ಯುಪಿಎಸ್‌ಸಿ ಪರೀಕ್ಷೆಯಲ್ಲಿ 720 ನೇ ರ್ಯಾಂಕ್ ಪಡೆಯುವ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದ ಹುಲಿಕೆರೆಯ ಪ್ರವೀಣ್ ಎಚ್ ಟಿ….
1 min read
ಅವಿನ್ ಟಿವಿ ಸುದ್ದಿಜಾಲ ✍️: ಯುಪಿಎಸ್‌ಸಿ ಪರೀಕ್ಷೆಯಲ್ಲಿ 720 ನೇ ರ್ಯಾಂಕ್ ಪಡೆಯುವ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದ ಹುಲಿಕೆರೆಯ ಪ್ರವೀಣ್ ಎಚ್ ಟಿ.
ಚಿಕ್ಕಮಗಳೂರು: ಈ ಸಾಲಿನ ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶಗಳು ಪ್ರಕಟವಾಗಿದ್ದು, 958 ಮಂದಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರ ಪೈಕಿ 25 ಕನ್ನಡಿಗರು ಉತ್ತೀರ್ಣರಾಗಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಕಿರಣ್ ಕಮಾಟೆ ಎಂಬುವವರು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಸಂಪಾದಿಸುವ ಮೂಲಕ ಕನ್ನಡ ನಾಡಿನ ಗೌರವಕ್ಕೆ ವಿಶೇಷವಾಗಿ ಬಾಜನರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲೂಕಿನ, ಹುಲಿಕೆರೆಯ ಪ್ರವೀಣ ಎಚ್ ಟಿ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 720ನೇ ರ್ಯಾಂಕ್ ಪಡೆಯುವ ಮೂಲಕ ಈ ಜಿಲ್ಲೆಯ ಜನರಿಗೆ ಪ್ರೀತಿ ಪಾತ್ರರಾಗಿದ್ದಾರೆ.
ನಿವೃತ್ತ ಮುಖ್ಯ ಶಿಕ್ಷಕರಾದ ಹುಲಿಕೆರೆಯ ತಮ್ಮಯ್ಯ ಮತ್ತು ನೀಲಮ್ಮ ದಂಪತಿಗಳ ಪುತ್ರರಾದ ಪ್ರವೀಣ್ ಅವರ ಸಾಧನೆ ಜಿಲ್ಲೆಯ ಇತರೆ ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿದೆ.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ಅಭ್ಯರ್ಥಿಗಳು ಮುಂದೆ ದೇಶದ ಆಯಕಟ್ಟಿನ ಜಾಗದಲ್ಲಿ ಕುಳಿತು ನೀತಿ ನಿಯಮಗಳನ್ನು ಜಾರಿ ಮಾಡುವ ಜವಾಬ್ದಾರಿರುವುದರಿಂದ, ಒಂದು ದೂರದೃಷ್ಟಿಯೊಂದಿಗೆ ರಾಷ್ಟ್ರದ ಸರ್ವಾಂಗೀಣ ಪ್ರಗತಿಗೆ ನೀವೆಲ್ಲರೂ ದುಡಿಯುವಂತಾಗಲಿ.
ನೂತನ ಯುವ ಅಧಿಕಾರಿಗಳಾಗಿ ಹೊರಹೊಮ್ಮಿರುವ ತಮ್ಮಿಂದ ಈ ಸಮಾಜ ಸಾಕಷ್ಟು ನಿರೀಕ್ಷಿಸುತ್ತದೆ , ಸಮಾಜದ ನಿರೀಕ್ಷೆಯನ್ನು ಬೆನ್ನೆತ್ತಿ ತಾವೆಲ್ಲರೂ ದುಡಿಯುವಂತಾಗಲಿ ಎಂದು ನ್ಯೂಸ್ ಕಿಂಗ್ ಅಭಿನಂದಿಸುತ್ತಿದೆ.
••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು.

