ಶರಣ ಸಾಹಿತ್ಯ ಪರಿಷತ್ತಿನ ವಿಚಾರಗೋಷ್ಠಿಯ ಆಹ್ವಾನ ಪತ್ರಿಕೆ ಅನಾವರಣ…
1 min read
ಅವಿನ್ ಟಿವಿ ಸುದ್ದಿಜಾಲ ✒️: ಶರಣ ಸಾಹಿತ್ಯ ಪರಿಷತ್ತಿನ ವಿಚಾರಗೋಷ್ಠಿಯ ಆಹ್ವಾನ ಪತ್ರಿಕೆ ಅನಾವರಣ

~ ಹೊಸ ಹೊಸ ಆಲೋಚನೆಗೆ ಪ್ರೇರಣೆಯಾಗಲಿ 40ರ ಸಂಭ್ರಮ:ಹೆಚ್. ಹೆಚ್. ದೇವರಾಜ್
ಚಿಕ್ಕಮಗಳೂರು ಜ 29: ಸಮಾಜದ ತರತಮಗಳನ್ನು ಕುರಿತು ನಮ್ಮ ನಮ್ಮ ಬದುಕಿನ ಮುಂದಿನ ದಾರಿ ಏನು ಎಂಬುದು ಗೊತ್ತಾಗದಿದ್ದಾಗ, ಯಾರು ವಿವೇಕದ ದಾರಿ ತೋರಿಸುತ್ತಾರೋ ಅವರೆಲ್ಲರೂ ಕೂಡ ಗುರುಗಳೆ ಆಗಿರುತ್ತಾರೆ ಎಂಬ ಆಶಯಗಳು 12ನೇ ಶತಮಾನದ ವಚನಕಾರರದ್ದಾಗಿತ್ತು ಎಂದು ಜನಪರ ಹೋರಾಟಗಾರ ಹಾಗೂ ಹಿರಿಯ ರಾಜಕಾರಣಿ ಹೆಚ್. ಹೆಚ್. ದೇವರಾಜ್ ಅಭಿಪ್ರಾಯಪಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇದೇ 2026ರ ಫೆಬ್ರವರಿ 09ರಿಂದ 11ರ ವರೆಗೆ ಮೂರು ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ಹಮ್ಮಿಕೊಂಡಿರುವ ಶರಣ ಸಾಹಿತ್ಯ ಪರಿಷತ್ತಿನ 40ರ ಸಂಭ್ರಮ ಮತ್ತು ವಿಚಾರಗೋಷ್ಠಿಯ ಅಹ್ವಾನ ಪತ್ರಿಕೆಯನ್ನು ಅನಾವರಣ ಮಾಡಿ, 40ರ ಈ ಸಂಭ್ರಮ ಮಾನವತಾವಾದವನ್ನು ಪ್ರತಿಪಾದಿಸಿ ಜಾತ್ಯಾತೀತ ಪ್ರಜ್ಞೆಯನ್ನು ಮರುರೂಪಿಸಿ ಹೊಸ ಚಿಂತನೆಯೊಂದಿಗೆ ಬೆಳಕು ಚೆಲ್ಲುವಂತಾಗಲಿ ಎಂದರು.
ನಗರದ ಪ್ರವಾಸಿ ಮಂದಿರದಲ್ಲಿ ಸರಳವಾಗಿ ಹಮ್ಮಿಕೊಂಡಿದ್ದ ಅಹ್ವಾನ ಪತ್ರಿಕೆಯ ಈ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರವಿಶ್ ಕ್ಯಾತನಬೀಡು ವಹಿಸಿ 12ನೇ ಶತಮಾನದ ಶರಣರು ರಚಿಸಿದ ವಚನ ಸಾಹಿತ್ಯ ಕುರಿತಂತೆ ಆಗಿರುವಷ್ಟು ಚರ್ಚೆ ವಾದ ವಿವಾದ, ವ್ಯಾಖ್ಯಾನ~ ವಿಮರ್ಶೆಗಳು ಬೇರೆ ಯಾವ ವಿಷಯಗಳಲ್ಲೂ ಈ ಪ್ರಮಾಣದಲ್ಲಿ ಆಗಿಲ್ಲ, ಇಂತಹ ವಚನಗಳನ್ನು ಕೈಗನ್ನಡಿಯಂತೆ ಹಿಡಿದುಕೊಂಡು ವರ್ತಮಾನದ ಸಮಾಜವನ್ನು ಎಚ್ಚರಿಸಬೇಕಾಗಿದೆ , ಈ ಕಾರಣಕ್ಕಾಗಿ ಪೂಜ್ಯರು,ವಿದ್ವಾಂಸರು,ವಿಷಯ ತಜ್ಞರು ಆಗಮಿಸಿ ವಿಚಾರ ಮಂಡನೆ ಮಾಡಲಿರುವ ಈ ಕಾರ್ಯಕ್ರಮಕ್ಕೆ ಎಲ್ಲ ವರ್ಗದ ಜನರು, ವಿಶೇಷವಾಗಿ ವಿದ್ಯಾರ್ಥಿ ಯುವಜನರು ಈ ವಿಚಾರಗೋಷ್ಠಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿ ಮಾಡಿಕೊಡಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಗೌರವ ಸಲಹೆಗಾರರಾದ ಮುಗುಳುವಳ್ಳಿ ಗುರುಶಾಂತಪ್ಪ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪಾರ್ಲಿಮೆಂಟರಿ ಬೋರ್ಡ್ ಅಧ್ಯಕ್ಷ ಹೆಚ್. ಎಸ್. ಮಂಜಪ್ಪ, ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಮರ್ಲೆ ಅಣ್ಣಯ್ಯ, ಪರಿಷತ್ತಿನ ಖಜಾಂಚಿ ನಟರಾಜ್ ಎಸ್ ಕೊಪ್ಪಲು, ಚಿಕ್ಕಮಗಳೂರು ತಾಲೂಕು ಘಟಕದ ಅಧ್ಯಕ್ಷ ಎಸ್ ಎಂ ಲೋಕೇಶಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ಎಂ ಮಂಜುನಾಥಸ್ವಾಮಿ ಉಪಸ್ಥಿತರಿದ್ದರು.
•••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ….. ✒️
ಚಿಕ್ಕಮಗಳೂರು

