लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸುತ್ತೂರು ಶ್ರೀಗಳೊಂದಿಗೆ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮಾತುಕತೆ..

1 min read

ಅವಿನ್ ಟಿವಿ ಸುದ್ದಿಜಾಲ ✒️: ಸುತ್ತೂರು ಶ್ರೀಗಳೊಂದಿಗೆ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮಾತುಕತೆ.
•••••••••••••••
ಮೈಸೂರು: ಬರವಣಿಗೆಗಿಂತ ಜೀವನ ಎಂಬುದು ಇದಿಯಲ್ಲ ಅದೇ ಒಂದು ದೊಡ್ಡ ಸಾಹಿತ್ಯ ಮತ್ತು ತತ್ವಜ್ಞಾನ ಅಗಿರುತ್ತದೆ.

ಬಸವಣ್ಣನವರಾದಿಯಾಗಿ 12ನೇ ಶತಮಾನದ ವಚನಕಾರರೆಲ್ಲರ ಬದುಕೆ ಒಂದು ಸಾಹಿತ್ಯ ಮತ್ತು ತತ್ವಜ್ಞಾನ ಆಗಿತ್ತು, ಅವರು ಹೇಗೆ ಬದುಕಿದರೂ ಹಾಗೆ ಬರೆದವರು. ಅನುಭವವನ್ನು ದಕ್ಕಿಸಿಕೊಂಡು ಅಕ್ಷರಗಳ ಮೂಲಕ ಅದನ್ನು ದಾಖಲಿಸಿದರು, ಸರಳವಾಗಿ ಸುಲಭವಾಗಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ಅದನ್ನು ಕಟ್ಟಿಕೊಟ್ಟರು, ಈ ರೀತಿ ಕಟ್ಟಿಕೊಟ್ಟ ಎಲ್ಲ ಅನುಭವಗಳಿಗೆ *ವಚನ* ಎಂದು ನಾಮಕರಣ ಮಾಡಿದರು, ವಚನ ಅಂದರೆ ಪ್ರಾಮಿಸ್ ಅಥವಾ ಭರವಸೆ ಎನ್ನಬಹುದು.

ನಾಡಿಗೆ, ಜಗತ್ತಿಗೆ, ಈ ಜಗತ್ತಿನ ಸರ್ವಕಾಲಕ್ಕೂ ಅನ್ವಯವಾಗುವಂತೆ ವಚನಗಳ ಹೆಸರಿನಲ್ಲಿ ಭರವಸೆಯನ್ನು ಕಟ್ಟಿಕೊಟ್ಟ ವಚನಗಳನ್ನು ನಾವುಗಳು ಇದುವರೆಗೆ ಹೇಗೆ ಕೇಳಿಸಿಕೊಂಡಿದ್ದೇವೆ , ವಚನಗಳ ಪಾರಂಪರಿಕ ಓದು ಮತ್ತು ಪಲ್ಲಟಗಳನ್ನು ಕುರಿತು ಮರು ಓದಿಗಾಗಿ ನಾವು ಹೇಗೆ ಮತ್ತೆ ತೆರೆದುಕೊಳ್ಳಬಹುದು? ಎಂಬ ವಿಚಾರವಾಗಿ ~ ಚಿಕ್ಕಮಗಳೂರು ನಗರದಲ್ಲಿ 2026ರ ಫೆಬ್ರವರಿ 09ರಿಂದ 11ರವರೆಗೆ ಮೂರು ದಿನಗಳ ಕಾಲ ವಿಚಾರಗೋಷ್ಠಿ ಮತ್ತು ಶರಣ ಸಾಹಿತ್ಯ ಪರಿಷತ್ತಿನ 40ರ ಸಂಭ್ರಮ ಆಚರಿಸುವು ಸಂಬಂಧ , ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾಗಿರುವ ಶ್ರೀ ಸುತ್ತೂರು ಶ್ರೀಗಳವರನ್ನು ಇತ್ತೀಚಿಗೆ ಮೈಸೂರಿನಲ್ಲಿ ಚಿಕ್ಕಮಗಳೂರು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಭೇಟಿ ಮಾಡಿ,ಮಾತುಕತೆ ನಡೆಸಿ ,ವಿಚಾರಗೋಷ್ಠಿಯ ರೂಪ ರೇಷೆಗಳನ್ನು ಸಮಗ್ರವಾಗಿ ಚರ್ಚಿಸಿ, ಕಾರ್ಯಕ್ರಮವನ್ನು ನಡೆಸಲು ಶ್ರೀಗಳ ಮಾರ್ಗದರ್ಶನವನ್ನು ಪಡೆಯಿತು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾದ ರವೀಶ್ ಕ್ಯಾತನ ಬೀಡು, ಪರಿಷತ್ತಿನ ಹಿರಿಯ ಗೌರವ ಸಲಹೆಗಾರರಾದ ಮುಗುಳುವಳ್ಳಿ ಗುರುಶಾಂತಪ್ಪ, ಖಜಾಂಚಿ ನಟರಾಜ್ ಎಸ್ ಕೊಪ್ಪಲು , ಜಿಲ್ಲಾ ಸಂಚಾಲಕ ಪಿಳ್ಳೆನಹಳ್ಳಿ ವಿಜಯಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed