लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶರಣ ಸಾಹಿತ್ಯ ಪರಿಷತ್ತಿನ ೪೦ರ ಸಂಭ್ರಮದ ಪ್ರಯುಕ್ತ ಬಸವ ತತ್ವಪೀಠದ ಡಾ. ಶ್ರೀ ಬಸವಮರಳುಸಿದ್ದ ಸ್ವಾಮೀಜಿಗಳ ಭೇಟಿ…

1 min read

ಅವಿನ್ ಟಿವಿ ಸುದ್ದಿಜಾಲ ✒️: ಶರಣ ಸಾಹಿತ್ಯ ಪರಿಷತ್ತಿನ ೪೦ರ ಸಂಭ್ರಮದ ಪ್ರಯುಕ್ತ ಬಸವ ತತ್ವಪೀಠದ ಡಾ. ಶ್ರೀ ಬಸವಮರಳುಸಿದ್ದ ಸ್ವಾಮೀಜಿಗಳ ಭೇಟಿ.

ಚಿಕ್ಕಮಗಳೂರು ಫೆ ೦೭: ಪಾರಂಪರಿಕ ಓದುಗಳ ಪಲ್ಲಟ ಮತ್ತು ಹೊಸ ಸಾಧ್ಯತೆಯ ಕುರಿತು “ವಚನಗಳನ್ನು ನಾನು ಹೀಗೆ ಕೇಳಿಸಿಕೊಂಡಿದ್ದು” ಎಂಬ ವಿಚಾರವಾಗಿ ಇದೆ ಫೆಬ್ರವರಿ 09 ರಿಂದ 11ರವರೆಗೆ ಚಿಕ್ಕಮಗಳೂರು ನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ವಿಚಾರಗೋಷ್ಠಿಯಲ್ಲಿ ಭಾಗಿಯಾಗಲು ನಾಡಿನ ಅನೇಕ ಮಠಗಳ ಪೂಜ್ಯರು,ವಿದ್ವಾಂಸರು, ವಿಷಯ ತಜ್ಞರು ಚಿಕ್ಕಮಗಳೂರಿಗೆ ಬರುವ ಹೊತ್ತಿನಲ್ಲಿ…. ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ತಂಡ ಚಿಕ್ಕಮಗಳೂರಿನ ಕಲ್ಯಾಣನಗರದ ಬಸವ ತತ್ವ ಪೀಠದ ಡಾ. ಶ್ರೀ ಬಸವ ಮರಳುಸಿದ್ದ ಸ್ವಾಮೀಜಿಗಳನ್ನು ಇತ್ತೀಚಿಗೆ ಭೇಟಿ ಮಾಡಿ , ವಿಚಾರಗೋಷ್ಠಿಯ ಆಹ್ವಾನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮದ ಯಶಸ್ವಿಗಾಗಿ ಸಲಹೆ ಸಹಕಾರಗಳನ್ನು ಪಡೆದು ಶ್ರೀಗಳೊಂದಿಗೆ ಚರ್ಚಿಸಲಾಯಿತು.

12ನೇ ಶತಮಾನದ ಅನೇಕ ಶರಣರಿಂದ ಅಪಾರವಾಗಿ ಸೃಷ್ಟಿಯಾದ ವಚನ ಸಾಹಿತ್ಯ, ಕಲ್ಯಾಣದ ಕ್ರಾಂತಿಯಿಂದಾಗಿ ಬಹುಪಾಲು ನಷ್ಟವಾಯಿತು, ಚದುರಿ ಹೋದ ಶರಣರ ಜೊತೆ ನಾಡಿನ ಬೇರೆ ಬೇರೆ ಕಡೆ ಇವತ್ತಿನ ಸಾಹಿತ್ಯ ಹಂಚಿಹೋಯಿತು, ನಂತರ 13 ಮತ್ತು 14ನೇ ಶತಮಾನಗಳ ಕಾಲ ಗುಪ್ತ ನಿಧಿಯಂತೆ ಅಜ್ಞಾತವಾಸವನ್ನು ವಚನ ಸಾಹಿತ್ಯ ಅನುಭವಿಸಿತು, 15ನೇ ಶತಮಾನದಲ್ಲಿ ವಚನ ಸಾಹಿತ್ಯದ ಪುನರ್ಜೀವನ ಮರುರೂಪಗೊಂಡಿದ್ದನ್ನು ಕಾಣಬಹುದು.

ಇಂತಹ ವಚನ ಸಾಹಿತ್ಯ ಆಶಯ ಮತ್ತು ತತ್ವ ವರ್ತಮಾನದ 21ನೇ ಶತಮಾನದಲ್ಲಿ ಮುಸುಕಾಗದಂತೆ ಹೊಸ ಓದಿನೊಂದಿಗೆ ಪ್ರಕರಣ ಬೆಳಕನ್ನು ಬೀರಬಕಾಗಿದೆ ಎಂದು ಪೂಜ್ಯರು ಅಭಿಪ್ರಾಯ ಪಟ್ಟರು.

ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರವೀಶ್ ಖ್ಯಾತನಬೀಡು, ಗೌರವ ಸಲಹೆಗಾರ ಗುರುಶಾಂತಪ್ಪ, ಖಜಾಂಚಿ ನಟರಾಜ ಎಸ್ ಕೊಪ್ಪಲು, ಐಐಪಿ ಪ್ರಕಾಶನದ ಮುಖ್ಯಸ್ಥ ನಂಜೇಶ್ ಬೆಣ್ಣೂರು, ಪರಿಷತ್ತಿನ ಜಿಲ್ಲಾ ಸಂಚಾಲಕ ಪಿಳ್ಳೆನಹಳ್ಳಿ ವಿಜಯ್ ಕುಮಾರ್, ಉಪನ್ಯಾಸಕ ಹಳೇಬೀಡು ಬಸವರಾಜ್, ಅಕ್ಕನ ಬಳಗದ ಜಯ ಚನ್ನೇಗೌಡ, ಸೌಮ್ಯ ನಾಗರಾಜ್, ಜಾನ್ಸಾಲೆ ರವಿ, ಪ್ರಧಾನ ಕಾರ್ಯದರ್ಶಿ ಡಿ. ಎಂ ಮಂಜುನಾಥಸ್ವಾಮಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed