day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ.” – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

“ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮಲೆನಾಡ ಮಡಿಲು ಮೂಡಿಗೆರೆಯ ಒಕ್ಕಲಿಗ ಸಮುದಾಯದ ಚೊಚ್ಚಲ ಕಾರ್ಯಕ್ರಮಕ್ಕೆ ಸಂಪೂರ್ಣ ಸಮುದಾಯವು ಏಕತೆಯಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಯಶಸ್ಸು ತಂದುಕೊಟ್ಟಂತಹ ಕ್ಷಣವದು.

ಕೆಂಪೇಗೌಡ ವೇದಿಕೆ ಮೂಡಿಗೆರೆ (ರಿ)
ಹಾಗೂ ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರು ಒಕ್ಕಲಿಗರ ಹಿತರಕ್ಷಣಾ ವೇದಿಕೆ ಒಕ್ಕಲಿಗರ ಒಕ್ಕೂಟ ಮತ್ತು ವಿವಿಧ ಒಕ್ಕಲಿಗರ ಸಂಘಟನೆಗಳ ಸಂಯುಕ್ತಾಶ್ರದಲ್ಲಿ ದಿನಾಂಕ 28/06/2023ರ ಬುಧವಾರದಂದು ದಿ ಶ್ರೀ ವಿ.ಜಿ.ಸಿದ್ಧಾರ್ಥ ಹೆಗಡೆ ವೇದಿಕೆಯಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 514 ನೇ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶ್ರೀ ಬ್ರಿಜೇಶ್ ಗೌಡ ಕಡಿದಾಳು (ಅಧ್ಯಕ್ಷರು ಕೆಂಪೇಗೌಡ ಒಕ್ಕಲಿಗ ವೇದಿಕೆ ಮೂಡಿಗೆರೆ) ವಹಿಸಿಕೊಂಡಿದ್ದರು.

ಮುಖ್ಯ ಅತಿಥಿಯಾಗಿ : ಶ್ರೀ ಎಂ ಕೆ ಪ್ರಾಣೇಶ್ ಗೌಡ (ಉಪ ಸಭಾಪತಿಗಳು ವಿಧಾನ ಪರಿಷತ್)

ಮುಖ್ಯ ಭಾಷಣಕಾರರಾಗಿ : ಶ್ರೀ ಡಾ ಶಾಂತರಾಜು (ಉಪ ಪ್ರಾಂಶುಪಾಲರು ಹಾಗೂ ಮುಖ್ಯಸ್ಥರು ಕನ್ನಡ ವಿಭಾಗ ಬೆಂಗಳೂರು)

ಅತಿಥಿಗಳಾಗಿ : ಶ್ರೀ ಟಿ ರಾಜಶೇಕರ ಗೌಡ್ರು (ಅಧ್ಯಕ್ಷರು ಜಿಲ್ಲಾ ಒಕ್ಕಲಿಗರ ಸಂಘ)

ಶ್ರೀ ಐ ಎಮ್ ಪೂರ್ಣೇಶ್ ಗೌಡ (ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು)

ಶ್ರೀ ಹೆಚ್ ಎಮ್ ಸತೀಶ್ ಗೌಡ (ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರು)

ಶ್ರೀಮತಿ ವಸಂತ್ ಕುಮಾರಿ (ಜಿಲ್ಲಾ ಒಕ್ಕಲಿಗ ಸಂಘದ ನಿರ್ದೇಶಕರು)

ಶ್ರೀಮತಿ ಕಲಾವತಿ ರಾಜಣ್ಣ (ಅಧ್ಯಕ್ಷರು ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘ ಮೂಡಿಗೆರೆ)

ಶ್ರೀ ಡಿ ಕೆ ಲಕ್ಷ್ಮಣ್ ಗೌಡ (ಅಧ್ಯಕ್ಷರು ಒಕ್ಕಲಿಗರ ಹಿತ ರಕ್ಷಣಾ ವೇದಿಕೆ)

