day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ರೈತರಿಗೆ ತರಬೇತಿ.” – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

“ರೈತರಿಗೆ ತರಬೇತಿ.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/


ವಲಯ ಕೃಷಿ ಮತ್ತು ತೋಗಾರಿಕೆ ಸಂಶೋಧನಾ ಕೇಂದ್ರ, ಮೂಡಿಗೆರೆ ಹಾಗೂ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ, ಕೇರಳ ಇವರ ಸಂಯುಕ್ತ ಆಶ್ರಯದಲ್ಲಿ “ಅಧಿಕ ಇಳುವರಿಗಾಗಿ ಕಾಳುಮೆಣಸಿನ ನೂತನ ತಾಂತ್ರಿಕತೆಗಳು” ಕುರಿತಂತೆ ರೈತರಿಗಾಗಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ದಿನಾಂಕ 09 ಜೂನ್ 2023 ರಂದು ವಲಯ ಕೃಷಿ ಮತ್ತು ತೋಟಗಾರಿಕೆ ಕೇಂದ್ರ, ಮೂಡಿಗೆರೆಯಲ್ಲಿ ಆಯೋಜಿಸಲಾಗಿತ್ತು. ತರಬೇತಿ ಕಾರ್ಯಕ್ರಮದ ನೇತೃತ್ವವನ್ನು ಮೂಡಿಗೆರೆ ವಲಯ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಇದರ ಸಹ ಸಂಶೋಧನಾ ನಿರ್ದೇಶಕರಾದ ಡಾ.ಡಿ.ಮಾದಯ್ಯ‌ ಅವರು ವಹಿಸಿದ್ದರು.

ಸುಮಾರು 150 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ತರಬೇತಿ ಕಾರ್ಯಕ್ರಮವನ್ನು ಕೆಳದಿ ಶೀವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇದರ ಸಂಶೋಧನಾ ನಿರ್ದೇಶಕರಾದ ಡಾ.ಬಿ.ಹೇಮಾ ನಾಯಕ್ ಅವರು ಉದ್ಘಾಟಿಸಿದರು. ಕಾಳು ಮೆಣಸಿನ ಪ್ರಾಮುಖ್ಯತೆ ಮತ್ತು ಕಾಳುಮೆಣಸಿನಲ್ಲಿ ಅಭಿವೃದ್ಧಿಗೊಂಡ ಹಲವಾರು ತಾಂತ್ರಿಕತೆಗಳ ಕುರಿತು ಸಂಕ್ಷಿಪ್ತವಾಗಿ ಮಾಹಿತಿಯನ್ನು ಒದಗಿಸಿದರು.

ಮುಖ್ಯ ಅತಿಥಿಗಳಾಗಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ .ಬಿ.ಆರ್.ಬಾಲಕೃಷ್ಣ, ಪಿ.ಕೆ.ನಾಗೇಶ್,ಕುಮಾರಸ್ವಾಮಿ,ಪ್ರಗತಿಪರ ರೈತರು, ಪೂರ್ಣೇಶ್,ಪ್ರಗತಿಪರ ರೈತರು,ಲಕ್ಷ್ಮಣಗೌಡ,ಪ್ರಗತಿಪರ ರೈತರು,ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ನಾರಾಯಣ ಎಸ್.ಮಾವರ್ಕರ್ ಅವರು ವಹಿಸಿದ್ದರು.ತರಬೇತಿ ಕಾರ್ಯಕ್ರಮದಲ್ಲಿ ಕಾಳುಮೆಣಸಿನ ನೂತನ ಉತ್ಪಾದನಾ ತಾಂತ್ರಿಕತೆಗಳು ಮತ್ತು ಸುಧಾರಿತ ತಳಿಗಳು,ನರ್ಸರಿ ಚಟುವಟಿಕೆಗಳು,ಸುಧಾರಿತ ಸಸ್ಯ ಸಂರಕ್ಷಣಾ ಕ್ರಮಗಳು,ಕೊಫ್ಲೋತ್ತರ ತಾಂತ್ರಿಕತೆ ಮತ್ತು ಮೌಲ್ಯಮಾಪನದ ಸಂಪೂರ್ಣ ಮಾಹಿತಿಗಾಗಿ ತಾಂತ್ರಿಕ ತರಬೇತಿಯನ್ನು ರೈತರಿಗೆ ನೀಡಲಾಯಿತು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *