ವಿಶ್ವಕರ್ಮ ಸಮಾಜದ ಕುಲಶಾಸ್ತ್ರ ಅಧ್ಯಯನ ವರದಿ ಅವೈಜ್ಞಾನಿಕ: ಗೋಪಾಲ ಅಚಾರ್ ಕಳವಳ….
1 min read
ಅವಿನ್ ಟಿವಿ ಸುದ್ದಿಜಾಲ ✒️:
ವಿಶ್ವಕರ್ಮ ಸಮಾಜದ ಕುಲಶಾಸ್ತ್ರ ಅಧ್ಯಯನ ವರದಿ ಅವೈಜ್ಞಾನಿಕ: ಗೋಪಾಲ ಅಚಾರ್ ಕಳವಳ
••••••••••••••••
ಚಿಕ್ಕಮಗಳೂರು ಜ 13: ಹಲವು ವರ್ಷಗಳಿಂದ ವಿಶ್ವಕರ್ಮ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ನಿರಂತರ ಹೋರಾಟ ನಡೆಸುತ್ತಿದ್ದರಿಂದ ಸರ್ಕಾರ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಡಿ.ಸಿ.ನಂಜುಂಡ ಸೇರಿ ಮೂರು ಜನರ ತಂಡದಿಂದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಜವಾಬ್ದಾರಿ ವಹಿಸಿತ್ತು.
41 ಉಪ ಜಾತಿ ಪಂಗಡಗಳನ್ನು
ಒಳಗೊಂಡಿರುವ ವಿಶ್ವಕರ್ಮ ಸಮಾಜ
ಜನಸಂಖ್ಯೆ, ಆಚರಣೆ, ಹಿಂದುಳುವಿಕೆ ಸೇರಿ, ಕುಲ ಕಸಬು ಕುರಿತು ಮಾಹಿತಿಯನ್ನು ನೀಡಲಾಗಿತ್ತು. ಕುಲಶಾಸ್ತ್ರೀಯ ಅಧ್ಯಯನ ತಂಡ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ
ನೀಡಿ ಮಾಹಿತಿ ಸಂಗ್ರಹಿಸಿ 900 ಪುಟಗಳ
ವರದಿ ಸರ್ಕಾರಕ್ಕೆ ನೀಡಿದೆ.
ಆದರೆ, ವಿಶ್ವಕರ್ಮ ಕಸುಬುಗಳಿಗೆ
ಕೈಗಾರಿಕೆ ಮಾನ್ಯತೆ ನೀಡಬೇಕೆನ್ನುವ ಶಿಫಾರಸ್ಸಿನೊಂದಿಗೆ ವರದಿಯಲ್ಲಿ ಸಮಾಜದ ಹಿಂದುಳಿವಿಕೆ ಕುರಿತು ಅವೈಜ್ಞಾನಿಕ ಸ್ಪಷ್ಟತೆ ನೀಡಿ ಸಮಾಜಕ್ಕೆ ಮಾರಕವಾದ ಅಂಶಗಳನ್ನು ತಂಡ ನೀಡಿದೆ.ಬಡಗೆತನ,ಕಮ್ಮಾರಿಕೆ ಸೇರಿದಂತೆ ಕುಲಕಸುಬು ನಡೆಸುತ್ತಿರುವ ಆಳ, ಅಗಲ ಅರ್ಥೈಸಿಕೊಳ್ಳದೆ ಇರುವುದು ವಿಷಾದನೀಯ.ಯಾವುದೂ ಒತ್ತಡಕ್ಕೆ ಮಣಿದು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಕೆ ಹಿಂದುಳುವಿಕೆಯ ಮೇಲೆ ಬೆಳಕು ಚೆಲ್ಲದೇ ವೃತ್ತಿಯನ್ನು ಮಾತ್ರ ಪರಿಗಣಿಸಿ ರುವುದು ಮುಂದಿನ ಪೀಳಿಗೆಗೆ ಅನ್ಯಾಯವಾಗಲಿದೆ, ಸರ್ಕಾರ ಕೂಡಲೇ ಕುಲಶಾಸ್ತ್ರೀಯ ಅಧ್ಯಯನ ವರದಿ ತಿರಸ್ಕರಿಸಿ ಮರು ಅಧ್ಯಯನಕ್ಕೆ ಆದೇಶ ಬೇಕೆಂದು ವಿಶ್ವಕರ್ಮ ಮಹಾಸಭಾದ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್. ಡಿ ಗೋಪಾಲ್ ಆಚಾರ್ ರವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

