಗಿ ಬಾಳಿ ಬದುಕಿ ಯಶಸ್ಸಿನ ಉತ್ತುಂಗಕ್ಕೇರಿದ ಅದ್ಭುತ ಪ್ರತಿಭೆಯೊಂದು
ನಂಬಿದವರ,ಆಶ್ರಯ ಕೊಟ್ಟವರ ಕೈಲಾಗದತನಕ್ಕೆ ಭಾವನಾತ್ಮಕ ಮೋಸಗಳಿಗೆ,ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದ ಎಥಿಕ್ಸುಗಳಿಗೆ ತನಗೆ ತಾನೇ ಶಿಕ್ಷೆ ಕೊಟ್ಟುಕೊಂಡು ಕರಗಿ ಅದೃಶ್ಯವಾಗಿ ಹೋಯಿತು.
ಮುಂಡಾಯಿಸಿದವರು ವರ್ಷಕ್ಕೊಂದು ದಿನ ಡಿಪಿ ಹಾಕಿಕೊಂಡೋ,ಪೋಸ್ಟರು ಬ್ಯಾನರು ಹಾಕಿಕೊಂಡೋ,ರಿಪ್ ಎಂದುಕೊಂಡೋ,ಮತ್ತೆ ಹುಟ್ಟಿ ಬನ್ನಿ‌ ಅಂತಲೋ ರಾಜಾಡವ್ವುಗಳನ್ನ ಮಾಡುತ್ತಲೇ ಇರುತ್ತಾರೆ.
ಸಿಸಿಡಿಯ ಸಣ್ಣ ಪುಟ್ಟ ಕಳ್ಳರನ್ನು ಕ್ಷಮಿಸಿಬಿಡೋಣ.
ಬಡತನ,ಹಸಿವು,ಆರ್ಥಿಕ‌ ಅಗತ್ಯತೆಗಳಾದಾರಿತವಾಗಿ ಸಮಾಜದ ದೌರ್ಬಲ್ಯಗಳನ್ನು ಸಿದ್ದಾರ್ಥರ ಮೂಲಕ‌ ನೀಗಿಸಿಕೊಂಡಿದ್ದಿರಬಹುದು.ಅದನ್ನು ಸಿದ್ದಾರ್ಥ ಗೊತ್ತಿದ್ದೂ ಬದುಕಲಿ ಎಂದು ಬಿಟ್ಟಿರಲೂ ಬಹುದು.
ಆದರೆ ಲಕ್ಷ ಲಕ್ಷ ಕೋಟಿ ಕೋಟಿ ಮುಂಡಾಯಿಸಿದವರನ್ನು ಮಾತ್ರ ಧರ್ಮ‌ ಯಾವತ್ತೂ ಕ್ಷಮಿಸದೇ ಇರಲಿ.
ಶೀಘ್ರವಾಗಿ ಅವರಿಗೂ ಆ ಪಾಪದ ಫಲ ತಟ್ಟಲಿ.
ಅವರಿಗೊಂದು ಕನಸಿತ್ತು.
ಸಂಪೂರ್ಣ ಕ್ಯಾಷ್ ಕೌಂಟರ್ ಲೆಸ್ ಆಸ್ಪತ್ರೆಯನ್ನು ಬಡವರಿಗಾಗಿ ಕಟ್ಟಿಸೋದು.
ಅದರ‌ ಸಿವಿಲ್ ವರ್ಕ್ ಚಿಕ್ಕಮಗಳೂರು ಬಳಿಯ ಆ್ಯಂಬರ್ ವ್ಯಾಲಿ ರೆಸಿಡೆನ್ಷಿಯಲ್ ಸ್ಕೂಲ್ ಬಳಿ ಮುಕ್ತಾಯವಾಗಿತ್ತು.
ಅವರ ಮರಣಾನಂತರ ಅದು‌ ಸ್ಥಗಿತಗೊಂಡಿದೆ.
ಅವರಿಗೆ ಮೋಸ‌ಮಾಡಿದ ಮಹನೀಯರು,ಅವರಿಂದ ತಿಂದು‌ ಉಂಡು ಕೋಟಿ‌ ಕೋಟಿ‌ ಪೀಕಿದ ಗಣ್ಯರೆಲ್ಲ ಸೇರಿ‌ ಪೋಸ್ಟರ್,ಡಿಪಿ,ಹಾಕೋದರ ಬದಲು ಆ ಆಸ್ಪತ್ರೆಯನ್ನಾದರೂ‌ ಪೂರ್ಣಗೊಳಿಸಿ ನಿಮ್ಮ‌ ಪಾಪಗಳನ್ನೊಂಚೂರು ಕಮ್ಮಿ‌ಮಾಡಿಕೊಳ್ಳಿ.
ಆತನದೊಂದಾದರೂ‌ ಕನಸು ನಿಮ್ಮಗಳಿಂದ ಈಡೇರಲಿ.

ಮತ್ತೆ ಹುಟ್ಟಿ ಬರಬೇಡಿ ಸರ್.
ನಿಮ್ಮಂತವರಿಗಲ್ಲ ಈ‌ ನಾಡು.
ಮತ್ತೆ ತಿನ್ನಲೇನೋ‌ ಸಿಗುತ್ತೆ ಅಂತ ಕಾಯ್ತಾ ಕೂತಿದ್ದಾರೆ.
ನೀವು‌ ನಿರುತ್ತರರಾಗೇ ಇರಿ.
ಅದೇ ಚೆಂದ,ಅದೇ ಶೋಭೆ………

ಮಿಸ್ ಯು‌ ಸರ್

#ಮಗ್ಗಲಮಕ್ಕಿ_ದಿವಿನ್

About Author

Leave a Reply

Your email address will not be published. Required fields are marked *