लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ* *ದೇಶದಲ್ಲಿ ವಿಶ್ವಮಾನತೆ ಪರಿಕಲ್ಪನೆ ಮೂಡುವ ವಾತಾವರಣ ನಿರ್ಮಾಣವಾಗಬೇಕು: ನಿಕೇತ್‌ರಾಜ್ ಮೌರ್ಯ*..ಮೂಡಿಗೆರೆ..

1 min read

*208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ*

*ದೇಶದಲ್ಲಿ ವಿಶ್ವಮಾನತೆ ಪರಿಕಲ್ಪನೆ ಮೂಡುವ ವಾತಾವರಣ ನಿರ್ಮಾಣವಾಗಬೇಕು: ನಿಕೇತ್‌ರಾಜ್ ಮೌರ್ಯ*

ಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕೆಂದರೆ ಪ್ರತಿಯೊಬ್ಬರೂ ಎಲ್ಲಾ ಜಾತಿ, ಧರ್ಮದ ಜನರನ್ನು ಗೌರವಿಸಬೇಕು. ಸ್ವಾಭಿಮಾನಕ್ಕೆ ಧಕ್ಕೆ, ಅಗೌರವ, ಅನ್ಯಾಯ ಎದುರಾದಾಗ ಅದನ್ನು ವಿರೋಧಿಸಬೇಕೆಂದು ಕರ್ನಾಟಕ ಸರಕಾರದ ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್ ಮೌರ್ಯ ಹೇಳಿದರು.

ಅವರು ಭೀಮಾ ಕೋರೆಗಾಂವ್ ಆಚರಣೆ ಸಂಘದ ವತಿಯಿಂದ ಶುಕ್ರವಾರ ಸಂಜೆ ಮೂಡಿಗೆರೆ ಪಟ್ಟಣದ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಏರ್ಪಡಿಸಿದ್ದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ದೇಶದಲ್ಲಿ ಅವಿದ್ಯಾವಂತರು ಹಾಗೂ ಅಸಮಾನತೆಯಿಂದ ಕೂಡಿರಬೇಕೆಂಬ ವಿಕೃತ ಮನೋಭಾವ ಇರುವವರು ಮಾತ್ರ ಸಂವಿಧಾನ ಬದಲಾಯಿಸುತ್ತೇವೆಂದು ಹೇಳುತ್ತಿದ್ದಾರೆ. ಇಂತಹ ಮನಸ್ಥಿತಿಯಳ್ಳವರಿಂದ ಸಾಮರಸ್ಯ ಮೂಡಲು, ಸಮಾಜ ಬದಲಾಗಲು ಎಂದಿಗೂ ಸಾಧ್ಯವಿಲ್ಲ. ಬುದ್ಧ, ಬಸವಣ್ಣ, ಕನಕದಾಸ, ಬ್ರಹ್ಮಶ್ರೀ ನಾರಾಯಣ ಗುರು, ಕುವೆಂಪು ಇವರೆಲ್ಲರೂ ಅಸಮಾನತೆ, ಜಾತಿ ವಿರುದ್ಧ ಧ್ವನಿ ಎತ್ತಿದವರು. ಇಂತಹ ನೆಲದಲ್ಲಿ ಜಾತಿ, ಕೂಮುವಾದ ದೊಡ್ಡ ವಿಷವಾಗಿ ಬೆಳೆದು ನಿಂತಿದೆ. ಇದಕ್ಕೆ ಅಂತ್ಯ ಕಾಣಬೇಕೆಂದರೆ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕೆಂದು ಹೇಳಿದರು.

ಡಿಜೆ ಹಾಕಿ ಕುಣಿಯುವುದು ಹಾಗೂ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸುವುದರಿಂದ ಈ ಸಮಾಜ ಹಾಗೂ ದೇಶ ಬದಲಾವಣೆಯಾಗುವುದಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಮೆಯಲ್ಲಿಲ್ಲ. ಬದಲಾಗಿ ಪುಸ್ತಕದಲ್ಲಿದ್ದಾರೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈಗಿನ ಯುವ ಪೀಳಿಗೆಗೆ ಬೇಡದ ವಿಚಾರವನ್ನು ತಲೆಗೆ ತುಂಬಲಾಗುತ್ತಿದೆ. ಎಲ್ಲರಿಗೂ ಸಮಾನ ಗೌರವ, ಹಕ್ಕು, ಅವಕಾಶಗಳು ದೊರಕಬೇಕು. ಜಾತಿ, ಧರ್ಮ, ಲಿಂಗ, ಭಾಷೆ, ವರ್ಗ, ಬೇಧ, ಭಾವ ಬಿಟ್ಟು ಸಮಾನತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟ ಸಂವಿಧಾನವನ್ನು ಮಕ್ಕಳ ತಲೆಗೆ ತುಂಬಬೇಕು. ಆಗ ಮಾತ್ರ ದೇಶದಲ್ಲಿ ವಿಶ್ವಮಾನತೆ ಪರಿಕಲ್ಪನೆ ಮೂಡಲು ಸಾಧ್ಯವೆಂದು ಹೇಳಿದ ಅವರು, ಭೀಮ ಕೋರೆಂಗಾವ್ ವಿಜಯೋತ್ಸವದ ಬಗ್ಗೆ ಮಾಹಿತಿ ನೀಡಿದರು.

ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು.
ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಡಿಜೆ ಮತ್ತು ವಿವಿಧ ಕಲಾ ತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮಾ ಕೋರೆಗಾಂವ್ ಆಚರಣೆ ಸಂಘದ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ ವಹಿಸಿದ್ದರು.
ಡಿಎಸ್‌ಎಸ್ ಅಂಬೇಡ್ಕರ್ ಧ್ವನಿ ರಾಜ್ಯಾಧ್ಯಕ್ಷೆ ವಸಂತಕುಮಾರಿ, ಸಂಘದ ಗೌರವಾಧ್ಯಕ್ಷೆ ಸಾವಿತ್ರಿ, ಕಾರ್ಯದರ್ಶಿ ಸುಂದ್ರೇಶ್ ಹೊಯ್ಸಳಲು, ಪ.ಪಂ. ಮಾಜಿ ಸದಸ್ಯ ಹಂಝಾ, ಮುಖಂಡರಾದ ಡಾ.ಶಿವಪ್ರಸಾಧ್, ಅಂಗಡಿ ಚಂದ್ರು, ಮದ್ವರಾಜ್‌ಗೌಡ, ಪ್ರಸನ್ನ ಮರಗುಂದ, ಎಲ್.ಬಿ.ರಮೇಶ್, ಜಗದೀಶ್ ಕೆಳಗೂರು, ದೇವರಾಜ್, ಎಚ್.ಚಂದ್ರೇಶ್ ಸೇರಿದಂತೆ ಸಂಘದ ನಿರ್ದೇಶಕರು, ಸರ್ವ ಸದಸ್ಯರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed