day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಸತ್ತವರ ಮತ್ತು ಬದುಕಿದ್ದವರ ಪರ ಇಲ್ಲದ ಒಕ್ಕಲಿಗರ ಸಂಘ.” – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

“ಸತ್ತವರ ಮತ್ತು ಬದುಕಿದ್ದವರ ಪರ ಇಲ್ಲದ ಒಕ್ಕಲಿಗರ ಸಂಘ.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ನಡೆದ ಸೌಜನ್ಯ ಗೌಡ ಎಂಬ ಒಕ್ಕಲಿಗ ಗೌಡ (ಇಲ್ಲಿ ಒಕ್ಕಲಿಗ ಗೌಡ ಹೆಣ್ಣು ಎಂದು ಏಕೆ ಒತ್ತಿ ಹೇಳುತ್ತಿದ್ದೇನೆಂದರೆ ಕೊನೆಗೆ ಅರ್ಥವಾಗುತ್ತದೆ) ಸಮುದಾಯದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ವಿಕೃತವಾಗಿ ಕೊಲೆ ಮಾಡಲಾಯಿತು. ಆದರೆ ಈ ಹತ್ಯೆಯ ಹಿಂದೆ ಕೆಲವು ಪ್ರಭಾವಿಗಳು ಇರುವುದರಿಂದ, ನೈಜ ಆರೋಪಿಗಳ ಬದಲಾಗಿ ಯಾರೋ ಒಬ್ಬ ಕ್ಷೇತ್ರಕ್ಕೆ ಬಂದ ಮಾನಸಿಕವಾಗಿ ಆರೋಗ್ಯವಾಗಿರದ ಭಕ್ತನನ್ನು ಹಿಡಿದು ಆತನಿಗೆ ಕೊಡಬಾರದ ಚಿತ್ರ ಹಿಂಸೆಕೊಟ್ಟು ಆತನ ಮನೆಯವರನ್ನು ಬೆದರಿಸಿ ಆರೋಪ ಒಪ್ಪಿಕೊಳ್ಳುವಂತೆ ಮಾಡಿ, ಅಂದಿನ ಪೋಲಿಸರು ಹಾಗೂ COD, CBI ಅಧಿಕಾರಿಗಳು ಹಣದ ಅಸೆಗೆ ಒಬ್ಬ ಅಮಾಯಕನನ್ನು ಬಲಿಪಶು ಮಾಡಿದರು, ಸೌಜನ್ಯ ನಡೆದುಕೊಂಡು ಬರುತ್ತಿದ್ದಾಗ ಆಕೆಯನ್ನು 4-5 ಜನ ಕೊಡೆ ಅಡ್ಡ ಹಿಡಿದುಕೊಂಡು ಎಳೆದುಕೊಂಡು ಹೋಗುತ್ತಿರುವುದನ್ನು ಕಣ್ಣಾರೆ ಕಂಡ ವ್ಯಕ್ತಿಗಳು ಇದ್ದಾರೆ ಈ ನಾಲ್ಕೂ ಜನ ಇದುವೇ ಪರಿಸರದವರಾಗಿರುತ್ತಾರೆ, ಇವರ ಮೇಲೆ ಸೌಜನ್ಯಳ ಮನೆಯವರು ಆರೋಪ ಮಾಡಿದರೆ ಅವರನ್ನು ಬಂಧಿಸದೆ ಒಬ್ಬ ಅಮಾಯಕನನ್ನು ಬಂಧಿಸಲಾಯಿತು. ಇನ್ನು ಸೌಜನ್ಯಳ ಮನೆಯವರು ಪರಿಸರದ ಒಂದು ಪ್ರಬಲ ಕುಟುಂಬದ ವ್ಯಕ್ತಿಯ ಮೇಲೆ ಆರೋಪ ಮಾಡಿದರು, ಆದರೆ ಆತನ ಕುಟುಂಬದ ಒಬ್ಬ ಪ್ರಬಲ ವ್ಯಕ್ತಿ “ಈ ಮಗು ಈ ಪ್ರಕರಣದ ಸಂದರ್ಭದಲ್ಲಿ ಅಮೇರಿಕಾದಲ್ಲಿದ್ದ ಎಂದು ಸಮಜಾಯಿಸಿ ಕೊಡುತ್ತಾರೆ ಆದರೆ ಈ ಸೌಜನ್ಯಳ ಅಪಹರಣ ಮಾಡಿದ ದಿನ ಬೆಳಿಗ್ಗೆ 10:30-11:00ರ ಆಸುಪಾಸಿನಲ್ಲಿ ಇದುವೇ ಅಮೇರಿಕಾದಲ್ಲಿರುವ ವ್ಯಕ್ತಿ ಧರ್ಮಸ್ಥಳದಲ್ಲಿ ಇದ್ದ (ಬಹುಶಃ ಈ ಮಗು ಅಮೇರಿಕ ಸೇನೆಯ ವಿಶ್ವದ ಅತ್ಯಂತ ವೇಗದ ಯುದ್ಧ ವಿಮಾನ Lockheed Martin F-35 Lightning IIನಲ್ಲೇ ಧರ್ಮಸ್ಥಳಕ್ಕೆ ಬಂದು ಹೋಗಿರಬೇಕೆಂದು ಕಾಣುತ್ತದೆ, ಇಲ್ಲದಿದ್ದರೆ ಇದು ಕಷ್ಟ ಸಾಧ್ಯ) ಇದಲ್ಲದೆ ಈ ಪ್ರಕರಣದ ಸಂದರ್ಭದಲ್ಲಿ ಈತ ಅಮೇರಿಕಾದಲ್ಲಿದ್ದ ಎಂದು ಹೇಳುವುದಕ್ಕೆ Passport ಬೇರೆ ತೋರಿಸುತ್ತಾರೆ ಇದು ನಕಲಿ ಎಂದು ಕೆಲವರ ಅಭಿಪ್ರಾಯ, ಒಂದುವೇಳೆ ಈ Passport ಅಸಲಿಯೆಂದೆ ಗ್ರಹಿಸೋಣ ಆದರೆ ಈ ಸೌಜನ್ಯಳ ಅತ್ಯಾಚಾರ ಕೊಲೆ ಮಾಡಿದ ಬಳಿಕ ರಾತ್ರಿಯೇ ಈತ ವಿದೇಶಕ್ಕೆ ಪರಾರಿಯಾಗಿದ್ದಿರಲೂಬಹುದು. ಇಷ್ಟೇಲ್ಲಾ ನಡೆದ ಮೇಲೆ ಈಗ 11 ವರ್ಷಗಳ ಬಳಿಕ ಆ ಅಪರಾಧಿ ಸಂತೋಷ್ ರಾವ್ ನಿರಪರಾಧಿ ಆತ ಅತ್ಯಾಚಾರ, ಕೊಲೆ ಮಾಡಿಲ್ಲವೆಂದು ಅದಕ್ಕೆ ಯಾವುದೇ ಪೂರಕ ಸಾಕ್ಷಿ ಇಲ್ಲವೆಂದು ನ್ಯಾಯಾಲಯ ಆತನನ್ನು ಬಿಡುಗೊಡೆ ಮಾಡಿದೆ. ಆದರೆ ಈಗ ಸೌಜನ್ಯ ಗೌಡಳ ಅತ್ಯಾಚಾರ ಹಾಗು ಕೊಲೆಯನ್ನು ಆತ ಮಾಡಿಲ್ಲವೆಂದು ಕೋರ್ಟ್ ಹೇಳಿದ ಮೇಲೆ ಹಾಗಾದರೆ ಅತ್ಯಾಚಾರ ಹಾಗೂ ಕೊಲೆ ಮಾಡಿದ ನೈಜ ಅಪರಾಧಿಗಳು ಯಾರೆಂದು ಕೆಲವು ಮುಖಂಡರು, ಕೆಲವು ಸಂಘಟನೆಗಳು, ಹೋರಾಟಕ್ಕಿಳಿದಿದೆ. ಈ ಬಗ್ಗೆ ಈಗಾಗಲೇ ರಾಜ್ಯದ ಕೆಲವು ಕಡೆ ಹೊರಾಟಗಳು ನಡೆದಿದೆ ಮೈಸೂರು, ಮಂಡ್ಯ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ , ಇನ್ನು ಮುಂದಿನ ದಿನಗಳಲ್ಲಿ ಬೆಂಗಳೂರು, ಹಾಸನ, ತುಮಕೂರು, ಉತ್ತರ ಕರ್ನಾಟಕ ಮುಂತಾದ ಕಡೆಗಳಲ್ಲಿ ಹೋರಾಟಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಹಾಗಾಗಿ ನನಗೊಂದು ಆಶ್ಚರ್ಯ ಇಷ್ಟೆಲ್ಲಾ ಆದರೂ ಸೌಜನ್ಯ ಗೌಡಳನ್ನು ಅತ್ಯಾಚಾರ ಹಾಗೂ ಕೊಲೆಯ ವಿರುದ್ಧ ಒಕ್ಕಲಿಗರ ಸಂಘ ಏಕೆ ಹೋರಾಟ ಮಾಡುತ್ತಿಲ್ಲವೆಂದು ? ತಮ್ಮ ಸಮುದಾಯದ ಹೆಣ್ಣು ಮಗಳಿಗೆ ನ್ಯಾಯ ಕೊಡುವ ದೃಷ್ಟಿಯಿಂದ, ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಜನ್ಯಳ ಊರಾದ ಬೆಳ್ತಂಗಡಿಯಲ್ಲಿ ಒಕ್ಕಲಿಗ ಸಮುದಾಯವು ಎರಡನೇ ಬಲಿಷ್ಠ ಸಮುದಾಯ, ಬಿಲ್ಲವ ಸಮುದಾಯಕ್ಕೂ ಒಕ್ಕಲಿಗ ಸಮುದಾಯಕ್ಕೂ 2,500-3,000 ಅಷ್ಟೇ ವ್ಯತ್ಯಾಸ, ಇನ್ನು ಪುತ್ತೂರಿನಲ್ಲಿಯೂ ಒಕ್ಕಲಿಗ ಸಮುದಾಯವು ಪ್ರಬಲವಾಗಿದೆ , ಇನ್ನು ಹೊಸ ತಾಲ್ಲೂಕು ಕಡಬದಲ್ಲೂ ಒಕ್ಕಲಿಗ ಸಮುದಾಯ ಅತ್ಯಂತ ಪ್ರಬಲವಾಗಿದೆ, ಇನ್ನು ಸುಳ್ಯ ತಾಲ್ಲೂಕು ಒಕ್ಕಲಿಗ ಸಮುದಾಯದ ಅತ್ಯಂತ ಬಲಿಷ್ಠ ಭದ್ರ ಕೋಟೆ ಇನ್ನೂ ಒಂದು ವಿಶೇಷ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ BJPಯ ಹಾಗೂ ಹಿಂದುತ್ವದ ಉಕ್ಕಿನ ಕೋಟೆ ಸುಳ್ಯ ಆದರೆ ಈ ಸುಳ್ಯ ಕ್ಷೇತ್ರದ ಒಕ್ಕಲಿಗ ಸಮುದಾಯದ ವ್ಯಕ್ತಿಯೇ ಮುಖ್ಯಮಂತ್ರಿಯಾಗಿದ್ದಾಗ ನಡೆದ ಪ್ರಕರಣವನ್ನು ಪ್ರಭಾವಿ ವ್ಯಕ್ತಿಗಳೊಡನೆ ಸೇರಿ ತನ್ನ ಒಕ್ಕಲಿಗ ಸಮುದಾಯದ ಹೆಣ್ಣು ಮಗಳು ಅದಲ್ಲದೇ ಹಿಂದೂ ಹೆಣ್ಣು ಮಗಳು ಎಂಬುವುದನ್ನೇ ಮರೆತು ಕೇವಲ ಹಣದ ಆಸೆಗೆ ಈ ಪ್ರಕರಣವನ್ನು ಮುಚ್ಚಿಸಿ ಹಾಕಿಸಿದ್ದರು, ಆದರೆ ಈ ಒಕ್ಕಲಿಗ ಸಮುದಾಯದ ಮುಖ್ಯಮಂತ್ರಿ ಮುಚ್ಚಿಹಾಕಿಸಿದ್ದ ಪ್ರಕರಣವನ್ನು, CBI ತನಿಖೆಗೆ ಕೊಡಲು ಸಿದ್ದರಾಮಯ್ಯ ಅವರು ಬರಬೇಕಾಯಿತು, ನಾಚಿಕೆಯಾಗಬೇಕು ಒಕ್ಕಲಿಗರ ಸಮುದಾಯಕ್ಕೆ ತಮ್ಮದೆ ಸಮುದಾಯದ ಅಮಾಯಕ ಅಪ್ರಾಪ್ತ ಹುಡುಗಿಯ ಅತ್ಯಾಚಾರ ಕೊಲೆಯ ವಿರುದ್ಧ ನ್ಯಾಯಕ್ಕಾಗಿ ಇನ್ನೂ ಬೀದಿಗಿಳಿದು ಹೋರಾಟ ಮಾಡದೆ ತನಗೂ ಈ ಪ್ರಕರಣಕ್ಕೂ ಏನೇನೂ ಸಂಬಂಧವಿಲ್ಲವೆಂದು ನೆಮ್ಮದಿಯಿಂದ ಕುಳಿತಿರುವುದಕ್ಕೆ. ಈ ಒಕ್ಕಲಿಗ ಅಥವಾ ಗೌಡ ಸಂಘದವರು ಎಲ್ಲಿಯಾದರೂ ತಮ್ಮ ಸಮುದಾಯದ ಒಂದು ಸಭಾ ಭವನ ನಿರ್ಮಾಣಕ್ಕೆ, ಕ್ರಿಕೆಟ್ ಪಂದ್ಯಕ್ಕೆ, ಕಬಡ್ಡಿ ಪಂದ್ಯಕ್ಕೆ, ಇತ್ಯಾದಿ ಇತ್ಯಾದಿ ಏನಾದರು ಇದ್ದರೆ ಮನೆ ಮನೆಗೆ ಬಂದು ಹಣ ಕಲೆಕ್ಷನ್‌ ಮಾಡಿಕೊಂಡು ಹೋಗುತ್ತಾರೆ. ಆದರೆ ಒಕ್ಕಲಿಗ ಸಮುದಾಯಕ್ಕೆ ಏನಾದರೂ ಅನ್ಯಾಯವಾಗುವಾಗ ಒಕ್ಕಲಿಗ ಸಂಘದವರು ಕಾಣುವುದಿಲ್ಲ ಇದು ತುಂಬಾ ನೋವಾಗುತ್ತದೆ. ನಾನು ಒಬ್ಬ ಒಕ್ಕಲಿಗ ಸಮುದಾಯದವನು ನಾನು ಹೇಳುತ್ತೇನೆ ಕೇಳಿ, ಇನ್ನೂ ಮುಂದೆ ಯಾವುದೇ ಒಕ್ಕಲಿಗ (ಗೌಡ) ಸಂಘದವರು ನಿಮ್ಮ ಮನೆಗಳಿಗೆ ಒಕ್ಕಲಿಗ ಸಮುದಾಯಕ್ಕಾಗಿ ಹಣದ ಕಲೆಕ್ಷನ್‌ ಗೆ ಬಂದರೆ ನೀವು ಒಂದೇ ಒಂದು ರೂಪಾಯಿ ಕೊಡಬೇಡಿ ಅಥವಾ ಒಕ್ಕಲಿಗ ಸಮುದಾಯದ ಚುನಾವಣೆಯ ಸಂದರ್ಭದಲ್ಲಿ ಮತ ಕೇಳಲು ಬಂದರೆ ಜಾಡಿಸಿ ನಿಮ್ಮ ಮನೆಯಿಂದ ಓಡಿಸಿ ಇವರಿಗೆಲ್ಲಾ ಉಪಕಾರ,ಲಾಭ ಇದ್ದರೆ ಮಾತ್ರ ಒಕ್ಕಲಿಗ ಸಮುದಾಯದ ಜನಸಾಮಾನ್ಯರ ನೆನಪು ಆಗುತ್ತದೆ ಇಲ್ಲದಿದ್ದರೆ ನೆನಪಾಗುವುದಿಲ್ಲ. ಈ ಒಕ್ಕಲಿಗ ಸಮುದಾಯದ ನಾಯಕರು ಇನ್ನೂ ಕೇವಲ ತೋರಿಕೆಗೆ ಈ ಪ್ರಕರಣದ ವಿರುದ್ಧ ಮುಖ್ಯಮಂತ್ರಿಗೆ ಮನವಿಯನ್ನು ಕೊಡುವುದರಲ್ಲೇ ಇದ್ದಾರೆ ,ಯಾರಾದರೂ ಒಬ್ಬ ಒಕ್ಕಲಿಗ ನಾಯಕ ಅಥವಾ ಒಕ್ಕಲಿಗ ಸಂಘದವರು ಎದುರಾಳಿ ಎಷ್ಟೇ ಬಲಿಷ್ಠವಾಗಿದ್ದರೂ ಸರಿ ತಮ್ಮ ಸಮುದಾಯದ ಸೌಜನ್ಯ ಗೌಡಳಿಗೆ ಹಾಗೂ ಅವಳ ಕುಟುಂಬಕ್ಕೆ ನ್ಯಾಯ ಕೊಡಿಸಲೇ ಬೇಕು, ಕೊಡಿಸಿಯೇ ಸಿದ್ಧ ಎಂದು ಹೇಳಿ ಬೀದಿಗಿಳಿದು ಜನರನ್ನು ಒಗ್ಗೂಡಿಸಿ ಹೋರಾಟ ಮಾಡಿದ ಒಬ್ಬನೇ ಒಬ್ಬ ಒಕ್ಕಲಿಗ ಸಮುದಾಯದ ನಾಯಕನೂ ಕಾಣುತ್ತಿಲ್ಲ. ಅದುವೇ ಒಬ್ಬ ಒಕ್ಕಲಿಗ ಸಮುದಾಯದ ವ್ಯಕ್ತಿಯೇ ಅಲ್ಲದವರು, ಬೆಳ್ತಂಗಡಿಯಲ್ಲಿ ಒಕ್ಕಲಿಗರಿಗೆ ಹೋಲಿಸಿದರೆ ಅವರ ಸಮುದಾಯದವರು ಅಲ್ಪಸಂಖ್ಯಾತರು ಅಲ್ಲಿ ,

ಮೂಲತಃ ಬಂಟ ಸಮುದಾಯದ ಮಹೇಶ್ ಶೆಟ್ಟಿ ತಿಮರೋಡಿ ಅವರು ಮಾತ್ರ, ಯಾವುದೇ ಜಾತಿಯ ಹಂಗಿಲ್ಲದೆ ಕೇವಲ ಧರ್ಮಕ್ಕಾಗಿ, ಅಧರ್ಮದ ವಿರುದ್ಧ ನ್ಯಾಯಕ್ಕಾಗಿ ಕಳೆದ 11 ವರ್ಷಗಳಿಂದ ಸತತವಾಗಿ ಆ ಒಕ್ಕಲಿಗ ಸಮುದಾಯದ ಸೌಜನ್ಯ ಗೌಡಳ ಪರ ಹಾಗೂ ಆಕೆಯ ಕುಟುಂಬದವರ ಪರವಾಗಿ ನಿಂತು ಆಕೆಯ ಕುಟುಂಬಕ್ಕೆ ಧೈರ್ಯ ಹೇಳುತ್ತಾ, ತನ್ನ ಜೀವದ ಹಂಗು ತೊರೆದು ಯಾವುದೇ ಸ್ವಾರ್ಥ ಲಾಭವಿಲ್ಲದೆ ಹೋರಾಟ ಮಾಡುತ್ತಿದ್ದಾರೆ. ಇದಲ್ಲದೆ ನಿರಪರಾಧಿಯಾಗಿದ್ದ ವ್ಯಕ್ತಿಯನ್ನು ಸತತ 11 ವರ್ಷಗಳ ನಿರಂತರ ಕಾಲ ತನ್ನ ಸ್ವಂತ ಖರ್ಚಿನಿಂದ ಕಾನೂನು ಹೋರಾಟ ಮಾಡಿ ಜೈಲಿನಿಂದ ಬಿಡಿಸಿಕೊಂಡು ಬಂದಿದ್ದಾರೆ. ಇದು ಮಾನವೀಯತೆ, ಇನ್ನಾದರೂ ಬದಲಾಗಿ ತೋರಿಕೆಯ ಒಕ್ಕಲಿಗ ಸಂಘದ ನಾಯಕರೆ.

✍🏻 ಬರಹ ಕೃಪೆ.

ಕಿರಣ್ ಕಾಳಪ್ಪ
ಒಕ್ಕಲಿಗರ ಯುವ ವೇದಿಕೆ,ಸೋಮವಾರಪೇಟೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *