ಸಂತ ಮಾರ್ಥಾಸ್ ಹಿರಿಯ ಪ್ರಾಥಮಿಕ ಶಾಲೆ, ಮೂಡಿಗೆರೆ ದಿನಾಂಕ 21. 2.26 ರಂದು ಪಠ್ಯತರ ಚಟುವಟಿಕೆಗಳ ಬಹುಮಾನ ವಿತರಣಾ ಸಮಾರಂಭ……
1 min read
ಸಂತ ಮಾರ್ಥಾಸ್ ಹಿರಿಯ ಪ್ರಾಥಮಿಕ ಶಾಲೆ, ಮೂಡಿಗೆರೆ ದಿನಾಂಕ 21. 2.26 ರಂದು ಪಠ್ಯತರ ಚಟುವಟಿಕೆಗಳ ಬಹುಮಾನ ವಿತರಣಾ ಸಮಾರಂಭ
ವನ್ನು ಹಮ್ಮಿಕೊಳ್ಳಲಾಗಿತ್ತು,
ಮೂಡಿಗೆರೆ ಸಬ್ ಇನ್ಸ್ಪೆಕ್ಟರ್ ಆದ ಶ್ರೀಹರ್ಷ ವರ್ಧನ್. ಶ್ರೀಯುತ ಇಮ್ರಾನ್ ವೈದಾಧಿಕಾರಿಗಳು ಎಂಜಿ ಹಾಸ್ಪಿಟಲ್, ನಿತಿನ್ ಕುವೆಲ್ಲೋ ಸಿವಿಲ್ ನ್ಯಾಯಾಧೀಶರು, ಶ್ರೀಯುತ ಲ್ಯಾನ್ಸಿ ವಾಸ್, ಶ್ರೀಯುತ ಮಧುಕುಮಾರ್ ಶ್ರೀಯುತ ಸುನಿಲ್ ಜೋಶ್ವ, ಮುಖ್ಯೋಪಾಧ್ಯಾಯರಾದ ಸಿಸ್ಟರ್ ಮೊಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮನ ಉದ್ಘಾಟಿಸಿ ಮಾತಾನಾಡಿದ ಶ್ರೀಯುತ ಹರ್ಷ ವರ್ಧನ್ ಸಬ್ ಇನ್ಸ್ಪೆಕ್ಟರ್ ಮೂಡಿಗೆರೆ ಇವರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡಲ್ಲಿ ಉತ್ತಮ ನಾಗರಿಕ ರಾಗಲು ಸಾಧ್ಯ,ದುಶ್ಚಟಗಳಿಗೆ ಮಾರುಹೋಗದೆ ಉತ್ತಮ ಅರೋಗ್ಯ ಕರ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ, ಸಮಾಜದಲ್ಲಿ ಯಾವುದೇ ರೀತಿ ಅಹಿ ತಕರ ಘಟನೆಗಳು ನಡೆದಲ್ಲಿ ಟೋಲ್ ಫ್ರೀ ನಂಬರ್ 112ಗೆ ಕರೆ ಮಾಡಿ ಮಾಹಿತಿ ನೀಡುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು.
ಡಾಕ್ಟರ್ ಇಮ್ರಾನ್ ವೈದ್ಯರು ಎಂ ಜಿ ಆಸ್ಪತ್ರೆ ಮೂಡಿಗೆರೆ ಮಾತನಾಡಿ ಸದೃಢ ದೇಹ ದಲ್ಲಿ ಸದೃಢ ಮನಸ್ಸಿದೆ ಹಾಗಾಗಿ ಎಲ್ಲರಿಗೂ ಆರೋಗ್ಯ ಬಗ್ಗೆ ಕಾಳಜಿ ಇರಬೇಕು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಮಹತ್ವ ವಹಿಸಬೇಕು ಗುಣಮಟ್ಟದ ಆಹಾರ ಸೇವನೆಯಿಂದ ಆರೋಗ್ಯವು ವೃದ್ಧಿಸುವುದು, ಜಂಕ್ ಫುಡ್ ಸೇವನೆ ಅರೋಗ್ಯ ಕ್ಕೆ ಮಾರಕ ಎಂದು ಸಲಹೆ ನೀಡಿದರು.
ನಿತಿನ್ ಕುವೆಲ್ಲೋ ಮಾತನಾಡಿ ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ವಿದ್ಯಾರ್ಥಿ ಜೀವನದಲ್ಲಿ ನಿಷ್ಠೆ,ಸಮಯ ಪ್ರಜ್ಞೆ, ಹಾಗೂ ದಿನನಿತ್ಯ ಪಾಠಗಳನ್ನ ಗಮನವಿಟ್ಟು ಆಲಿಸಿದ್ದಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ವೆಂದು ತಿಳಿಸಿದರು.
ಸಿಸ್ಟೆರ್ ಮೋಲಿ ಮಾತಾನಾಡಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ತರಲು ಶಾಲೆ ಗಳಲ್ಲಿ ಪಠ್ಯತರ ಚಟುವಟಿಕೆಗಳು ಅಗತ್ಯವಾಗಿದೆ ಶ್ರದ್ದೆ ಹಾಗೂ ಆಸಕ್ತಿ ಯಿಂದ ಭಾಗವಯಿಸುವುದರಿಂದ ಯಶಸ್ಸು ಲಭಿಸುವುದು ಎಂದು ತಿಳಿಸಿದರು. ಪಟ್ಟೆ ತಲೆ ಚಟುವಟಿಕೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು,ಹಾಗೂ ಇತ್ತೀಚೆಗೆ ಸಿವಿಲ್ ನ್ಯಾಯಾಧೀಶರು ಹುದ್ದೆಗೆ ಆಯ್ಕೆ ಯಾದ ಸಂತ ಮಾರ್ಥಾಸ್ ನಾ ವಿದ್ಯಾರ್ಥಿಯಾದ ನಿತಿನ್ ಕುವೆಲ್ಲೊ ರವರಿಗೆ ಸನ್ಮಾನಿಸಲಾಯಿತು.

