लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಶಿರಾಡಿ ಘಾಟಿಯಲ್ಲಿ ಭೂಕುಸಿತ : ಸಂಚಾರ ಬಂದ್,ಕೆಸರಿನಲ್ಲಿ ಹೂತುಹೋದ ವಾಹನಗಳು.”

1 min read

ಸಕಲೇಶಪುರ (Sakaleshapura) : ತಾಲ್ಲೂಕಿನಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಕುಸಿತವಾದ ಹಿನ್ನೆಲೆಯಲ್ಲಿ ರಸ್ತೆ ಬಂದ್ ಮಾಡಲಾಗಿದೆ.

ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ರ ದೊಡ್ಡ ತಪ್ಪಲೆ ಸಮೀಪ ಭೂಕುಸಿತ ಉಂಟಾಗಿ ಎರಡು ಕಾರು,ಒಂದು ಟಿಪ್ಪರ್ ಹಾಗೂ ಒಂದು ಟ್ಯಾಂಕರ್ ಕೆಸರಿನಲ್ಲಿ ಸಿಲುಕಿದ್ದು,ಅದೃಷ್ಟವಷಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಭೂಕುಸಿತ ಉಂಟಾದ ಜಾಗದಲ್ಲಿ ಸಿಲುಕಿದ್ದ ವಾಹನಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.

“ಮಾಯವಾದ ಅರ್ಧ ರಸ್ತೆ.”

ಹಾಸನ (Hassan) : ಜಿಲ್ಲೆಯ,ಸಕಲೇಶಪುರ (Sakaleshapura) ತಾಲ್ಲೂಕಿನ,ಕುಂಬರಡಿ ಸಮೀಪದ ಹಾರ್ಲೆ ಎಸ್ಟೇಟ್,ಕಾಡುಮನೆ ಬಳಿ ಅರ್ಧ ರಸ್ತೆಯೇ ಮಾಯವಾದ ಘಟನೆ ನಡೆದಿದೆ.

ಇದಕ್ಕೆ ಕಾರಣ ಎತ್ತಿನಹೊಳೆ ಯೋಜನೆಯ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ  ಯಾವುದೇ ಜೀವಹಾನಿ ಸಂಭವಿಸಿಲ್ಲದಿದ್ದರೂ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.ಕಾಫಿ ತೋಟ ಅಂದಾಜು 150 ಅಡಿಗೂ ಹೆಚ್ಚು ಆಳಕ್ಕೆ ಕುಸಿದಿದ್ದು,ತೋಟದ ಮಾಲೀಕರ ನೋವು ಹೇಳತೀರದಾಗಿದೆ.

✍️ಬರಹ ಕೃಪೆ.✍️

ಸಿದ್ದಿಕ್ ಚಕ್ಕಮಕ್ಕಿ.

7847891857.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *

You may have missed