day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಎಲ್ಲಾ ವರ್ಗದ ಜನರ ಕಷ್ಟಕ್ಕೆ ಸ್ಪಂದಿಸುವುದೇ ಕರಾವಳಿ ಮಲೆನಾಡು ಜನಪರ ಒಕ್ಕೂಟದ ಗುರಿ : ಸುಧೀರ್‌ಕುಮಾರ್ ಮರೋಳ್ಳಿ.” – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

“ಎಲ್ಲಾ ವರ್ಗದ ಜನರ ಕಷ್ಟಕ್ಕೆ ಸ್ಪಂದಿಸುವುದೇ ಕರಾವಳಿ ಮಲೆನಾಡು ಜನಪರ ಒಕ್ಕೂಟದ ಗುರಿ : ಸುಧೀರ್‌ಕುಮಾರ್ ಮರೋಳ್ಳಿ.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಪಕ್ಷಾತೀತವಾದ ಸಂಘಟನೆ ಮೂಲಕ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಅಕ್ಟೋಬರ್ 31ರಂದು ವಿಜಯನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಎಲ್ಲಾ ಸರ್ವ ಪಕ್ಷ ಹಾಗೂ ಎಲ್ಲಾ ಸಂಘಟನೆ ಮುಖಂಡರನ್ನೊಳಗೊಂಡ ಸಭೆ ನಡೆಸಿ, ನೀಲನಕ್ಷೆ ತಯಾರಿಸಿ ಶಾಶ್ವತವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಾಗುವುದು ಎಂದು ಕರಾವಳಿ ಮಲೆನಾಡು ಜನಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್‌ಕುಮಾರ್ ಮರೋಳ್ಳಿ ಹೇಳಿದರು.

ಅವರು ದಿನಾಂಕ 14/10/2023ರ ಶನಿವಾರದಂದು ವಾಹಿನಿಯೊಂದಿಗೆ ಮಾತನಾಡಿ, ಈ ಹಿಂದೆ ಮಲೆನಾಡು ಜನಪರ ಒಕ್ಕೂಟ ಸ್ಥಾಪನೆ ಮಾಡಿ ಅದರಿಂದ ಜನರ ಸಮಸ್ಯೆಗಳ ನಿವಾರಣೆಗೆ ಅನೇಕ ಹೋರಾಟ ನಡೆಸಲಾಗಿತ್ತು. ಇದನ್ನು ಈಗ ವಿಸ್ತರಣೆ ಮಾಡುವ ದೃಷ್ಟಿಯಿಂದ ಮಂಗಳೂರು ಹೆದ್ದಾರಿಯ ಬಲಭಾಗ ಕರಾವಳಿ ಹಾಗೂ ಎಡಭಾಗ ಸಹ್ಯಾದ್ರಿ ಶ್ರೇಣಿ ಮಲೆನಾಡು ಪ್ರದೇಶವಾಗಿರುವ ಚಿಕ್ಕಮಗಳೂರು,ಉಡುಪಿ, ಶಿವಮೊಗ್ಗ,ಹಾಸನ,ಕೊಡಗು ಭಾಗದ ಜನರ,ಕೂಲಿ ಕಾರ್ಮಿಕರ,ಬೆಳೆಗಾರರ ಸಮಸ್ಯೆ ಬಗೆಹರಿಸಲು ಕರಾವಳಿ ಮಲೆನಾಡು ಜನಪರ ಒಕ್ಕೂಟ ಹುಟ್ಟುಹಾಕಲಾಗಿದೆ ಎಂದು ಹೇಳಿದರು.

ಎಲ್ಲಾ ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಕನಿಷ್ಟ 200 ಕುಟುಂಬಕ್ಕೆ ನಿವೇಶನ ಒದಗಿಸಲು,ರೈತರ ಸಮಸ್ಯೆ, ಕರಾವಳಿ ಭಾಗದ ಮೀನುಗಾರರ ಸಮಸ್ಯೆ,ಸಾರಿಗೆ ವಾಹನ ಚಾಲಕರ,ಆಟೋ ಚಾಲಕರ,ಕೂಲಿ ಕಾರ್ಮಿಕರ ಸಮಸ್ಯೆ ಅರಿತಿದ್ದೇವೆ. ಧಾರವಾಡ,ಕುಲ್ಬರ್ಗಿಯಲ್ಲಿ ಹೈಕೋರ್ಟ್ ಪೀಠವಿದ್ದು,ಈ ಭಾಗದಲ್ಲೂ ಹೈಕೋರ್ಟ್ ಪೀಠದ ಅವಶ್ಯಕತೆಯಿದೆ. ಜನರ ಬದುಕು,ಭಾವನೆಯ ಪ್ರಶ್ನೆ ಬಂದಾಗ,ಬದುಕು ರೂಪಿಸಿಕೊಳ್ಳುವುದು ಮುಖ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ವಿಜಯನಗರದಲ್ಲಿ ನಡೆಯವ ಒಕ್ಕೂಟದ ಸಭೆಗೆ ರೈತರು, ನಿವೃತ್ತ ಪ್ರೊಫೆಸರ್ ಗಳು,ವಕೀಲರು,ಸರ್ವ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಯ ಪ್ರಜ್ಞಾವಂತ ಮುಖಂಡರು ಆಗಮಿಸಲಿದ್ದು, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರಮಿಸಲಾಗುವುದು ಎಂದು ಹೇಳಿದರು.

ಒಕ್ಕೂಟದ ಸಂಚಾಲಕರಾದ ಅನಿಲ್ ಹೊಸಕೊಪ್ಪ, ಡಿ.ಎಂ.ಸಂದೀಪ್, ಮುಖಂಡರಾದ ಬಿಎಸ್.ಜಯರಾಮ್ ಗೌಡ, ಎಚ್.ಜಿ.ಸುರೇಂದ್ರಗೌಡ, ಕಲ್ಪನಾ ಶ್ರೀನಿವಾಸ್,ನವೀನ್ ಮಾವಿನಕಟ್ಟೆ,ಸುಬ್ರಾಯಗೌಡ, ಸಂಪತ್ ಬಿಳಗುಳ,ನವೀನ್ ಕರಾವಳಿ,ಉಮರ್ ಬಣಕಲ್, ದೀಕ್ಷಿತ್ ಕಣಚೂರು, ಸಂತೋಷ್,ವಿಜಂತೇಶ್‌ಶೆಟ್ಟಿ, ಶುಭಕೃತ್ ಹೆಗಡೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *