लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಸಂಘ ಪರಿವಾರ ತೋಡಿದ ಹಳ್ಳಕ್ಕೆ ಬಿದ್ದ ಕುರಿ ಗೋಪಾಲ್    ಕೆ ಎಮ್ ಗೋಪಾಲ್ ಶೃಂಗೇರಿ

1 min read

‎ಸಂಘ ಪರಿವಾರ ತೋಡಿದ ಹಳ್ಳಕ್ಕೆ ಬಿದ್ದ ಕುರಿ ಗೋಪಾಲ್
ಕೆ ಎಮ್ ಗೋಪಾಲ್ ಶೃಂಗೇರಿ ವಿಧಾನಸಭಾ ಕ್ಷೇತ್ರದ ರಾಜಕಾರಣಿಗಳಲ್ಲಿ ಒಂದು ಗೌರವಾನ್ವಿತ ಹೆಸರು ನೆನ್ನೆ ಮೊನ್ನೆಯವರೆಗೂ. ಎರಡು ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರ ದಲ್ಲಿ ಎರಡನೇ ಸ್ಥಾನದಲ್ಲಿ ಸೋತವರು. ಒಮ್ಮೆ ವಿಧಾನಸಭಾ ಚುನಾವಣೆಗೆ ನಿಂತು ಕಾಂಗ್ರೆಸ್ ನ ಡಿ ಬಿ ಚಂದ್ರೇಗೌಡರ ಸೋಲಿಗೆ ಕಾರಣವಾದವರು.ಆದರೆ ಇಂದು ಗೋಪಾಲ್ ತಮ್ಮ ಅರ್ಧ ಶತಮಾನಕ್ಕೂ ಹೆಚ್ಚಿನ ಸುದೀರ್ಘ ರಾಜಕೀಯ ಸಾಮಾಜಿಕ ಚಳುವಳಿಯ ಸಿದ್ದಾಂತವನ್ನು ಸಂಘ ಪರಿವಾರದ ಪದತಲದಲ್ಲಿಟ್ಟು ತಮ್ಮನ್ನು ಗೌರವಾನ್ವಿತ ಸೈದ್ದಾಂತಿಕ ಭದ್ದತೆಯುಳ್ಳ ರಾಜಕಾರಣಿಯಾಗಿ ನೋಡುತ್ತಿದ್ದ ಜನರ ಭಾವನೆಗಳಿಗೆ ಧಕ್ಕೆ ತಂದ ವೃತ್ತಿಪರ ರಾಜಕಾರಣಿಯಾಗಿ ಕಾಣುತ್ತಿದ್ದಾರೆ. ಸುಮಾರು 50 ವರ್ಷಗಳ ಕಾಲ ಮನುವಾದಿಗಳ ವಿರುದ್ಧ ಅಂಬೇಡ್ಕರ್ ಸಿದ್ದಾಂತವನ್ನು ಜನರಿಗೆ ಹೇಳುತ್ತಿದ್ದ ಗೋಪಾಲ್ ಈಗ ಮನುಷ್ಮೃತಿಯನ್ನೇ ಸಂವಿಧಾನ ವಾಗಬೇಕೆಂದು ಬಯಸಿದ್ದ.. ಸಹರ ಸಂಘ ಚಾಲಕರ ಚಿಂತನಗಂಗಾ ವನ್ನೇ ಜೀವಕೋಶವನ್ನಾಗಿಟ್ಟು ಕೊಂಡಿರುವ ಆರ್ ಎಸ್ ಎಸ್ 6,000 ಜಾತಿಗಳನ್ನ ಒಂದು ಮಾಡುವ ಒಂದು ಶಕ್ತಿಯನ್ನಾಗಿ ಕಾಣುತ್ತಿದ್ದಾರೆ. ಜಾತಿವಾದಿಗಳನ್ನು ಜಾತಿ ವಿನಾಶಕರೆಂದು ಹೇಳುವ ಮೂಲಕ ಗೋಪಾಲ್ ಏನನ್ನು ಸಾಧಿಸ ಹೊರಟಿದ್ದಾರೆ ಎಂಬುದೇ ಪ್ರಶ್ನಾರ್ಥಕವಾಗಿದೆ.
ಸ್ವಾಮೀಜಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಮೂಲಕ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಗೋಪಾಲ್ ಹೊರಟಿದ್ದಾರೆ ಯಾಕೆ? ಅನ್ಯಾಯ ಅಕ್ರಮಗಳ ವಿರುದ್ಧದ ದೂಷಣೆಯನ್ನು ಹಿಂದು ಧರ್ಮದ ಮೇಲಿನ ಆಕ್ರಮಣವೆಂದು ವಿಶ್ಲೇಷಿಸುವ ಮಟ್ಟಕ್ಕೆ ಗೋಪಾಲರಂತ ಮೇಧಾವಿ ಅಧ್ಯಯನಶೀಲರು ಬಂದಿದ್ದು ಈ ಸಮಾಜದ ದುರ್ದೈವ.
‎ಗೋಪಾಲ್ ರಂತವರನ್ನು ಹಿಂದೂ ಸಮಾಜೋತ್ಸವದಂತ ಆರ್ ಎಸ್ ಎಸ್ ಪ್ರಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿ ಬುದ್ಧಿವಂತರು ಹೋರಾಟಗಾರರು ತಮ್ಮ ವಿರುದ್ಧ ಧ್ವನಿಯುತ್ತದಂತೆ ಮಾಡುವ ಷಡ್ಯಂತ್ರ ಆರ್ ಎಸ್ ಎಸ್ ನದು . ಇದೀಗ ಆರ್ ಎಸ್ ಎಸ್   ಸಾಮ ಭೇದ ದಂಡ ಯಾವ ಮಾರ್ಗದಿಂದಲಾದರೂ ಸರಿ ದೇಶದಲ್ಲಿ ಆರ್ ಎಸ್ ಎಸ್ ನ ಮನುವಾದಕ್ಕೆ ವಿರೋಧವಿಲ್ಲದಂತೆ ಮಾಡುವ ಷಡ್ಯಂತ್ರವನ್ನು ಮಾಡುತ್ತಿದೆ. ಹೋರಾಟ ಮಾಡಿ ಮಾಡಿ ಬಸವಳಿದವರು, ಆಸೆ ಬುರುಕರು, ಇವರ ತೋಡಿದ ಹಳ್ಳಕ್ಕೆ ಬಿದ್ದು ಎದ್ದು ಬರಲಾರದೆ  ಬಾಯಿ ಬಡಿದುಕೊಳ್ಳುತ್ತಿದ್ದಾರೆ ……

About Author

Leave a Reply

Your email address will not be published. Required fields are marked *

You may have missed