लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಸಂಸ್ಕೃತಿ. ಪರಂಪರೆಯನ್ನು ಬಿಂಬಿಸುವ ವಸ್ತು ಪ್ರದರ್ಶನ : ತಾ.ಪಂ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ.ಸಿ ರಮೇಶ್.”

1 min read

ವಸ್ತು ಸಂಗ್ರಹಕಾರರಾದ ಅಶೋಕ್ ಅವರ ಸಂಗ್ರಹದಲ್ಲಿರುವ ಅಪೂರ್ವವಾದ ವಸ್ತುಗಳು ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುತ್ತವೆ ಎಂದು ತಾ.ಪಂ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ.ಸಿ ರಮೇಶ್ ಹೇಳಿದರು.ಮೂಡಿಗೆರೆ ಪಟ್ಟಣದ ದೀನ್ ದಯಾಳ್ ಸಭಾ ಭವನದಲ್ಲಿ ಕಳೆದ ೪ ದಿನಗಳಿಂದ ನಡೆಯುತ್ತಿರುವ ವಸ್ತು ಪ್ರದರ್ಶನದ ರೂವಾರಿ ಸಂಗ್ರಹಕಾರರಾದ ಅಶೋಕ್ ಅವರನ್ನು ಸನ್ಮಾನಿಸಿ ಮಾತನಾಡಿದರು.ಹಳೆಯ ಕ್ಯಾಮರಾಗಳು, ಗ್ರಾಮಾಪೋನ್, ಟೆಲೆಪೋನ್ ಸೇರಿದಂತೇ ಈಗ ಕಾಣಲು ಸಿಗದ ಆದರೆ ಅಪೂರ್ವವಾದ ಸಂಗ್ರಹಗಳು ಈ ವಸ್ತು ಪ್ರದರ್ಶನದಲ್ಲಿ ಪ್ರದರ್ಶನಗೊಂಡಿವೆ. ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಭೇಟಿ ನೀಡಿದ್ದು ಇಂತಹ ವಸ್ತು ಪ್ರದರ್ಶನಗಳು ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದರು.

ವಸ್ತು ಸಂಗ್ರಹಕಾರ ಅಶೋಕ್ ಮಾತನಾಡಿ, ವಸ್ತುಗಳನ್ನು ಸಂಗ್ರಹಿಸುವುದು ನನ್ನ ಹವ್ಯಾಸ. ಆದರೆ ಕೇವಲ ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೆ ಸೀಮಿತವಾಗಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅಪರೂಪದ ವಸ್ತುಗಳನ್ನು ತೋರಿಸುವ ಮೂಲಕ ಅವುಗಳ ಮಹತ್ವವನ್ನು ತಿಳಿಸಲು ಇಂತಹ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.ಈ ಸಂಧರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ.ಸಿ ರಮೇಶ್ ಅವರು, ವಸ್ತು ಸಂಗ್ರಹಕಾರ ಅಶೋಕ್ ಅವರನ್ನು ಸನ್ಮಾನಿಸಿ ಗೌರವಿಸಿದರು. ತಾ.ಪಂ ಸಿಬ್ಬಂದಿಗಳು ಇದ್ದರು.

✍🏻ಬರಹ ಕೃಪೆ.✍🏻

ನಂದೀಶ್ ಬಂಕೇನಹಳ್ಳಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *

You may have missed