ಶ್ರೀ ಕೆಜೆ ಜಾರ್ಜ್ ರವರನ್ನು ಭೇಟಿ ಮಾಡಿ ಸರ್ಕಾರಿ ಸಾಗುವಳಿ ಜಮೀನು ಗುತ್ತಿಗೆ ಆಧಾರದಲ್ಲಿ ನೀಡುವ ವಿಚಾರವಾಗಿ ಹಾಗೂ ಅರಣ್ಯ ಸಮಸ್ಯೆ ಬಗ್ಗೆ ಮತ್ತು ಕಾಡಾನೆ, ಕಾಡುಪ್ರಾಣಿಗಳ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು…
1 min read
ದಿನಾಂಕ 07.03.2026ನೆಯ ಶನಿವಾರದಂದು ಕರ್ನಾಟಕ ಸರ್ಕಾರದ ಮಾನ್ಯ ಇಂದನ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಕೆಜೆ ಜಾರ್ಜ್ ರವರನ್ನು ಭೇಟಿ ಮಾಡಿ ಸರ್ಕಾರಿ ಸಾಗುವಳಿ ಜಮೀನು ಗುತ್ತಿಗೆ ಆಧಾರದಲ್ಲಿ ನೀಡುವ ವಿಚಾರವಾಗಿ ಹಾಗೂ ಅರಣ್ಯ ಸಮಸ್ಯೆ ಬಗ್ಗೆ ಮತ್ತು ಕಾಡಾನೆ, ಕಾಡುಪ್ರಾಣಿಗಳ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀಮತಿ ನಯನ ಮೋಟಮ್ಮ ನವರ ನೇತೃತ್ವದಲ್ಲಿ ಭೇಟಿಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರುಗಳಾದ ಸನ್ಮಾನ್ಯ ಶ್ರೀಮತಿ ಮೋಟಮ್ಮನವರು ಹಾಗೂ ಶ್ರೀ ಬಿ ಬಿ ನಿಂಗಯ್ಯನವರು ಇದ್ದರು.
ಈ ನಿಯೋಗದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶ್ರೀ ಬಿಎಸ್ ಜೈರಾಮ್ , ಕೋಮಾರ್ಕ್ ಮಾಜಿ ಅಧ್ಯಕ್ಷರಾದ ಶ್ರೀ ಡಿಎಸ್ ರಘು ಹಾಗೂ ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಬಿ ಆರ್ ಬಾಲಕೃಷ್ಣ , ಗೋಣಿಬೀಡು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ರಮೇಶ್ ಹಾಗೂ ಇತರರು ಇದ್ದು ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟ

