day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕವಿ ವಿ.ಸಿ.ಐರಸಂಗ ಹಾಗೂ ಪತ್ರಕರ್ತ ರವಿ ಬೆಳಗೆರೆ ನಿಧನ: ಸಚಿವರಾದ ಶೆಟ್ಟರ್ ಸಂತಾಪ avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಕವಿ ವಿ.ಸಿ.ಐರಸಂಗ ಹಾಗೂ ಪತ್ರಕರ್ತ ರವಿ ಬೆಳಗೆರೆ ನಿಧನ: ಸಚಿವರಾದ ಶೆಟ್ಟರ್ ಸಂತಾಪ avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕವಿ ವಿ.ಸಿ.ಐರಸಂಗ ಹಾಗೂ ಪತ್ರಕರ್ತ ರವಿ ಬೆಳಗೆರೆ ನಿಧನ: ಸಚಿವರಾದ ಶೆಟ್ಟರ್ ಸಂತಾಪ

ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ನ.13:

ಧಾರವಾಡ ಹೆಸರಾಂತ ಕವಿ ವಿ.ಸಿ.ಐರಸಂಗ ಹಾಗೂ ನಾಡಿನ ಪ್ರಸಿದ್ಧ ಪತ್ರಕರ್ತ ರವಿ ಬೆಳಗೆರೆ ಅವರ ನಿಧನಕ್ಕೆ ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ದಶಕಗಳಿಂದ ಆಕಾಶವಾಣಿ ಮೂಲಕ ಕೇಳುಗರಿಗೆ ಪರಿಚಿತರಾಗಿರುವ ಕವಿ  ವಿ.ಸಿ‌.ಐರಸಂಗ ಅವರು ಸಹೃದಯರ ಮನ ಗೆದ್ದಿದ್ದರು. ಪ್ಯಾಕೆಟ್ ಪುಸ್ತಕಗಳನ್ನು ಸೈಕಲ್ ಮೂಲಕ ಮಾರಾಟ ಮಾಡುತ್ತ, ಮಲ್ಲಕಂಬದಲ್ಲಿಯೂ ಸಾಧನೆ ಮಾಡುತ್ತ ಮಾದರಿ ಬದುಕು ನಡೆಸಿದ್ದರು.

ಪತ್ರಕರ್ತ ರವಿ ಬೆಳಗೆರೆ ಅವರು ಬಳ್ಳಾರಿಯಲ್ಲಿ ಜನಿಸಿ, ಧಾರವಾಡದಲ್ಲಿ ಉನ್ನತ ಶಿಕ್ಷಣ ಪಡೆದು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಹಲವು ದಶಕಗಳ ಸೇವೆಗೈದು , ಹಾಯ್ ಬೆಂಗಳೂರ್ ಪತ್ರಿಕೆ ಮೂಲಕ ನಿರ್ಭೀತ ಪತ್ರಿಕೋದ್ಯಮ ಮುಂದುವರೆಸಿ, ಪತ್ರಿಕೆ,ಸಾಹಿತ್ಯ, ಸಂಗೀತ, ಕಲೆ ಎಲ್ಲವುಗಳ ಆಳ ಜ್ಞಾನ, ಆಕರ್ಷಕ ಅಭಿವ್ಯಕ್ತಿ ಶೈಲಿ  ಹೊಂದಿದ್ದರು.

ಈ ಇಬ್ಬರೂ ಮಹನೀಯರ ನಿಧನ ನಾಡಿಗೆ ಉಂಟಾಗಿರುವ ದೊಡ್ಡ ನಷ್ಟವಾಗಿದೆ. ಅವರ ಕುಟುಂಬ ,ಅಭಿಮಾನಿಗಳು, ಓದುಗರಿಗೆ ಈ ದುಃಖ ಸಹಿಸುವ ಶಕ್ತಿ ಬರಲಿ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ

About Author