लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಮಾನತೆ ಮತ್ತು ವೈಚಾರಿಕತೆ ವಚನಗಳೋಳಗಿರುವ ಎರಡು ಕಣ್ಣುಗಳು,…

1 min read

ಅವಿನ್ ಟಿವಿ ಸುದ್ದಿಜಾಲ ✒️: ಸಮಾನತೆ ಮತ್ತು ವೈಚಾರಿಕತೆ ವಚನಗಳೋಳಗಿರುವ ಎರಡು ಕಣ್ಣುಗಳು,

ಬೆಂಗಳೂರಿನಲ್ಲಿ ನಾಡೋಜ ಗೊರುಚ ಮತ್ತು ಡಾ.ಸಿ.ಸೋಮಶೇಖರ್ ರವರ ಭೇಟಿ.
••••••••••••••••
ಬೆಂಗಳೂರು: ಮಾನವ ಸಂಬಂಧಗಳು ಗಾಢವಾಗಿ ಪರಸ್ಪರ ಒಬ್ಬರನ್ನೊಬ್ಬರು ತಬ್ಬಿಕೊಳ್ಳದ ಹೊರತು ನಮ್ಮ ಯಾವ ವಿಚಾರಧಾರೆಗಳು ಜನರಿಗೆ ತಲುಪಲು ಸಾಧ್ಯವಿಲ್ಲ, ನುಡಿ ನೈತಿಕತೆ ಎಂಬುದು ನಮ್ಮದಾದಗ ಮಾತ್ರ ನಾವು ಬರೆದ ಸಾಹಿತ್ಯಕ್ಕೆ, ನಾವಾಡುವ ಮಾತಿಗೆ ಚೈತನ್ಯ ಬರುತ್ತದೆ. ನುಡಿ ನೈತಿಕತೆಯನ್ನು ತಮ್ಮದಾಗಿಸಿಕೊಂಡಿದ್ದ ಕಾರಣಕ್ಕಾಗಿ 12ನೇ ಶತಮಾನದ ಕಲ್ಯಾಣದ ಶರಣರ ವಚನಗಳು ಇಂದಿಗೂ ಒಂದು ಚಾರಿತ್ರಿಕ ಶಕ್ತಿಯಾಗಿ, ಬೆಳಗುವ ದೀಪವಾಗಿ, ದಿಕ್ಸೂಚಿ ತೋರಿಸುವ ಕೈಮರದಂತೆ ಗೋಚರಿಸುತ್ತಿವೆ.

12ನೇ ಶತಮಾನ ಸಮಾನತೆಗಾಗಿ ಜನಾಂದೋಲನವನ್ನು ರೂಪಿಸಿದರೆ ವರ್ತಮಾನದ 21ನೇ ಶತಮಾನ ಸೌಹಾರ್ದತೆಗಾಗಿ ಬೀದಿಗಿಳಿದು ಜನರ ಹತ್ತಿರ ಹೋಗಬೇಕಾಗಿದೆ, ಅವರ ಹೃದಯವನ್ನು ಮುಟ್ಟಿ ತಟ್ಟಿ ಎಚ್ಚರಗೊಳಿಸಬೇಕಾಗಿದೆ, ವಚನಕಾರರು ಧರ್ಮವನ್ನು ವೈಯಕ್ತಿಕವಾಗಿ ಮಾತ್ರ ಭಾವಿಸಿ ಆಚರಿಸುತ್ತಿದ್ದರು ಎಂಬುದನ್ನು ಒತ್ತಿ ಒತ್ತಿ ತಿಳಿ ಹೇಳಬೇಕಾಗಿದೆ.

ಹೀಗಾಗಿ,
ವಚನಗಳ ಓದು ಮತ್ತು ವಚನ ಚಳುವಳಿಯನ್ನು ಕುರಿತು ಒಂದು
*ರೀ ವಿಸಿಟ್* ಮಾಡಲು ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು 2026ರ ಫೆಬ್ರವರಿ 09ರಿಂದ 11ರ ವರೆಗೆ ಮೂರು ದಿನಗಳ ಕಾಲ ಚಿಕ್ಕಮಗಳೂರು ನಗರದಲ್ಲಿ ಹಮ್ಮಿಕೊಂಡಿರುವ ಶರಣ ಸಾಹಿತ್ಯ ಪರಿಷತ್ತಿನ 40ರ ಸಂಭ್ರಮ ಮತ್ತು ವಚನ: ನಾನು ಹೀಗೆ ಕೇಳಿಸಿಕೊಂಡಿದ್ದು ಎಂಬ ವಿಚಾರಗೋಷ್ಠಿಗಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಗೌರವ ಸಲಹೆಗಾರರಾದ ನಾಡೋಜ ಗೊರುಚ ಮತ್ತು ಅಧ್ಯಕ್ಷರಾದ ಡಾ.ಸಿ. ಸೋಮಶೇಖರ್ ಅವರನ್ನು ಇತ್ತೀಚಿಗೆ ಬೆಂಗಳೂರಿನಲ್ಲಿ ಭೇಟಿ ಮಾಡಿ ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೇಂದ್ರ ಉಪಾಧ್ಯಕ್ಷರಾದ ಸಿಂ.
ರಾ. ಹೊನ್ನಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಸಿ. ಗಾಂಜಿ ಮುಂತಾದವರು ಉಪಸ್ಥಿತರಿದ್ದರು.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed