ಸಾವೆಂಬ ನೋವಿನಲ್ಲೂ ಸಾರ್ಥಕತೆಯ ಬಾಷ್ಯ ಬರೆದ ಪತ್ನಿ ಅಪೂರ್ವ ಶೆಟ್ಟಿ…..
1 min read
ಅವಿನ್ ಟಿವಿ ಸುದ್ದಿಜಾಲ ✒️: ಸಾವೆಂಬ ನೋವಿನಲ್ಲೂ ಸಾರ್ಥಕತೆಯ ಬಾಷ್ಯ ಬರೆದ ಪತ್ನಿ ಅಪೂರ್ವ ಶೆಟ್ಟಿ~ ಅಂಗಾಂಗ ದಾನದ ಮೂಲಕ ಚಿರಾಯು ಆದ ಮೃತ ಮಂಜುನಾಥ.
ಕೊಪ್ಪ ಫೆ ೦೫ : ಅಪಘಾತದಿಂದ ಅಕಾಲಿಕವಾಗಿ ಸಾವನ್ನಪ್ಪಿದ ಕೊಪ್ಪದ ಮಂಜುನಾಥ ಅವರ ಅಂಗಾಂಗ ದಾನ ಮಾಡುವ ಮೂಲಕ ನೊಂದ ಕುಟುಂಬವು ತಮ್ಮ ಕಣ್ಣೀರಿನ ಮಧ್ಯೆಯೂ ಸಾರ್ಥಕತೆ ಮೆರೆದಿದೆ.
ಗಂಡನ ಸಾವಿನ ನೋವಿನಲ್ಲೂ ಅಂಗಾಂಗ ದಾನಕ್ಕೆ ಪತ್ನಿ ಅಪೂರ್ವ ಶೆಟ್ಟಿ ಸಮ್ಮತಿಸಿದ್ದು ಮಾತ್ರವಲ್ಲ ಈ ಸಂದರ್ಭದಲ್ಲಿ ಆಸ್ಪತ್ರೆಯ ವೆಚ್ಚವನ್ನು ಆಸ್ಪತ್ರೆಯೇ ಬರಿಸುತ್ತದೆ ಎಂಬುದನ್ನು ನಿರಾಕರಿಸಿ, ಆಸ್ಪತ್ರೆಯ ವೆಚ್ಚವನ್ನು ತಾನೇ ಪಾವತಿಸಿ ಸ್ವಾಭಿಮಾನದೊಂದಿಗೆ ಅಂಗಾಂಗ ದಾನ ಮಾಡಿದ್ದಾರೆ.
ಇತ್ತೀಚಿಗೆ ಆಟೋ ಅಪಘಾತದಲ್ಲಿ 35ರ ವಯೋಮಾನದ ಮಂಜುನಾಥ್ ಅವರ ಮೆದುಳು ನಿಷ್ಕ್ರಿಯಗೊಂಡ ಕಾರಣ ಕೊಪ್ಪ ಮತ್ತು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ, ಮೆದುಳು ನಿಷ್ಕ್ರಿಯಗೊಂಡ ಕಾರಣ
ಸರ್ಕಾರದ ಮೂಲಕ ಅಂಗಾಂಗ ದಾನಕ್ಕೆ ಪತ್ನಿ ಮುಂದಾಗಿ,
ಕೊಪ್ಪ ತಾಲೂಕಿನ ಪ್ರಶುಮನಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ಜರುಗಿತು.
ಇಂದು ಮಧ್ಯಾಹ್ನ ಮುಂಜುನಾಥ್ ಅವರ ಹೃದಯ, ಕಿಡ್ನಿ, ಲಿವರ್ ಸೇರಿ ಅಂಗಾಂಗದಾನ ಮಾಡಲಾಗಿದೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿದ್ದಕ್ಕಾಗಿ ಆಸ್ಪತ್ರೆಯ ಶುಲ್ಕ ಮನ್ನಾ ಮಾಡ್ತೀವಿ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಹೇಳಿದರು ಸಹ, ಇದಕ್ಕೆ ಒಪ್ಪದ ಪತ್ನಿ ಅಪೂರ್ವ ಶೆಟ್ಟಿ ಆಸ್ಪತ್ರೆಯ ವೆಚ್ಚವನ್ನು ಪಾವತಿಸಿ ಪತಿಯ ದೇಹ ತಂದಿದ್ದಾರೆ .
ತನ್ನ ಪತಿ ಮತ್ತೊಬ್ಬರಲ್ಲಿ ಜೀವಂತವಾಗಿರಲಿ ಎಂದು ಪತಿಯ ಅಂಗಾಂಗ ದಾನ ಮಾಡಿ ಸಾರ್ಥಕತೆ ಮತ್ತು ಸ್ವಾಭಿಮಾನ ಈ ಎರಡನ್ನು ಮೆರೆದಿರುವ ಪತ್ನಿ ಅಪೂರ್ವ ಶೆಟ್ಟಿಯವರಿಗೆ
ನಾಲ್ಕು ವರ್ಷ ಹಾಗೂ ಒಂದು ವರ್ಷದ ಎರಡು ಗಂಡು ಮಕ್ಕಳಿದ್ದು, ಆರ್ಥಿಕವಾಗಿ ಬಡತನದಲ್ಲಿರುವ
ಈ ಕುಟುಂಬದ ಮಕ್ಕಳ ವಿದ್ಯಾಬ್ಯಾಸದ ಬಗ್ಗೆ ಸಂಘ ಸಂಸ್ಥೆಗಳು ಸಹಾಯ ಮಾಡಿ ಸಹೋದರಿಗೆ ಧೈರ್ಯ ತುಂಬಿ ಸಾಂತ್ವಾನ ಹೇಳಬೇಕಾಗಿದೆ.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

