लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ

‎ಸಂಗೊಳ್ಳಿ ರಾಯಣ್ಣ ನಾಡು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ ಕಪಿಮುಷ್ಠಿಯಿಂದ ನಲುಗುತ್ತಿದ್ದ ಭಾರತೀಯರಿಗೆ ನ್ಯಾಯ ಒದಗಿಸಲು ಪ್ರಾಣವನ್ನೆ ಅರ್ಪಿಸಿದ ‘ಧೀಮಂತ ಮಹಾಪುರುಷ ಎಂದು ಶಾಸಕಿ ನಯನ ಮೋಟಮ್ಮ ಹೇಳಿದರು.

‎ತಾಲ್ಲೂಕಿನ ಮರ್ಲೆ ಗ್ರಾ.ಪಂ. ವ್ಯಾಪ್ತಿಯ ರಾಮನಹಳ್ಳಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಲೋಕಾರ್ಪಣೆಗೊಳಿಸಿ ಸೋಮವಾರ ಸಂಜೆ ಅವರು ಮಾತನಾಡಿದರು.

‎ಹಾಗೂ ರಾಮನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಮೂಲಸೌಕರ್ಯಕ್ಕೆ ಲಕ್ಷಾಂತರ ರೂ. ಅನುದಾನ ನೀಡಲಾಗಿದೆ. ಅಲ್ಲದೇ ಉಸ್ತುವಾರಿ ಸಚಿವರು ಗ್ರಾಮದ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ.ಗಳು ಘೋಷಿಸಿದ್ದು ಹಂತ ಹಂತವಾಗಿ ನಿವಾಸಿಗಳ ಇತರೆ ಸೌಕರ್ಯಕ್ಕೆ ರಾಜ್ಯ ಸರ್ಕಾರ ಸ್ಪಂದಿಸಲಿದೆ ಎಂದರು.

‎ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ ದೀರ ಸೇನಾನಿ ಸಂಗೊಳ್ಳಿ ರಾಯಣ್ಣ ಅನ್ಯಾಯಕ್ಕೆ ಹೆದರದಿರುವ ಗಂಡು. ಆ ವಂಶಸ್ಥ ಕುಟುಂಬದಲ್ಲಿ ನಾವುಗಳು ಜನಿಸಿರುವುದಕ್ಕೆ ಸಂತೋಷ ತಂದಿದೆ. ಅವರ ಆಚಾರ-ವಿಚಾರ, ಸಂಸ್ಕೃತಿಗಳನ್ನು ಇಂದಿನ ಮಕ್ಕಳು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

‎ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಬ್ರಿಟಿಷ ರಿಗೆ ಸಿಂಹಸ್ವಪ್ನವಾಗಿದ್ದ ರಾಯಣ್ಣನವರು ನಮ್ಮ ಕುಲದವರೆಂದು ಹೇಳಿಕೊಳ್ಳಲು ಖುಷಿಯಿದೆ. ಶೌರ್ಯದ ಸಂಕೇತ ಹಾಗೂ ಸಮಾಜದ ಒಳಿತಿಗೆ ಜೀವನವನ್ನೇ ಮುಡಿಪಿಟ್ಟ ದಿಗ್ಗಜ, ಕುರುಬ ಜನಾಂಗ ನಾಡು ಹಾಗೂ ದೇಶವನ್ನು ಆಳಿದೆ. ಚಂದ್ರಗುಪ್ತ ಮೌ ರ್ಯ, ಕನಕದಾಸ ಕೀರ್ತನೆ ಮತ್ತು ಇಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಮುಖಂಡ ಆ‌ರ್. ಎಂ.ರುದ್ರೇಗೌಡ ವಹಿಸಿದ್ದರು.ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಕರ್ನಾಟಕ ಪ್ರದೇಶ ಕುರುಬ ಸಂಘದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌ ಡ ಮಾತನಾಡಿದರು. ಬಳಿಕ ಗ್ರಾಮದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

‎ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಎಸ್.ಕಾವ್ಯ ಸಂತೋಷ್, ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಆರ್.ಎಂ.ಬಸವರಾಜು, ಕಾಂಗ್ರೆಸ್ ಅಂಬಳೆ ಹೋಬಳಿ ಅಧ್ಯಕ್ಷ ಎಂ.ವಿಜಯ್‌ಕುಮಾರ್, ಪುತ್ಥಳಿ ನಿರ್ಮಾತೃ ರಾಮು, ರವಿಕುಮಾರ್, ಕಾಳೇಗೌಡ, ಮಾಜಿ ಗ್ರಾ.ಪಂ. ಅಧ್ಯಕ್ಷ ದಾಸೇಗೌಡ, ರಾಮನಹಳ್ಳಿ ಕಾಂಗ್ರೆಸ್ ಬೂತ್ ಅಧ್ಯಕ್ಷ ರಮೇಶ್, ಅಂಬಳೆ ಹೋಬಳಿ ಎಸ್ಸಿ ಸೆಲ್ ಅಧ್ಯಕ್ಷ ಭಾಸ್ಕರ್, ಮುಖಂಡರುಗಳಾದ ಭೀಮಯ್ಯ, ಚಂ ದ್ರಶೇಖರ್, ಶಾಲಾ ಮುಖ್ಯಶಿಕ್ಷಕ ರಮಾನಾಥ್, ಸಹ ಶಿಕ್ಷಕಿ ರುಕ್ಕಿಣಿ ಇದ್ದರು.

About Author

Leave a Reply

Your email address will not be published. Required fields are marked *

You may have missed