ಲೋಕಾಯುಕ್ತ ಬಲೆಗೆ ತಂಗಲಿ ಗ್ರಾಮ ಪಂಚಾಯಿತಿ~ ಪಿಡಿಒ….
1 min read
ಅವಿನ್ ಟಿವಿ ಸುದ್ದಿಜಾಲ ✒️: ಲೋಕಾಯುಕ್ತ ಬಲೆಗೆ ತಂಗಲಿ ಗ್ರಾಮ ಪಂಚಾಯಿತಿ~ ಪಿಡಿಒ
ಕಡೂರು ಫೆ ೨೫: ಸೈಟ್ ಗೆ ಎನ್.ಒ.ಸಿ (NOC) ನೀಡಲು ಲಂಚದ ಬೇಡಿಕೆಯಿಟ್ಟಿದ್ದ ಕಡೂರು ತಾಲೂಕಿನ ತಂಗಲಿ ಗ್ರಾಮ ಪಂಚಾಯಿತಿಯ ಪಿಡಿಒ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಿಮ್ಮಶೆಟ್ಟಿ ಎಂಬುವವರಿಗೆ ಸೇರಿದ ನಿವೇಶನಕ್ಕೆ ಸಂಬಂಧಿಸಿದಂತೆ ಎನ್.ಒ.ಸಿ ನೀಡಲು ಮಹಿಳಾ ಪಿಡಿಒ ನಂಜುಡಮ್ಮ 3,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.ಲಂಚ ನೀಡಲು ಇಚ್ಛಿಸದ ವ್ಯಕ್ತಿಯು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ರೆಡ್ ಹ್ಯಾಂಡ್ ಕಾರ್ಯಾಚರಣೆ: ದೂರಿನ ಅನ್ವಯ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಅವರ ನೇತೃತ್ವದ ತಂಡವು ತಂಗಲಿ ಗ್ರಾಮ ಪಂಚಾಯಿತಿ ಕಚೇರಿಯ ಮೇಲೆ ದಾಳಿ ನಡೆಸಿತು. ಈ ವೇಳೆ ದೂರುದಾರರಿಂದ 3,000 ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಪಿಡಿಒ ನಂಜುಂಡರಮ್ಮರನ್ನು ಲೋಕಾಯುಕ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಪೊಲೀಸರು ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ಆರೋಪಿ ಪಿಡಿಒ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✒️
ಚಿಕ್ಕಮಗಳೂರು

