day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗ ಸೂಚಿ ಬೆಲೆಗಳು ಪರಿಷ್ಕರಣೆ : ಆಕ್ಷೇಪಣೆಗೆ 15 ದಿನಗಳ ಗಡುವು.” – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

“ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗ ಸೂಚಿ ಬೆಲೆಗಳು ಪರಿಷ್ಕರಣೆ : ಆಕ್ಷೇಪಣೆಗೆ 15 ದಿನಗಳ ಗಡುವು.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಉಪನೋಂದಣಾಧಿಕಾರಿಗಳ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ಬೆಲೆ ಪಟ್ಟಿಯ ದರಗಳನ್ನು 2023-24 ಸಾಲಿಗೆ ಪರಿಷ್ಕರಿಸುವ ಸಲುವಾಗಿ ದಿನಾಂಕ 17/08/2023 ರಂದು ಮಾನ್ಯ ತಹಶೀಲ್ದಾರ್ ಮತ್ತು ಅಧ್ಯಕ್ಷರು,ತಾಲ್ಲೂಕು ಮೌಲ್ಯಮಾಪನ ಉಪಸಮಿತಿ, ಮೂಡಿಗೆರೆ ಹಾಗೂ ಕಳಸ ತಾಲ್ಲೂಕು ರವರ ಘನ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಸ್ಥಿರಾಸ್ತಿಗಳ ಮೌಲ್ಯವನ್ನು ಹೆಚ್ಚಿಸುವ ಬಗ್ಗೆ ತೀರ್ಮಾನಿಸಿ ಈ ಬಗ್ಗೆ ಪರಿಷ್ಕೃತ ಕರಡು ಪ್ರತಿಯನ್ನು ತಯಾರಿಸಿದ್ದು ಸಾರ್ವಜನಿಕರ ಮಾಹಿತಿಗಾಗಿ ಈ ಕಛೇರಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸಿ ಪ್ರಚುರ ಪಡಿಸಲಾಗಿದೆ. ಈ ಸಂಬಂಧ ಆಕ್ಷೇಪಣೆಗಳು ಇದ್ದಲ್ಲಿ ಸಾರ್ವಜನಿಕರು ಈ ಪ್ರಕಟಣೆ ದಿನಾಂಕದ 15 ದಿನಗಳ ಒಳಗಾಗಿ ತಹಶೀಲ್ದಾರ್ ಮತ್ತು ಅಧ್ಯಕ್ಷರು, ತಾಲ್ಲೂಕು ಮೌಲ್ಯಮಾಪನ ಉಪಸಮಿತಿ, ತಾಲ್ಲೂಕು ಕಛೇರಿ, ಮೂಡಿಗೆರೆ ಅಥವಾ ಕಾರ್ಯದರ್ಶಿ ಉಪನೋಂದಣಾಧಿಕಾರಿ, ಉಪ ನೋಂದಣಿ ಕಛೇರಿ, ಮೂಡಿಗೆರೆ ಇವರಿಗೆ ಕಛೇರಿಯ ವೇಳೆಯಲ್ಲಿ (ಬೆಳಗ್ಗೆ 10-00 ರಿಂದ ಸಂಜೆ 5-30ರವರೆಗೆ) ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ. ಆನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮೂಡಿಗೆರೆ ತಾಲ್ಲೂಕಿನ ಉಪ ನೋಂದಣಾಧಿಕಾರಿಗಳು ವಾಹಿನಿಗೆ ತಿಳಿಸಿದ್ದಾರೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *