ಸರ್ವ ಜನಾಂಗದ ಶಾಂತಿಯ ತೋಟ ಎಂಬ ನಾಡಗೀತೆಯನ್ನು ಕೊಟ್ಟ ವಿಶ್ವ ಮಾನವ . ನಾಡಗೀತೆ ನೂರರ ಸಂಭ್ರಮ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆ…..
1 min read

ಸರ್ವ ಜನಾಂಗದ ಶಾಂತಿಯ ತೋಟ ಎಂಬ ನಾಡಗೀತೆಯನ್ನು ಕೊಟ್ಟ ವಿಶ್ವ ಮಾನವ .
ನಾಡಗೀತೆ ನೂರರ ಸಂಭ್ರಮ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆ





ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ.ಬಿ.ನಿಂಗಯ್ಯ ಮಾಜಿ ಸಚಿವರು ಕುವೆಂಪು ಅವರು ತಮ್ಮ 20ನೇ ವಯಸ್ಸಿನಲ್ಲಿ ಜಾತಿ ಧರ್ಮ ಎಲ್ಲಿಯನ್ನು ಮೀರಿ ಸರ್ವ ಜನಾಂಗದ ಶಾಂತಿಯ ತೋಟ ರಚಿಸಿ ಇದು ನಾಡಗೀತೆಯಾಗಿ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ನಾಡಿಗೆ ಸಂಭ್ರಮ ತಂದಿದೆ ವಿಶ್ವಮಾನವನಾಗಿ ಆದರ್ಶ ಬದುಕು ನಡೆಸಿದ ಮೇರು ವ್ಯಕ್ತಿತ್ವ ಹೊಂದಿದವರು ಕುವೆಂಪು ಎಂದು ನುಡಿದರು .ಮಗ್ಗಲಮಕ್ಕಿಗಣೇಶ್.ಕಸಾಪ.ಜಿಲ್ಲಾ ಸಂಚಾಲಕರು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕುವೆಂಪು ಅವರು ರಾಮಾಯಣ ದರ್ಶನಂ ಕೃತಿಗೆ ಮೊದಲ ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು .ಸರಳ ಜೀವನ ನಡೆಸಲು ಮಂತ್ರ ಮಾಂಗಲ್ಯವನ್ನ ಹೇಳಿಕೊಟ್ಟರು. ಇವರ ಬದುಕು ಯುವ ಪೀಳಿಗೆಗೆ ಮಾದರಿ ಆಗಲಿ ಎಂದು ಹೇಳಿದರು ಲೋಕೇಶ್ ಬೆಟ್ಟಗೆರೆ ಅಧ್ಯಕ್ಷತೆ ವಹಿಸಿದ್ದು ಕುವೆಂಪು ಅವರ ಹೆಸರಿನಲ್ಲಿ ಅಶ್ವಿನಿ ಸಂತೋಷ್ ಗಾಯಕಿ ಇವರಿಗೆ ,”ಕುವೆಂಪು ಗಾನ ಸಿರಿ ” ಪ್ರಶಸ್ತಿ ಪ್ರಶಸ್ತಿಯನ್ನು .ಹೊರಟಿ ರಘು. ಸಮಾಜ ಸೇವಕರಾದ ಹಸೈನಾರ್. ಅಬ್ದುಲ್ ರೆಹಮಾನ್. ಎಂ. ಕೆ.. ಪಿ. ಕೆ. ಅಹಮದ್ ಕುಂಞ (ಫಿಶ್ ಮೋಣು) ಇವರಿಗೆ ವಿಶ್ವ ಮಾನವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶೇಖರಪ್ಪ ಹೆಚ್. ಎಸ್. ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ. ವಿದ್ಯಾ ಕೆ.. ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸತೀಶ್ ಶಿಕ್ಷಕರು. ಮೇಘನಾ ಶಿಕ್ಷಕಿ ಇವರನ್ನು ಅಭಿನಂದಿಸಲಾಯಿತು .ನಿವೃತ್ತ ನೌಕರಾದ ಬಿ. ಎಂ. ನಾಗರಾಜ್ ಬೆಟ್ಟಗೆರೆ. 2024-25 ನೇ ಸಾಲಿನಲ್ಲಿ ಕನ್ನಡದಲ್ಲಿ 125 .ಕ್ಕೆ 125 ಹಾಗೂ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಿಯಿತು ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ. ಸಂಘಟನಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್.ಕಸಾಪ ಮೂಡಿಗೆರೆಯ ಯುವ ಘಟಕದ ಅಧ್ಯಕ್ಷರಾದ ಚಂದ್ರು ಒಡೆಯರ್. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಝರೀನಾ .ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನವೀನ್.ಬಿ.ಆರ್. ಬಣಕಲ್ ಪಂಚಾಯಿತಿ ಅಬಿವೃದ್ಧಿ ಅಧಿಕಾರಿ ದರ್ಶನ. ಮಂಜನಾಥ್ ರಾಥೋಡ್. ನಾಗರಾಜ್. ಆಶ್ರಪ್. ರವಿ ಕುನ್ನಳ್ಳಿ. ಪ್ರಧಾನ ಸಂಚಾಲಕರಾದ ಸುಪ್ರೀತ್ ಬೆಟ್ಟಗೆರೆ. ರಾಮಚಂದ್ರ.ಚೇತನ್ ಶಿಕ್ಷಕರು ಕನ್ನಡ ಅಭಿಮಾನಿಗಳು.ಕಸಾಪ ಪದಾದಿಕಾರಿಗಳು.ಸಾರ್ವಜನಿಕರು ಇದ್ದರು ಕಸಾಪ ನಿಕಟ ಪೂರ್ವ ಅಧ್ಯಕ್ಷರಾದ ವಸಂತ್ ಹಾರ್ಗೂಡ್ ಸ್ವಾಗತಿಸಿ ಗೌರವ ಕಾರ್ಯದರ್ಶಿಗಳಾದ ಭಕ್ತೇಶ್ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು

