day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಸ್ವಚ್ಛ ಪರಿಸರ,ಸ್ವಾಸ್ಥ್ಯ ಸಮಾಜ.” – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

“ಸ್ವಚ್ಛ ಪರಿಸರ,ಸ್ವಾಸ್ಥ್ಯ ಸಮಾಜ.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸಕಲೇಶಪುರ ತಾಲ್ಲೂಕಿನ ರೆಸಾರ್ಟ್ಸ್ ಓನರ್ ಅಸೋಸಿಯೇಷನ್ ವತಿಯಿಂದ ದಿನಾಂಕ 28/05/2023ರಂದು ಆನೇಮಹಲ್ ನಿಂದ ಹಾನುಬಾಳುವರೆಗೆ ರೋಡ್ ಬದಿಯಿದ್ದ ಪ್ಲಾಸ್ಟಿಕ್ ಕಸ ಬಟ್ಟೆ, ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಇಂದು ಭಾನುವಾರ ಮೇ 28 ರಂದು 8.30 ರಿಂದ 4ಗಂಟೆಯವರೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲಾ ರೆಸಾರ್ಟ್ಸ್ ಓನರ್ ಅಸೋಸಿಯೇಷನ್ ವತಿಯಿಂದ ಸ್ವಚ್ಛಗೊಳಿಸಿ ಹಾನುಬಾಳುವಿನ ಕಸ ವಿಲೇವಾರಿ ಘಟಕಕ್ಕೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಮಲೆನಾಡಿಗೆ ಬರುವ ಕಾರಣ ಇಂದು ಸ್ವಚ್ಛತಾ ಕಾರ್ಯಕ್ರಮವನ್ನು ಹಾಗೆಯೇ ಪ್ರತಿ ಗ್ರಾಮಸ್ಥರು , ಪ್ರವಾಸಿಗರು , ಎಲ್ಲೆಂದರಲ್ಲಿ ಜ್ಯೂಸ್ ಖಾಲಿ ಬಾಟಲಿಗಳನ್ನು , ಬಿಸ್ಲೇರಿ ಬಾಟಲಿಗಳನ್ನು , ಪ್ಲಾಸ್ಟಿಕ್, ಕ್ಯಾರಿ ಬ್ಯಾಗ್ ಗಳನ್ನು ಬಿಸಾಡದೆ ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಪ್ರತಿಯೊಬ್ಬರೂ ಜವಾಬ್ದಾರಿಗಳನ್ನು ಅರಿತರೆ ಈ ರೀತಿಯ ಸ್ವಚ್ಛತಾ ಕಾರ್ಯಕ್ರಮ ಮಾಡುವ ಅಗತ್ಯವೇ ಇರುವುದಿಲ್ಲ ಎಂದು ರೆಸಾರ್ಟ್ಸ್ ಓನರ್ ಅಸೋಸಿಯೇಷನ್ ವತಿಯಿಂದ ಕರೆ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ರೆಸಾರ್ಟ್ಸ್ ಓನರ್ ಅಸೋಸಿಯೇಷನ್ ಅಧ್ಯಕ್ಷರು ಮಸ್ತಾರೆ ಲೋಕೇಶ್, ಎಂ. ಬಿ. ರಾಜೀವ್ , ಹರೀಶ್ & ಸುಧೀರ್, ವಿಶ್ವನಾಥ್ & ಅಶ್ವಥ್, ಕಾಡುಮಕ್ಕಿ ಹರೀಶ್, ಸಂತೋಷ್, ಪೃಥ್ವಿ, ಚಂದ್ರಶೇಖರ್, ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ರೆಸಾರ್ಟ್ ಹಾಗೂ ಹೋಂಸ್ಟೇ ಇರುವ ಎಲ್ಲಾ ತಾಲ್ಲೂಕಿನಲ್ಲಿ ಈ ರೀತಿಯ ಕ್ರಮವನ್ನು ಅನುಸರಿಸಿದರೆ ಉತ್ತಮ ಎನ್ನುವುದೇ ನಮ್ಮ ಅವಿನ್ ಟಿವಿಯ ಕಳಕಳಿ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *