ಸಾಧನೆ ಹಾದಿಯಲ್ಲಿ ಡಾ. ಹರೀಶ ನಲ್ಲಿಕೆ..
1 min read
ಸಾಧನೆ ಹಾದಿಯಲ್ಲಿ ಡಾ. ಹರೀಶ ನಲ್ಲಿಕೆ
ಪ್ರತಿಯೊಂದು ಗ್ರಾಮ. ತಾಲೂಕು. ಜಿಲ್ಲೆ. ರಾಜ್ಯ.ದೇಶದಲ್ಲಿ ಗಮನಿಸಿದಾಗ ಒಂದಲ್ಲ ಒಂದು ರೀತಿಯ ಸಾಧನೆ ಮಾಡಿದವರಲ್ಲಿ ಆ ಗ್ರಾಮದಲ್ಲಿ ಹುಟ್ಟಿದ ಊರಿನವರಿಗಿಂತ ಬೇರೆ ಕಡೆಯಿಂದ ಬಂದು ಸಾಧನೆ ಮಾಡಿದವರೆ ಜಾಸ್ತಿ ಉದಾಹರಣೆಗೆ ಜರ್ಮನಿಯ ದೇಶದ ಕಿಟಲ್ ಅವರು ನಮ್ಮ ದೇಶಕ್ಕೆ ಬಂದು ಕನ್ನಡ ಕಲಿತು ಕನ್ನಡಕ್ಕೆ ನಿಘಂಟುಗಳನ್ನು ಬರೆದವರು ಅದೇ ರೀತಿಯಲ್ಲಿ ನನ್ನ ಆತ್ಮೀಯ ಗೆಳೆಯ ಹಾಸನ ಜಿಲ್ಲೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ನಲ್ಲಿಕೆ ಗ್ರಾಮ ಹರೀಶ್ ವಿದ್ಯಾಭ್ಯಾಸಕ್ಕಾಗಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಶ್ರೀ ಗಿರಿದರ್ಶಿನಿ ಕಾಲೇಜು ಹಾಸ್ಟೆಲ್ ನಲ್ಲಿ ಸೇರಿಕೊಂಡು ಆ ಕಾಲಘಟ್ಟದಲ್ಲಿ ಮೂಡಿಗೆರೆ ಆನೇಕ ಸಮಸ್ಯೆಗಳು ತುಂಬಿ ತುಳುಕುತ್ತ ಇದ್ದವು ಅನೇಕ ಸಂಘಟನೆಗಳು ನ್ಯಾಯಕ್ಕೆ ಹೋರಾಟ ಮಾಡಿಕೊಂಡು ಬರುತ್ತ ಇದ್ದುದನ್ನು ನೋಡಿ ವಿದ್ಯಾರ್ಥಿ ದೆಸೆಯಿಂದಲೆ ಚಳುವಳಿ ಹೋಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬಂದವರು ಆನೇಕ ಹಾಸ್ಟೆಲ್ ಊಟ. ವಸತಿ. ಮೂಲಭೂತ ಸೌಕರ್ಯಗಳ ಬಗ್ಗೆ ಧ್ವನಿ ಎತ್ತುವ ನಾಯಕರಲ್ಲಿ ಹರೀಶ್ ಒಬ್ಬರಾದವರು ಅವರ ಹೋರಾಟದ ಫಲವಾಗಿ ಇಂದು ಹೊಸ ಹಾಸ್ಟೆಲ್ ಗಳು ಆಗಿವೆ ಉತ್ತಮ ಸೌಲಭ್ಯ ದೊರಕಿದೆ. ಇದರ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ನೂರಾರು ಹೋರಾಟಗಾರರ ತ್ಯಾಗ. ಪರಿಶ್ರಮ ಇದೇ ಎಂದು ತಿಳಿದ ಇವರು ಉನ್ನತ ಶಿಕ್ಷಣಕ್ಕಾಗಿ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿ ಯೋಗ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆದು ಕನ್ನಡ ವಿಶ್ವವಿದ್ಯಾಲಯದ ದಿಂದ ಚಿಕ್ಕಮಗಳೂರು ಜಿಲ್ಲೆಯ “ದಲಿತ ಚಳವಳಿ ಸಮಕಾಲೀನ ಅಧ್ಯಯನ “ಎಂಬಾ ಮಹಾ ಪ್ರಬಂಧವನ್ನು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದಲಿತ ಹೋರಾಟಗಾರ ಸಂಪರ್ಕ ಮಾಡಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿ. ಜಿಲ್ಲೆ ಹೋರಾಟಗಾರರನ್ನು ಸಂಪರ್ಕ ಮಾಡಿ ಅವರು ಅನುಭವಿಸಿದ ಹೋರಾಟದ ಬಗ್ಗೆ ಸುದೀರ್ಘ ಅಧ್ಯಯನ ಮಾಡಿ ಪ್ರಬಂಧವನ್ನು ಮಂಡಿಸಿದರು ಈ ಮಹಾ ಪ್ರಬಂಧಕ್ಕೆ ದಿನಾಂಕ 25-02-2026 ರಂದು ಕನ್ನಡ ವಿಶ್ವವಿದ್ಯಾಲಯದಿಂದ ಚಿಕ್ಕಮಗಳೂರು ಜಿಲ್ಲೆಯ “ದಲಿತ ಚಳವಳಿ ಸಮಕಾಲೀನ ಅಧ್ಯಯನ”
ಎಂಬ ಮಹಾ ಪ್ರಬಂಧಕ್ಕೆ ಕರ್ನಾಟಕ ಸರ್ಕಾರದ ಘನವೆತ್ತ ರಾಜ್ಯಪಾಲರಿಂದ ಪಿ. ಎಚ್. ಡಿ. ಪದವಿ ಪ್ರಮಾಣ ಪತ್ರ ಸ್ವೀಕರಿಸಿದ್ದು ಇವರ ಈ ಸಾಧನೆಯಿಂದ ನಮ್ಮ ತಾಲೂಕು ಮತ್ತು ಜಿಲ್ಲೆಗೆ ಹೆಮ್ಮೆ ತಂದಿದೆ ಇವರ ಮುಂದಿನ ಭವಿಷ್ಯ ಉಜ್ವಲವಾಗಲಿ ಯುವ ಪೀಳಿಗೆಗೆ ಇವರು ಮಾದರಿ ಆಗಿದ್ದರೆ ಇವರನ್ನು ಅಭಿನಂದಿಸುತ್ತ ನಿಮ್ಮ ಮಾರ್ಗದರ್ಶನ ಯುವ ಸಮುದಾಯಕ್ಕೆ ಸಿಗಲಿ ಅಭಿನಂದನೆಗಳು ಡಾ. ಹರೀಶ್ ನಲ್ಲಿಕೆ
ಶುಭಕೋರುವವರು
ಲೋಕೇಶ್ ಬೆಟ್ಟಗೆರೆ
ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು
ಬಣಕಲ್ ಹೋಬಳಿ ಘಟಕ