ಶ್ರೀ ಶಿವೇಗೌಡ ಹಳಸೆ (ಮಾಜಿ ಅಧ್ಯಕ್ಷರು ಜಿಲ್ಲಾ ಒಕ್ಕಲಿಗರ ಸಂಘ)

ಶ್ರೀ ಸಂದೀಪ್ ಗೌಡ ಬಿಳಗಲಿ (ಮಾಜಿ ಅಧ್ಯಕ್ಷರು ಜಿಲ್ಲಾ ಒಕ್ಕಲಿಗರ ಸಂಘ)

ಶ್ರೀಮತಿ ಆಶಾ ಮೋಹನ್ (ಅಖಿಲ ಕರ್ನಾಟಕ ರಾಜ್ಯದ ಮಹಿಳಾ ಒಕ್ಕಲಿಗರ ಸಂಘದ ಕಾರ್ಯದರ್ಶಿಗಳು).

ಈ ಗೌರವಾನ್ವಿತರೆಲ್ಲರೂ ಕೂಡ ವೇದಿಕೆಯನ್ನು ಅಲಂಕರಿಸಿ ಕಾರ್ಯಕ್ರಮವನ್ನು ದೀಪವನ್ನು ಬೆಳಗಿ ನಾಡಪ್ರಭು ಶ್ರೀ ಪೂಜ್ಯ ಕೆಂಪೇಗೌಡರವರ ಹಾಗೂ ಶ್ರೀ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಫೋಟೋಗಳಿಗೆ ಪುಷ್ಪ ನಮನವನ್ನು ಮಾಡುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮವನ್ನು ಯಶಸ್ವಿ ಹಾದಿಯತ್ತ ಕೊಂಡೊಯ್ದರು.

ಕಾರ್ಯಕ್ರಮದ ನಿರೂಪಣೆ : ಶ್ರೀ ಪ್ರಸಾದ್ ಗೌಡ ಬಕ್ಕಿ

ಪ್ರಾಸ್ತಾವಿಕ ನುಡಿ : ಶ್ರೀ ಸುಂದ್ರೇಶ್ ಗೌಡ ಕೊಣಗೆರೆ

ಪ್ರತ್ಯೇಕವಾಗಿ ಜವಬ್ದಾರಿಯನ್ನು ಸರಾಗವಾಗಿ ನಿಭಾಯಿಸಿದರು.

ವೇದಿಕೆಯ ಗಣ್ಯಾತೀಗಣ್ಯರಲ್ಲಿ ಶ್ರೀ ಎಂ ಕೆ ಪ್ರಾಣೇಶ್ ರವರು ಶ್ರೀ ನಾಡಪ್ರಭು ಕೆಂಪೇಗೌಡರ ಬಗೆಗೆ ತಿಳಿದ ಹಲವು ವಿಷಯಗಳನ್ನು ನೆರೆದಿದ್ದ ಜನಸ್ಥೋಮದ ಜೊತೆಗೆ ಹಂಚಿಕೊಂಡು ,ನಮ್ಮ ಸಮುದಾಯದ ಕರ್ತವ್ಯ ,ಸಾಧನೆ,ಸೇವೆ,ವಿಚಾರಧಾರೆಯನ್ನು ಕೂಲಂಕುಶವಾಗಿ ಮನದಟ್ಟುಮಾಡಿದರು.

