ಸ್ವಚ್ಛತಾ ಕಾರ್ಯಕ್ರಮ ಹಾಗೂ ಪರಿಸರ ಜಾಗೃತಿ ಅಭಿಯಾನ.. ಮೂಡಿಗೆರೆ….
1 min read
ಸ್ವಚ್ಛತಾ ಕಾರ್ಯಕ್ರಮ ಹಾಗೂ ಪರಿಸರ ಜಾಗೃತಿ ಅಭಿಯಾನ.. ಮೂಡಿಗೆರೆ.
ಮೂಡಿಗೆರೆಯ ಹಸಿರು ಫೌಂಡೇಶನ್ ವತಿಯಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿಯ ಸುಂಕಸಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಲಿಗೆ ಗ್ರಾಮದ ಮೈದಾಡಿ ಪ್ರವಾಸಿ ತಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಪರಿಸರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು… ಕಾರ್ಯಕ್ರಮದಲ್ಲಿ ಮೂಡಿಗೆರೆಯ ಕೈಗಾರಿಕಾ ತರಬೇತಿ ಕೇಂದ್ರದ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು..
__ಮೈದಾಡಿ ಸುತ್ತ ಮುತ್ತಲಿನ ಹಚ್ಚ ಹಸಿರಿನ ಪ್ರದೇಶದಲ್ಲಿ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.. ಪರಿಸರ ಕಾಳಜಿ ನಮ್ಮೆಲ್ಲರ ಕರ್ತವ್ಯ ಎಲ್ಲರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮುಂದಿನ ಪೀಳಿಗೆಗೆ ಒಳ್ಳೆ ಗಾಳಿ ನೀರು ಸಿಗಲು ಸಾಧ್ಯ ಎಂದು ಹಸಿರು ಫೌಂಡೇಶನ್ ಸಂಸ್ಥಾಪಕ ರತನ್ ದೇವ್ ಊರುಬಗೆ ತಿಳಿಸಿದರು.. ಕಾರ್ಯಕ್ರಮದಲ್ಲಿ ಹಸಿರು ಫೌಂಡೇಶನ್ ಉಪಾಧ್ಯಕ್ಷರಾದ ವಿನುಪ್ರಸಾದ್, ಸಚಿನ್ ದುರ್ಗದಹಳ್ಳಿ, ಸಚಿನ್ ಸುಂಕಸಾಲೆ, ಹಾಗೂ ಸ್ಥಳೀಯರು ಹಾಜರಿದ್ದರು. ಕಾರ್ಯಕ್ರಮಕ್ಕೆ ಸ್ಥಳೀಯರು ಸಹಕಾರ ಕೂಡ ಸ್ಮರಿಸಿ ಪ್ರತಿಯೊಬ್ಬರಿಗೂ ಧನ್ಯವಾದಗಳು ಅರ್ಪಿಸಿದರು 💐💐

