लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶರಣರ ಚಿಂತನೆಗಳನ್ನು ಎಡಬಲಕ್ಕೆ ಕಟ್ಟಿ ಹಾಕದೆ ವಿಸ್ತಾರವಾದ ಭೂಮಿಕೆಯೊಂದಿಗೆ ಬಿತ್ತಿ ಬೆಳೆಯುತ್ತಾ ಸಮಾನತೆಯ ಗಾಳಿ ಬೆಳಕಿನೊಂದಿಗೆ ಎಲ್ಲರನ್ನೂ ಒಳಗೊಂಡು ಸಾಗಬೇಕು:……

1 min read

ಅವಿನ್ ಟಿವಿ ಸುದ್ದಿಜಾಲ ✒️: *ಶರಣರ ಚಿಂತನೆಗಳನ್ನು ಎಡಬಲಕ್ಕೆ ಕಟ್ಟಿ ಹಾಕದೆ ವಿಸ್ತಾರವಾದ ಭೂಮಿಕೆಯೊಂದಿಗೆ ಬಿತ್ತಿ ಬೆಳೆಯುತ್ತಾ ಸಮಾನತೆಯ ಗಾಳಿ ಬೆಳಕಿನೊಂದಿಗೆ ಎಲ್ಲರನ್ನೂ ಒಳಗೊಂಡು ಸಾಗಬೇಕು: ಡಾ.ಬಸವಮರಳಸಿದ್ದ ಸ್ವಾಮೀಜಿಯವರ ಅಭಿಮತ.*
••••••••••••••
ಚಿಕ್ಕಮಗಳೂರು ಜ 12: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು 2026ರ ಫೆಬ್ರವರಿ ಮಾಹೆಯಲ್ಲಿ ಹಮ್ಮಿಕೊಂಡಿರುವ ಶರಣ ಸಾಹಿತ್ಯ ಪರಿಷತ್ತಿನ 40ರ ಸಂಭ್ರಮ ಮತ್ತು ವಿಚಾರಗೋಷ್ಠಿಗಾಗಿ ಆಹ್ವಾನ ನೀಡಲು ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿರುವ ಬಸವತತ್ವ ಪೀಠದ ಡಾ. ಬಸವಮರಳುಸಿದ್ದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ವಿಚಾರಗೋಷ್ಠಿಗೆ ಆಹ್ವಾನ ನೀಡಿ, 40ರ ಸಂಭ್ರಮದ ರೂಪರೇಷೆಗಳ ಬಗ್ಗೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವೀಶ್ ಕ್ಯಾತನಬೀಡು ಮತ್ತು ಪದಾಧಿಕಾರಿಗಳ ತಂಡ ಶ್ರೀಗಳೊಂದಿಗೆ ಚರ್ಚಿಸಿ ಮಾರ್ಗದರ್ಶನವನ್ನು ಪಡೆದು ಸಲಹೆ ಸಹಕಾರ ಕೋರಿತು .

ಕಲ್ಯಾಣದ ಶರಣರ ವಿಚಾರಧಾರೆ ಎಂದರೆ ಅದೊಂದು ವಿಸ್ತಾರವಾದ ಭೂಮಿಕೆ, ವೈಚಾರಿಕವಾದ ನೆಲೆಗಟ್ಟು,ಇಲ್ಲಿ ಸಮಾನತೆಯ ಗಾಳಿ ಬೆಳಕು ಸದಾ ಬೀಸುತ್ತಿರುತ್ತದೆ, ಇಂತಹ ಸಮಾನತೆಯ ಗಾಳಿ ಬೆಳಕು ನಮಗೆ ವಚನ ಚಳುವಳಿಯ ಮೂಲಕ ಅಗಾಧವಾಗಿ ಧಕ್ಕಿದ್ದರೂ ಕೂಡ ಈ ಸಮಾಜ ಇಂದು ಕುಬ್ಜ ದೃಷ್ಟಿಕೋನದೊಂದಿಗೆ ಸಂಕುಚಿತಗೊಳ್ಳುತ್ತಿರುವುದು ವಿಶಾದವಾಗಿದೆ.

ನಮ್ಮ ದೇಶ ಅಂದರೆ ಏನು ?
ನಮ್ಮ ದೇಶ ಅಂದರೆ ಏನಲ್ಲ ? ಈ ಎರಡನ್ನು ಒಟ್ಟೊಟ್ಟಿಗೆ ಅವಲೋಕಿಸಿ ಅನುಸಂಧಾನ ಮಾಡಬೇಕಿದೆ, ಹಲವು ಭಿನ್ನತೆಗಳ ಮಧ್ಯೆಯು ಬೆರೆಯುವ ವಿವೇಕದ ವೇದಿಕೆಯಾಗಿ ವಿಚಾರಗೋಷ್ಠಿ ತೆರೆದುಕೊಂಡು , ಸಾಮಾಜದ ಎಡಬಲದ ಈ ಎರಡು ಮಗ್ಗಲುಗಳ ಬಗ್ಗೆ ಸಂವಾದರೂಪಗೊಂಡು, ಒಂದು ಹೊಸ ಸಾರಾದೊಂದಿಗೆ ಬೆಳಕು ಚೆಲ್ಲುವಂತಾಗಲಿ ಎಂದು ಡಾ. ಬಸವಮರುಳಸಿದ್ದ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ, ಶ್ರೀಗಳು ಪ್ರಧಾನ ಸಂಪಾದಕರಾಗಿ ದುಡಿದು ಹೊರತಂದ “ಅಲ್ಲಮ ಅನುಸಂಧಾನ” ಎಂಬ ಪುಸ್ತಕವನ್ನು ನೀಡಿ ಹಾರೈಸಿದರು,

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಗೌರವ ಸಲಹೆಗಾರರಾದ ಮುಗುಳುವಳ್ಳಿ ಗುರುಶಾಂತಪ್ಪ, ಜಿಲ್ಲಾ ಸಂಚಾಲಕ ಪಿಳ್ಳೆನಳ್ಳಿ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ಎಂ ಮಂಜುನಾಥಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
••••••••••
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed