day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ದೀಪಾವಳಿ – 2020 ಗಾಗಿ 1980 ರ ಶೈಲಿಗೆ ವಸ್ತ್ರ ವಿನ್ಯಾಸಗಳು: ಸಮುದ್ರಿಕ ಡಿಸೈನರ್ ಸ್ಟುಡಿಯೋದಲ್ಲಿ ವಸ್ತ್ರ avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ದೀಪಾವಳಿ – 2020 ಗಾಗಿ 1980 ರ ಶೈಲಿಗೆ ವಸ್ತ್ರ ವಿನ್ಯಾಸಗಳು: ಸಮುದ್ರಿಕ ಡಿಸೈನರ್ ಸ್ಟುಡಿಯೋದಲ್ಲಿ ವಸ್ತ್ರ avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ದೀಪಾವಳಿ – 2020 ಗಾಗಿ 1980 ರ ಶೈಲಿಗೆ ವಸ್ತ್ರ ವಿನ್ಯಾಸಗಳು: ಸಮುದ್ರಿಕ ಡಿಸೈನರ್ ಸ್ಟುಡಿಯೋದಲ್ಲಿ ವಸ್ತ್ರ ವೈವಿಧ್ಯ: ಲಂಗಾ ದಾವಣಿಯ ಮೆರಗು

ಬೆಂಗಳೂರು, ; ವಿಶೇಷ ಸಂದರ್ಭಗಳಲ್ಲಿ ಭಾರತೀಯ ಸಾಂಪ್ರದಾಯಿಕ ಉಡುಪುಗಳನ್ನು ಹೆಚ್ಚಿನವರು ಆಯ್ಕೆ ಮಾಡುತ್ತಾರೆ. ವಿಶೇಷ ದಿನಗಳಲ್ಲಿ, ಹಬ್ಬದ ಸಂದರ್ಭಗಳಲ್ಲಿ ಅನೇಕ ಜನ ಸಂಪ್ರದಾಯದ ಧಿರಿಸು ಧರಿಸಲು ಬಯಸುತ್ತಾರೆ. ಈ ದೀಪಾವಳಿ ಹಬ್ಬದ ಸಂದರ್ಭಕ್ಕಾಗಿ ಸಮುದ್ರಿಕ ಡಿಸೈನರ್ ಸ್ಟುಡಿಯೋ ಸಾಂಪ್ರದಾಯಿಕ ಉಡುಪುಗಳ ಸಂಗ್ರವಹನ್ನು ತೆರೆದಿಟ್ಟಿದೆ. ಇಂತಹ ವಿನೂತ ವಸ್ತ್ರಗಳನ್ನು ಪ್ರತಿಯೊಬ್ಬರೂ ಒಮ್ಮೆಯಾದರೂ ಧರಿಸಲು ಇಷ್ಟಪಡುತ್ತಾರೆ. ಹೌದು…. ಇದು ಹಾಫ್ ಸೀರೆ…ಅಂದರೆ ಲಂದ ದಾವಣಿ ಮಾದರಿ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಜನಪ್ರಿಯವಾದ ವಿನ್ಯಾಸ. ಇಂತಹ ಸಾಂಪ್ರದಾಯಿಕ ಹಾಪ್ ಸ್ಯಾರಿಗಳು ಈಗಲೂ ಇಲ್ಲಿನವರಿಗೆ ಅಚ್ಚು ಮೆಚ್ಚು.

ಹಾಫ್ ಸೀರೆ… ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಾಂಪ್ರದಾಯಿಕ ಗೆಟ್‌ಅಪ್‌ನ ಜತೆಗೆ ಆಹ್ಲಾದಕರ ಅನುಭವ ನೀಡುತ್ತದೆ. ಬಾಲ್ಯದ ನಿಲುವಂಗಿಗಳು, ಸ್ಕರ್ಟ್‌ಗಳ ನಡುವೆ ಸೀರೆ ಉಡುವುದು ವಿಶೇಷತೆಯಾಗಿದೆ. ಇದೊಂದು ಪ್ಯಾಷನ್ ಟ್ರೆಂಡ್ ಸಹ ಆಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ಬಹುಪಾಲು  ವಿವಾಹಗಳು ಮತ್ತು ಮದುವೆ ನಿಶ್ಚಿತಾರ್ಥಗಳಲ್ಲಿ, ವಧುಗಳು ಈ ಅರ್ಧ ಸೀರೆಗಳನ್ನು ಒಮ್ಮೆಯಾದರೂ ಧರಿಸಲು ಇಷ್ಟಪಡುತ್ತಾರೆ.

 

ಇಷ್ಟರಲ್ಲೇ ಮದುವೆಯಾಗುವವರು ಅಥವಾ ನಿಕಟ ಸಂಬಂಧಿ ಅಥವಾ ಸ್ನೇಹಿತರ ಮದುವೆ ಕಾರ್ಯಗಳಲ್ಲಿ ಪಾಲ್ಗೊಂಡಾಗ ನಿಮ್ಮ ಉಪಸ್ಥಿತಿಗೆ ವಿಶೇಷ ಆಕರ್ಷಣೆಯ ಮೆರಗು ನೀಡಲಿದೆ.   ಮೀನು ಸರವಣನ್-ಸಮುದ್ರಕಾಸ್ ಡಿಸೈನರ್ ಸ್ಟುಡಿಯೋದಲ್ಲಿ ಸುಂದರವಾಗಿ ವಿನ್ಯಾಸಗೊಳಿಸಲಾದ ಸಂಗ್ರಹಗಳಲ್ಲಿ ಹಾಫ್ ಸೀರೆ, ವಿವಿಧ ಮಾದರಿಯ ವಸ್ತ್ರಗಳು ಆಕರ್ಷಣನೀಯವಾಗಿವೆ.

ಸಾಂಪ್ರದಾಯಿಕ ಮತ್ತು ಎಂದೆಂದಿಗೂ ಆಕರ್ಷಕವಾದ ಅರ್ಧದಷ್ಟು ಸೀರೆಗಳನ್ನು ಈ ದಿನಗಳಲ್ಲಿ ಪ್ರತಿಯೊಬ್ಬ ಹೆಣ್ಣುಮಕ್ಕಳು ಇಷ್ಟಪಡುತ್ತಾರೆ. ಕನಿಷ್ಠ ಆಭರಣಗಳನ್ನು ಧರಿಸಿದ್ದರೂ ಸಹ ಸರಿಯಾದ ಬಣ್ಣ, ವಸ್ತು ಸಂಯೋಜನೆಯೊಂದಿಗೆ ಧರಿಸುವ ಧಿರಿಸುಗಳು ಮನಮೋಹಕವಾಗಿರುತ್ತದೆ.

ಹಾಪ್ ಸೀರೆಗಳು ಸಾಮಾನ್ಯವಾಗಿ ವಿಶಾಲವಾದ ದೇವಾಲಯದ ಗಡಿಗಳನ್ನು ಹೊಂದಿರುತ್ತವೆ ಮತ್ತು ಹೆಂಗಸರು ತಮ್ಮ ಶ್ರೀಮಂತ ಆಭರಣಗಳನ್ನು ಈ ಸಾಂಪ್ರದಾಯಿಕ ಉಡುಪುಗಳೊಂದಿಗೆ ಜೋಡಿಸಲು ಇಷ್ಟಪಡುತ್ತಾರೆ. ಮನಮೋಹಕ ಫ್ಯಾಷನ್ ಜಗತ್ತಿನಲ್ಲಿ ಸ್ಕರ್ಟ್ ವಿನ್ಯಾಸಗಳಲ್ಲಿ, ಹರಡುವ, ಅರಳುವ, ಸಂತಸ ಉಂಟು ಮಾಡುವ ಹೂವಿನ ವಿನ್ಯಾಸಗಳು ಮುಂತಾದವುಗಳಲ್ಲಿ ಬಹಳಷ್ಟು ವೈವಿಧ್ಯತೆಯನ್ನು ಕಾಣಬಹುದು.

ಈ ಅರ್ಧ ಸೀರೆಗಳ ಲೆಹೆಂಗಾ ಅಥವಾ ಸ್ಕರ್ಟ್ ಭಾಗವು ವಿಶಾಲ ಗಡಿಗಳೊಂದಿಗೆ ಆಕರ್ಷಕವಾಗಿ ಕಾಣುತ್ತದೆ. ಹೂವಿನ ವಿನ್ಯಾಸದ ಅರ್ಧ ಸೀರೆಯನ್ನು ಹಗಲಿನ ವೇಳೆಯಲ್ಲಿ ನಡೆಯುವ ವಿವಾಹ ಕಾರ್ಯಗಳಲ್ಲಿ ತೊಡಲು ಆದ್ಯತೆ ನೀಡಲಾಗುತ್ತದೆ. ವ್ಯಕ್ತಿಯ ಶೈಲಿಯ ಅಭಿರುಚಿಯನ್ನು ಆಧರಿಸಿ, ಒಬ್ಬೊಬ್ಬರು ವಿಭಿನ್ನ ಬಣ್ಣದ ಸ್ಕರ್ಟ್, ಕುಪ್ಪಸ ಮತ್ತು ದುಪಟ್ಟಾವನ್ನು ಆಯ್ಕೆ ಮಾಡಬಹುದು ಅಥವಾ ಈ ಮೂರೂ ಒಂದೇ ಬಣ್ಣ ಮತ್ತು ಮಾದರಿಯೊಂದಿಗೆ ಬಹುಕಾಂತೀಯ ಏಕವರ್ಣದ ವಸ್ತ್ರಗಳನ್ನು ಉಟ್ಟುಕೊಳ್ಳಬಹುದು.

ಈ ದಿನಗಳಲ್ಲಿ ಟ್ರೆಂಡಿಂಗ್, ಸಾಂಪ್ರದಾಯಿಕ ಅಥವಾ ಸರಳ ಉಡುಪಿನ ವ್ಯಾಮೋಹ ಹೆಚ್ಚಾಗಿದೆ. ಆದ್ದರಿಂದ ಇತ್ತೀಚಿನ ಅರ್ಧ ಸೀರೆ ವಿನ್ಯಾಸಗಳನ್ನು ಅಂತರ್ಜಾಲದಲ್ಲಿ ಹೆಚ್ಚು ಜಾಲಾಡುವುದನ್ನು ನಾವು ನಾವು ನೋಡುತ್ತೇವೆ. ಇವು ಹೆಚ್ಚು ಸಂಭ್ರಮ ತರುತ್ತವೆ. ಸೌಂದರ್ಯ ಹೆಚ್ಚಿಸುತ್ತವೆ. ಹಬ್ಬದ ಸಂಪ್ರದಾಯಕ್ಕೆ ಮೆರಗು ನೀಡುತ್ತವೆ.

ಚಿತ್ರ ಶೀರ್ಷಿಕೆ: “ದೀಪಾವಳಿ -2020 ಗಾಗಿ 1980 ರ ಶೈಲಿಗೆ ಹಿಂತಿರುಗಿ” – ಮೀನು ಸರವಣನ್ ವಿನ್ಯಾಸಗೊಳಿಸಿದ್ದಾರೆ

About Author