ನಮ್ಮ ನಾಡಿಗೆ ನಮ್ಮ ಕೊಡುಗೆಗಳು ಅಪಾರ. ನಮ್ಮ ಸಮುದಾಯವು ಸಮುದಾಯದ ಕುಟುಂಬಗಳಿಗೆ ಸೀಮಿತವಾಗದೆಯೇ ಉಳಿದ ಸಮುದಾಯಗಳ ಜೊತೆಯಾಗಿ ಹೇಳಿಗೆಗೆ ಶ್ರಮಿಸಬೇಕು ,ತಳಮಟ್ಟದ ಕುಟುಂಬವನ್ನ ಮೇಲೆತ್ತಿ ಸಮುದಾಯದ ಹೇಳಿಗೆಗೆ ಶ್ರಮಿಸಿ ಕ್ಷೇತ್ರದ ಮುಂದಿನ ಬೆಳವಣಿಗೆಗೆ ಸಮುದಾಯದಿಂದ ಹೆಚ್ಚೆಚ್ಚು ಕೊಡುಗೆಗಳನ್ನ ನೀಡಲು ಸಹಕರಿಸೋಣ ,ಎಲ್ಲರ ಜೊತೆಗೂಡಿ ಕ್ಷೇತ್ರದ ಬೆಳವಣಿಗೆಯ ಜೊತೆಗೆ ನಾಡಿಗೆ ಕೊಡುಗೆಯನ್ನ ನೀಡುವ ನಿಟ್ಟಿನಲ್ಲಿ ಸಮುದಾಯವನ್ನ ಕೊಂಡೋಯ್ಯೋಣ ಎಂಬ ಭರವಸೆಯ ಮಾತುಗಳನ್ನಾಡಿದರು.

ಶ್ರೀ ಡಾ ಶಾಂತರಾಜು ರವರು ಶ್ರೀ ನಾಡಪ್ರಭು ಕೆಂಪೇಗೌಡರ ವಿಚಾರಧಾರೆಗಳು ಅವರ ಅಂದಿನ ಕಾಲದ ದೂರದೃಷ್ಟಿ ಒಂದು ಸಮುದಾಯಕ್ಕೆ ಸೀಮಿತವಾಗದೆ, ನಾಡನ್ನು ಆಳಿದ ರೀತಿ ಇತಿಹಾಸದ ಬಗೆಗೆ ಇಂಚಿಂಚು ಬಿಡದೆ ಇತಿಹಾಸದ ಪುಟಗಳಲ್ಲಿ ಕೆಂಪೇಗೌಡರ “ಯಶೋಗಾಥೆಯ” ಅಧ್ಯಾಯಗಳನ್ನ ಉಪನ್ಯಾಸದ ಮೂಲಕ ಬಹಳಷ್ಟು ಸುಂದರವಾಗಿ ಉಣಬಡಿಸಿದರು.

ತದನಂತರದಲ್ಲಿ ಸಮುದಾಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹದಿನೈದು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ಸನ್ಮಾನ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಆದರ್ಶ್ ಗೌಡ್ರು ತರುವೆ* ವಿಸ್ತ್ರತವಾಗಿ ನಿಭಾಯಿದರು.

ಈ ಕೆಳಕಂಡಂತೆ ಸಾಧಕರುಗಳನ್ನು ಗುರುತಿಸಲಾಗಿ ಸನ್ಮಾನಿಸಲಾಯಿತು

ಹಿರಿಯರಾದ ಶ್ರೀ ಓ ಎಸ್ ಗೋಪಾಲಗೌಡ ಔಸನ (ಗುರುತಿಸಿದ ಕ್ಷೇತ್ರ ಸಮಾಜಸೇವೆ) ~ ಬಡವರಿಗೆ ನಿವೇಶನ ಕೊಡಿಸುವುದು ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ವಿವಿಧ ಪದವಿಗಳನ್ನು ಪಡೆದಿರುತ್ತಾರೆ.

ಹಿರಿಯರಾದ ಶ್ರೀಮತಿ ವೇದಾವತಮ್ಮ ಬಕ್ಕಿ (ಕೃಷಿ ಕ್ಷೇತ್ರ ) ~ ಗ್ರಾಮೀಣ ಹೆಣ್ಣುಮಕ್ಕಳಿಗೆ ಹೆರಿಗೆ ಶುಶೃಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಶ್ರೀ ಲಕ್ಷ್ಮಣ್ ಗೌಡ ಗೌತಹಳ್ಳಿ (ಕೃಷಿ ಕ್ಷೇತ್ರ)~ ಆದರ್ಶ ಕೃಷಿಕ – 9449549234.

ಶ್ರೀ ನಾಗರಾಜ್ ಗೌಡ (ಸೇನೆ)

ಶ್ರೀಮತಿ ಸವಿತಾ ಜೆ.ಬಿ. ದಾರದಹಳ್ಳಿ (ಹೈನುಗಾರಿಕೆ)~ ಉತ್ತಮ ಹೈನುಗಾರಿಕೆ.

ಶ್ರೀ ಪ್ರಶಾಂತ್ ಮುಗ್ರಹಳ್ಳಿ (ಮಾಧ್ಯಮ ಕ್ಷೇತ್ರ)~ ರಾಜ್ಯ ಪ್ರಶಸ್ತಿ ಪುರಸ್ಕೃತರು ,ಪಬ್ಲಿಕ್ IMPACT ಮಾಧ್ಯಮದ ವ್ಯವಸ್ಥಾಪಕರು.

ಶ್ರೀ ದಿನೇಶ್ ದೇವವೃಂದ (ಮಾಧ್ಯಮ ಕ್ಷೇತ್ರ)~ ಕೃಷಿಕ ಪತ್ರಿಕೆ

ಶ್ರೀ ಭರತ್ ಗೌಡ ದಾರದಹಳ್ಳಿ (ಪೋಲಿಸ್ ಇಲಾಖೆ) ವೃತ್ತ ನಿರೀಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ‌.

ಶ್ರೀ ಚಂದನ್ ಮಂಚೇಗೌಡ (ಕ್ರೀಡಾ ಕ್ಷೇತ್ರ)~ ಅಂತರ ರಾಷ್ಟ್ರೀಯ ಮೋಟಾರ್ ರ್ಯಾಲಿಸ್ಟ್.

ಶ್ರೀ ಸಾಕ್ಷಾತ್ ಗೌಡ ಬಿ ಹೊಸಹಳ್ಳಿ (ಕ್ರೀಡಾ ಕ್ಷೇತ್ರ)~ ನೆಟ್ ಬಾಲ್ ನಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ.

ಶ್ರೀ ಬಿ ಪಿ ಪ್ರಕಾಶ್ ಗೌಡ ಬಕ್ಕಿ (ಸಾಮಾಜಿಕ ಕ್ಷೇತ್ರ)~ಕಾರ್ಯವಿಪತ್ತು ನಿರ್ವಹಣಾ ಧರ್ಮಸ್ಥಳ ಸಂಘಟನೆ ಕರೋನ ಸಂಧರ್ಭದಲ್ಲಿ ಶವ ಸಂಸ್ಕಾರ.

ಶ್ರೀ ದೀಕ್ಷಿತ್ ಪಟೇಲ್ ಭೈರಾಪುರ (ಶಿಕ್ಷಣ)~ಸಿ ಇ ಟಿ ಯಲ್ಲಿ 33 ನೇ,12 ನೇ ತರಗತಿಯಲ್ಲಿ (ಸಿಬಿಎಸ್ಸಿ) ದೇಶದಲ್ಲಿ 661 ನವೋದಯ ಶಾಲೆಗಳಿದ್ದು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ನಾಡಿಗೆ ಊರಿಗೆ ತಾಯಿ/ತಂದೆಗೆ ಹೆಮ್ಮೆ ತಂದವರು.

ಕುಮಾರಿ ಈಶ್ವರಿ ಸಿರಿಗಂಧ ಫಲ್ಗುಣಿ (ಶಿಕ್ಷಣ)

ಕುಮಾರಿ ನಿಸರ್ಗ ಗೌಡ ಪಟ್ಟದೂರು (ಶಿಕ್ಷಣ)

ಶ್ರೀ ತೇಜಸ್ವಿ ಜಿ ಗೌಡ ಬೀಜುವಳ್ಳಿ (ಶಿಕ್ಷಣ)

ಶ್ರೀ ಸಂಭ್ರಮ್ ಗೌಡ (ಉದ್ಯಮಶೀಲ)

ಕುಮಾರಿ ವಿ ಎಸ್ ಸುಗಂಧಿ (ಶಿಕ್ಷಣ ಬಿ ಜಿ ಎಸ್ ಶಾಲೆ).

ಈ ಸಾಧಕರನ್ನೆಲ್ಲ ವೇದಿಕೆಯನ್ನು ಅಲಂಕರಿಸಿದ್ದ ಮಹನಿಯರು ಸನ್ಮಾನಿಸಿ ಹರಸಿದರು.

ಸನ್ಮಾನಿತರಾದ ಎಲ್ಲಾ ಹಿರಿಯ ಸಾಧಕರು ಶತಾಯುಷಿಗಳಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ,ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದೀರಿ,ಹಾಗೆಯೇ ಯುವಕ/ಯುವತಿಯರು ಕೆಲ ಕ್ಷೇತ್ರಗಳಲ್ಲಿ ಸಾಧನೆ ಗೈದು ಯುವ ಸಮುದಾಯಕ್ಕೆ ಮಾರ್ಗದರ್ಶನವನ್ನು ನೀಡಿದ್ದೀರಿ,ನಿಮ್ಮ ಕೊಡುಗೆ ನಾಡಿಗೆ ,ದೇಶಕ್ಕೆ ಅಪಾರವಾದದ್ದು ಜೊತೆಗೆ,ಸಮುದಾಯದ ಹೆಸರನ್ನ ತಾಯಿ ತಂದೆಯರ ಊರಿನ ಹೆಸರನ್ನ ಮೇಲೆತ್ತರಕ್ಕೆ ಕೊಂಡೋಗಿದ್ದೀರಿ,ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ,ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ನಿಮಗಿದೋ
ಸಾವಿರ ಸಾವಿರ ಚಪ್ಪಾಳೆ.

ಕಾರ್ಯಕ್ರಮವು ಬಹಳಷ್ಟು ಅಚ್ಚುಕಟ್ಟಾಗಿ ನೆರವೇರಿ ನಾ ಕಂಡ ಹಾಗೆ ರೈತಭವನದಲ್ಲಿ ವಿವಾಹಗಳನ್ನು ಹೊರತುಪಡಿಸಿದರೆ ಇದುವರೆಗೂ ಗಮನಿಸಿದ ಹಾಗೆ ಕೊನೆಯವರೆಗೂ ಕೂಡ ಸಭಾ ಕಾರ್ಯಕ್ರಮವನ್ನು ಸಮುದಾಯದ ಸದಸ್ಯರು (ಎರಡು ಸಾವಿರಕ್ಕೂ) ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕೂತು ಕೇಳಿದ್ದರ ಜೊತೆಗೆ ಪ್ರೋತ್ಸಾಹಿದ್ದು ಇದೇ ಮೊದಲು ಎಂದು ಭಾವಿಸುತ್ತೇನೆ.

ಕೇವಲ ಹತ್ತನ್ನೆರೆಡು ದಿನಗಳ ಹಿಂದೆಯಷ್ಟೇ ಕಾರ್ಯಕ್ರಮನ್ನು ಜರುಗಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಗಳನ್ನು ಒಂದೆರೆಡು ಸ್ಥಳಗಳಲ್ಲಿ ನಡೆಸಿ ತರಾತುರಿಯಲ್ಲಿ ಆಮಂತ್ರಣ ಪತ್ರಗಳನ್ನು ಮಾಡಿಸಿದ್ದಾದರೂ ಕೂಡ ಸಮಯವಕಾಶ ಕಡಿಮೆ ಇದ್ದ ಕಾರಣದಲ್ಲಿ ಸಮುದಾಯದ ಎಲ್ಲರಿಗೂ ಕೂಡ ತಲುಪಿಸಲಾಗದೇ ಹೋದರೂ, ಸಾಮಾಜಿಕ ಜಾಲತಾಣದ ಸೀಮಿತ ಕೆಲ ಗುಂಪುಗಳಲ್ಲಿ ಪ್ರಚಾರ ನೀಡಿದ್ದಕ್ಕೆ ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿದ ಸಮುದಾಯ ಪ್ರತೀ ಕುಟುಂಬದ ಸದಸ್ಯ ಕುಲಬಾಂಧವರಿಗೂ ಈ ಮೂಲಕ ಧನ್ಯವಾದಗಳನ್ನ ತಿಳಿಸುವಂತಹ ಪ್ರಯತ್ನವನ್ನ ಮಾಡುತ್ತಿದ್ದೇವೆ‌.

ಕಾರ್ಯಕ್ರಮದ ಯಶಸ್ಸಿಗಾಗಿ ಪೂರ್ವತಯಾರಿಯಲ್ಲಿ ಹಗಲಿರುಳು ಶ್ರಮಿಸಿದ ಕೆಂಪೇಗೌಡ ಒಕ್ಕಲಿಗ ವೇದಿಕೆ (ರಿ) ಮೂಡಿಗೆರೆ ಅಧ್ಯಕ್ಷರು ಬ್ರಿಜೇಶ್ ಗೌಡ ಕಡಿದಾಳು,ಪ್ರಧಾನ ಕಾರ್ಯದರ್ಶಿ ಹಾಗೂ ಮೂಡಿಗೆರೆ ಕೆಂಪೇಗೌಡ ಒಕ್ಕಲಿಗ ವೇದಿಕೆಯ ಸಂಸ್ಥಾಪಕರು ಆದ ಪ್ರಸಾದ್ ಗೌಡ ಬಕ್ಕಿ ಹಾಗೂ ಪವನ್ ಗೌಡ ಪಟ್ಟದೂರು,ಒಳಗೊಂಡಂತೆ ಸದಸ್ಯವೃಂದದವರಿಗೆ ಹಾಗೂ ವಿವಿಧ ಒಕ್ಕಲಿಗ ಸಂಘಟನೆಗಳಿಗೆ ಈ ಮೂಲಕವಾಗಿ ವಯಕ್ತಿಕ ಹಾಗೂ ಸಮುದಾಯ ಸರ್ವರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.

ಹಾಗೆಯೇ ವಿಶೇಷವಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮನ್ನು ನೀವು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಕಾಫಿನಾಡು ಮಹಿಳಾ ಒಕ್ಕಲಿಗ ಸಂಘದ ಅಧ್ಯಕ್ಷರು ಹಾಗೂ ಸದಸ್ಯವೃಂದವರಿಗೂ ಕೂಡ ವಿಶೇಷವಾಗಿ ಈ ಮೂಲಕ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ.

ಮುಂದಿನ ದಿನಗಳಲ್ಲಿ ಸಮುದಾಯದ ಹೇಳಿಗೆಗೆ ತಮ್ಮೆಲ್ಲರ ಕೊಡುಗೆಯು ಅಪಾರವಾಗಿ ನಿಮ್ಮ ನಾಮಧ್ಯೇಯವು ಇನ್ನಷ್ಟು ಮೇಲತ್ತರಕ್ಕೇರಿ ತಮ್ಮೆಲ್ಲರ ಸ್ಥಾನಮಾನವು ಸಮಾಜದ ಏಳಿಗೆಗೆ ಹಾಗೂ ಸಮುದಾಯದ ಉಳಿವಿಗೆ ಭದ್ರ ಬುನಾದಿಯಾಗಲಿ ಎಂದು ಭಾವಿಸುತ್ತಾ,ಸಮುದಾಯದ ಮುಂದಿ‌ನ ಕಾರ್ಯಕ್ರಮಗಳು ನಿಮ್ಮಿಂದ ಇದೇ ರೀತಿಯಲ್ಲಿ ಯಶಸ್ಸಿನ ಕಾರ್ಯಕ್ರಮಗಳಾಗಿ ರೂಪುಗೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

ಬರಹ ಕೃಪೆ.

ಅಕ್ಷತ್ ಪಟ್ಟದೂರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *