ಶರಣ ಸಾಹಿತ್ಯ ಪರಿಷತ್ತಿನ 40ರ ಸಂಭ್ರಮದ ಒಳಗೊಳ್ಳುವಿಕೆಗಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯ ಪ್ರಮುಖರೊಂದಿಗೆ ಮುಖಾಮುಖಿ ಮಾತುಕತೆ.*..
1 min read
ಅವಿನ್ ಟಿವಿ ಸುದ್ದಿಜಾಲ ✒️: *ಶರಣ ಸಾಹಿತ್ಯ ಪರಿಷತ್ತಿನ 40ರ ಸಂಭ್ರಮದ ಒಳಗೊಳ್ಳುವಿಕೆಗಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯ ಪ್ರಮುಖರೊಂದಿಗೆ ಮುಖಾಮುಖಿ ಮಾತುಕತೆ.*
ಚಿಕ್ಕಮಗಳೂರು ಫೆ ೦೭: ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಇದೇ ಫೆಬ್ರವರಿ 09 ರಿಂದ 11 ರವರೆಗೆ ನಡೆಯುವ ಶರಣ ಸಂಭ್ರಮ 40 ಕಾರ್ಯಕ್ರಮದ ಅಂತಿಮ ಸುತ್ತಿನ ಪೂರ್ವ ಸಿದ್ಧತಾ ಸಭೆಯು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ಹಲವು ಪ್ರಮುಖರೊಂದಿಗೆ ನಗರದ ಕಲ್ಯಾಣ ನಗರ ಸಾಹಿತ್ಯ ವೇದಿಕೆ ಸಭಾಂಗಣದಲ್ಲಿ ನಡೆಯಿತು.
ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ಬಿತ್ತಿ ಬೆಳೆದ 12ನೇ ಶತಮಾನದ ಶರಣರು ಆಗಿ ಹೋದ ನೆಲವಿದು, ಇಂತಹ ನೆಲದಲ್ಲೂ ಕೂಡ ವೈಚಾರಿಕತೆ ಮತ್ತು ವೈಜ್ಞಾನಿಕತೆ ಮರೆಯಾಗುತ್ತಾ ಪ್ರಜ್ಞಾವಂತಿಕೆ ಎಂಬುದು ಪಾತಾಳಕ್ಕೆ ಹೋಗುತ್ತಿದೆ, ಬದುಕಿನ ತೀವ್ರತೆ ಮತ್ತು ಪ್ರಜ್ಞಾವಂತಕೆಯನ್ನು ಕುರಿತು ಮನುಷ್ಯನ ನೈಜ ಸ್ವಭಾವದ ಬಗ್ಗೆ ಚರ್ಚಿಸಬೇಕಾಗಿದೆ.
ನಮ್ಮ ನಮ್ಮ ಪೂರ್ವಗ್ರಹಗಳನ್ನು ಕಳಚಿ ಸಮಾಜಿಕ ವಿಷಯಗಳನ್ನು, ನಾಗರೀಕ ಬದುಕನ್ನು, ಮಾನವೀಯ ಮೌಲ್ಯಗಳನ್ನು ಮುನ್ನಡೆಗೆ ತರುವ ನಿಟ್ಟಿನಲ್ಲಿ ವಿಚಾರಗೋಷ್ಠಿ ತೆರೆದುಕೊಳ್ಳಬೇಕಾಗಿದೆ, ಇಂತಹ ಮಹತ್ವದ ವಿಚಾರಗೋಷ್ಠಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳು ಆಗಮಿಸುತ್ತಿರುವ ಕಾರಣ, ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಮನಸ್ಸುಗಳನ್ನು ಈ ಕಾರ್ಯಕ್ರಮದಲ್ಲಿ ತನು ಮನದೊಂದಿಗೆ ಭಾಗಿಯಾಗುವ ಬಗ್ಗೆ ಹಲವು ವಿಚಾರಗಳನ್ನು ಚರ್ಚಿಸಿ ಪೂರ್ವಸಿದ್ಧತೆಯ ಜವಾಬ್ದಾರಿಗಳನ್ನು ನೀಡಲಾಯಿತು,
ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರವೀಶ್ ಕ್ಯಾತನಬೀಡು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೊಟ್ಟಿಗೆ ಜಿಲ್ಲೆಯ ಹಲವು ಸಂಘ ಸಂಸ್ಥೆಗಳು ಭಾಗಿಯಾಗಿ , ಸ್ವಯಂ ಸ್ಪೂರ್ತಿಯಿಂದ ತನು ಮನ ಧನದ ಸಹಾಯ ನೀಡಿ, ವಿಚಾರಗೋಷ್ಠಿಯ ಯಶಸ್ಸಿಗಾಗಿ ಹಲವು ಜವಾಬ್ದಾರಿಗಳನ್ನು ವಹಿಸಿಕೊಂಡರು.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

