day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಕೋಮುವಾದ ಎಂಬ ವಿಷ ಸರ್ಪದ ಹಲ್ಲು ಮುರಿಯಬೇಕು – ರಾ.ಚಿಂತನ್.” – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

“ಕೋಮುವಾದ ಎಂಬ ವಿಷ ಸರ್ಪದ ಹಲ್ಲು ಮುರಿಯಬೇಕು – ರಾ.ಚಿಂತನ್.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮಂಗಳೂರು ಬಿಟ್ಟರೇ ಚಿಕ್ಕಮಗಳೂರಿನಲ್ಲಿ ಕೋಮುವಾದ ನಿಗಿನಿಗಿ ಕೆಂಡ ಎಂಬ ವಾತಾವರಣವಿತ್ತು. ಈ ಜಿಲ್ಲೆಯವರಾದ ಫೈರ್ ಬ್ರಾಂಡ್ ಮಹೇಂದ್ರ ಕುಮಾರ್, ಸುಧೀರ್ ಮುರೊಳ್ಳಿ ಜೊತೆಗೆ ಸಿ.ಟಿ.ರವಿ ಮುಂತಾದ ಆರೆಸೆಸ್ ಕಾರ್ಯಕರ್ತರ ಪಾತ್ರ ಪ್ರಮುಖ ಕಾರಣ. ಕಡೆಗೆ ಮಹೇಂದ್ರ ಕುಮಾರ್, ಸುಧೀರ್ ಮುರೊಳ್ಳಿ ಇನ್ನಿತರರು ಆ ವಿಷವರ್ತುಲದಿಂದ ಹೊರಬಂದು ಅದೆಂಥಾ ಅಪಾಯಕಾರಿ ಜಗತ್ತು ಎಂದು ಯುವಜನತೆಯಲ್ಲಿ ಜಾಗೃತಿ ಮೂಡಿಸತೊಡಗಿದರು. ಆದರೆ ಬಡ ರವಿ ಅಲ್ಲಿಯೇ ಇದ್ದು ಫಲವುಂಡು ಪದವಿ ಪಡೆದು ಬೀಗತೊಡಗಿದ. ಈ ರವಿಯ ಪ್ರತಿ ಭಾಷಣವನ್ನು ಸೂಕ್ಷ್ಮವಾಗಿ ಕೇಳಿನೋಡಿ, ಪಾಕಿಸ್ತಾನ, ಜಿಹಾದ್ ಎಂದು ಸದಾ ಮುಸಲ್ಮಾನರನ್ನು ದ್ವೇಷಿಸಿ ಲಾಭ ಪಡೆಯುವ ಪ್ರಯತ್ನಗಳೇ ಇರುತ್ತವೆ. ಆದರೆ ಅತಿಯಾದರೆ ವಾಂತಿಯಾಗುತ್ತದೆ ಎನ್ನುವ ವಾಸ್ತವತೆಯನ್ನು ಮರೆತುಬಿಟ್ಟ!

ಹೇಳಿ ಕೇಳಿ ನನ್ನೂರು ಶಿವಮೊಗ್ಗವಾಗಲೀ, ಚಿಕ್ಕಮಗಳೂರಾಗಲೀ ಹೆಚ್ಚು ಅಡಿಕೆ ಬೆಳೆಯುತ್ತೇವೆ. ಬೆಳೆಯುವವನು ಒಕ್ಕಲಿಗನಾದರೇ ಮಾರುವವರು ಮುಸಲ್ಮಾನರು ಎಂಬ ಶುದ್ಧ ಹೊಟ್ಟೆಪಾಡಿನ ಸಂಬಂಧವಿದೆ. ಅದರಲ್ಲೂ ಚಿಕ್ಕಮಗಳೂರಿನ ಪ್ರಮುಖ ಬೆಳೆಯಾದ ಕಾಫಿಯನ್ನು ಆ ಪುಣ್ಯಭೂಮಿಗೆ ತಂದಿದ್ದೆ ಬಾಬಾ ಬುಡನ್ ಸಾಹೇಬರು. ಇವತ್ತಿಗೂ ಮುಸಲ್ಮಾನರಿಗಿಂತ ಹೆಚ್ಚು ಬಾಬಾ ಬುಡನ್ ಗಿರಿಯ ಆರಾಧಕರು ಅಲ್ಲಿನ ಹಿಂದೂಗಳು. ಈ ಜಾಗದಲ್ಲಿ ದತ್ತಪೀಠ ಸಂಘರ್ಷವನ್ನು ಬೆಳೆಸುತ್ತಾ ಕಾಯ್ದಿರಿಸಿಕೊಂಡು ಬಂದವರಲ್ಲಿ ರವಿಯಂತವರ ಪಾತ್ರ ದೊಡ್ಡದಿದೆ. ಇತ್ತೀಚಿನ ದಿನಗಳಲ್ಲಂತೂ ಇವರೆಲ್ಲರೂ ಮಿತಿಮೀರಿದರು. ಮಹೇಂದ್ರ ಕುಮಾರ್ ಎಂಬ ಅಮೂಲ್ಯವಾದ ಜೀವವೂ ಈ ಅತ್ಯಗತ್ಯ ಸಂದರ್ಭದಲ್ಲಿ ಹೊರಟುಹೋಯಿತು. ಆ ಭಾಗದಲ್ಲಿ ಸುಧೀರ್ ಒಬ್ಬರೇ ಕೋಮುವಾದದ ವಿರುದ್ಧದ ಒಂಟಿ ಧ್ವನಿಯಾದರೂ ಸಾವಿರಾರು ಸಂಖ್ಯೆಯಲ್ಲಿ ಯುವಕರನ್ನು ಅಲ್ಲಿಂದ ಹೊರತರುವಲ್ಲಿ ಯಶಸ್ವಿಯಾದರು. ಆ ಪ್ರಯತ್ನ ಮತ್ತು ಪ್ರಕ್ರಿಯೆ ಈ ಕ್ಷಣಕ್ಕೂ ಮುಂದುವರಿದಿದೆ.

ಇವರ ಜೊತೆ ಕಳೆದ ಒಂದು ವರ್ಷದಿಂದ ಈ ಭಾಗದಲ್ಲಿ ಕೋಮುವಾದದ ವಿರುದ್ಧ, ಮನುಷ್ಯತ್ವದ ಪರ ಅನೇಕ ಕಾರ್ಯಾಗಾರ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಾನು ಭಾಷಣ ಮಾಡಿದ್ದೇನೆ. ಗುಪ್ತಸಭೆ, ಕ್ಲುಪ್ತಸಭೆ, ಮಹಾಸಭೆ, ಬೈಕ್ ರ್ಯಾಲಿ ಅನೇಕ ಹಂತಗಳಲ್ಲಿ ಕೋಮುವಾದದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ನಿರ್ವಹಿಸಿದ್ದೇನೆ.

ನನ್ನಂತೆ ನೂರಾರು ಜನರು ನಾಡಿನ ಮೂಲೆಮೂಲೆಯಲ್ಲೂ ಸ್ವಾರ್ಥರಹಿತವಾಗಿ ಅಪ್ಪಟ ಕನ್ನಡನಾಡಿನ ಮಕ್ಕಳಾಗಿ ಈ ಸಮಾಜವಾದದ ನೆಲದ ಸೊಗಡನ್ನು ಉಳಿಸಲು ಪ್ರಯತ್ನಪಟ್ಟಿದ್ದಾರೆ, Ofcourse ಪಡುತ್ತಿದ್ದಾರೆ.

ಬಹುಶಃ ಇವೆಲ್ಲದರ ಪ್ರತಿಫಲವಾಗಿ ಇವತ್ತು ಸಿ.ಟಿ.ರವಿಯ ಅವಶ್ಯ ಸೋಲು ಸೇರಿದಂತೆ ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋಮುವಾದಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ.

ಕೆಲಸ ಇಲ್ಲಿಗೆ ಮುಗಿದಿಲ್ಲ, ದ್ವೇಷದ ಮಾರುಕಟ್ಟೆಯಲ್ಲಿ ಈಗಷ್ಟೆ ಪ್ರೀತಿಯ ಅಂಗಡಿ ತೆರೆದಿದ್ದೇವೆ. ದ್ವೇಷವುಂಡ ಗಿರಾಕಿಗಳನ್ನು ಇತ್ತ ಕರೆದುಕೊಂಡು ಬರುವ ಬಹುದೊಡ್ಡ task ನಮ್ಮ ಮುಂದಿದೆ. ಆ ಪ್ರಯತ್ನ ನಿಲ್ಲಿಸದಿರೋಣ.

ಅಂದಹಾಗೇ… ಈ ಕೆಳಗಿನ ಭಾಷಣದ ತುಣುಕು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಚೀಟಿ ರವಿಯನ್ನು ಉದ್ದೇಶಿಸಿ ಮಾಡಿದ್ದು. ಈಗಾಗಲೇ ಕೇಳಿರುತ್ತೀರಿ, ಮತ್ತೊಮ್ಮೆ ಕೇಳಿ, ರವಿಯಂತವರ ಅಧಃಪತನ ಆರಂಭವಾಗಿದ್ದು ಎಲ್ಲಿಂದ ಎಂಬ Clarity ನಿಮಗೆ ಸಿಗುತ್ತದೆ.

ಬರಹ ಕೃಪೆ.

ರಾ.ಚಿಂತನ್

ಹೋರಾಟಗಾರರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *