ಮುಂದಿನ ಶತಮಾನ ಭಾರತದ ಶತಮಾನವಾಗಬೇಕಾದರೆ ಮಣ್ಣಿನೊಟ್ಟಿಗೆ ಮಾನವನ ಗಾಢ ಸಂಬಂಧ ಬೆಳೆಯಬೇಕು ಆಗ ಮಾತ್ರ ಸುಸ್ಥಿರ ಕೃಷಿಯನ್ನು ಎದುರು ನೋಡಲು ಸಾಧ್ಯ :
1 min read
ಅವಿನ್ ಟಿವಿ ಸುದ್ದಿಜಾಲ ✒️: ಮುಂದಿನ ಶತಮಾನ ಭಾರತದ ಶತಮಾನವಾಗಬೇಕಾದರೆ ಮಣ್ಣಿನೊಟ್ಟಿಗೆ ಮಾನವನ ಗಾಢ ಸಂಬಂಧ ಬೆಳೆಯಬೇಕು ಆಗ ಮಾತ್ರ ಸುಸ್ಥಿರ ಕೃಷಿಯನ್ನು ಎದುರು ನೋಡಲು ಸಾಧ್ಯ :
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ. ಜೆ. ದಿನೇಶ್ ಅಭಿಮತ
ಚಿಕ್ಕಮಗಳೂರು: ಭೂಮಿ ಜನ್ಯವಿದ್ದಾಗ ಸಮೃದ್ಧ ಪಸಲು ಗ್ಯಾರಂಟಿ, ಭಾರತೀಯ ಕಾಫಿಗೆ ಯುರೋಪಿಯನ್ ಯೂನಿಯನ್ ನಲ್ಲಿ ಅತೀ ಬೇಡಿಕೆ ಇದೆ, ರಾಸಾಯನಿಕ ಗೊಬ್ಬರದ ಅತೀ ಬಳಕೆ ಮತ್ತು ಮರಗಳ ವಿಪರೀತ ತಲೆ ಕಡಿತದಿಂದ ಜಗತ್ತಿನ ಕಾಫಿ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಬೇಡಿಕೆ ಕಮ್ಮಿಯಾಗಿ ಬೆಲೆ ಕುಸಿತವಾಗಿ ಬೆಳೆಗಾರರ ಭವಿಷ್ಯದ ದಿನಗಳು ದುಸ್ತರವಾಗಬಹುದು, ಹಾಗಾಗಿ ಕಾಫಿ ಬೆಳೆಗಾರರು ಹಣಕಾಸು ಮತ್ತು ಮಣ್ಣು ಈ ಎರಡರ ನಿರ್ವಹಣೆಯನ್ನು ಬಹು ಎಚ್ಚರಿಕೆಯಿಂದ ಮಾಡಬೇಕಾಗಿದೆ ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷರಾದ ಎಂ ಜೆ ದಿನೇಶ್ ಅಭಿಪ್ರಾಯಪಟ್ಟರು.
ನಗರದ ಚಿಕ್ಕಮಗಳೂರು ಕ್ಲಬ್ ನಲ್ಲಿ ಮೈಸೂರಿನ ಮಸ್ಟ್ ಈಟ್ ಮಶ್ರೂಮ್ ಕಂಪನಿಯು “ಸಾವಯುವ ಕೃಷಿಯ ಒಳಸುಳಿವು” ಎಂಬ ವಿಷಯದ ಮೇಲೆ ಏರ್ಪಡಿಸಿಸದ್ದ ವೈಜ್ಞಾನಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. 7 ಕಾಫಿ ಬೀಜದಿಂದ 7 ಲಕ್ಷ ಟನ್ ಕಾಫಿ ಬೀಜ ಬೆಳೆಯುತ್ತಿರುವ ಕಾಫಿ ಬೆಳೆಗಾರರ ಸಮಸ್ಯೆ ಸವಾಲು ಸಾಧ್ಯತೆಗಳನ್ನು ಕುರಿತು ವಿಚಾರ ಸಂಕಿರಣದಲ್ಲಿ ಪರಿಣಾಮಕಾರಿ ಬೆಳಕನ್ನು ಚೆಲ್ಲಿ, ಸುಸ್ಥಿರ ಕೃಷಿಗಾಗಿ ಸಾವಯುವ ಗೊಬ್ಬರದ ಮಹತ್ವವನ್ನು ವಿವರಿಸಿದರು.
ಸುಸ್ಥಿರ ಕೃಷಿಯ ಬಗ್ಗೆ ವೈಜ್ಞಾನಿಕ ವಿಚಾರ ಮಂಡನೆಯನ್ನು ಮಾಡಿದ ಸಾವುಯುವ ಕೃಷಿಕ, ಕೃಷಿಕ ಪಂಡಿತ ಪ್ರಶಸ್ತಿ ಪುರಸ್ಕೃತರಾದ ಮೂಕ್ತಿಹಳ್ಳಿ ಕೃಷಿ ನಿವಾಸದ ಚಂದ್ರಶೇಖರ ನಾರಣಾಪುರ ಅವರು ಮಾತನಾಡುತ್ತಾ, ತೇವಾಂಶ ಜೀವಾಮೃತ ಬೀಜಾಮೃತ ಮತ್ತು ಮಣ್ಣಿನ ಮುಚ್ಚಿಗೆ ಈ ನಾಲ್ಕು ತತ್ವಗಳನ್ನು ಪಾಲನೆ ಯಾವುದೇ ಬೆಳಗಾರ ಮತ್ತು ರೈತ ಪಾಲನೆ ಮಾಡಿದರೆ ಮಣ್ಣು ಫಲವತ್ತಾಗಿ ಕೃಷಿ ಸುಸ್ಥಿರತೆಗೆ ಬರಲು ಸಾಧ್ಯವಾಗುತ್ತದೆ ಎಂದರು.
ವೈಜ್ಞಾನಿಕ ವಿಚಾರಗೋಷ್ಠಿಯ ಎರಡನೇ ಭಾಗವಾಗಿ ಮೈಸೂರಿನ ತೋಟಗಾರಿಕೆ ಇಲಾಖೆ ಕೀಟ ವಿಜ್ಞಾನಿ ಡಾ. ರಾಮೇಗೌಡ ಜೀವವೈವಿಧ್ಯತೆಗಳು ಮತ್ತು ಕೃಷಿಯನ್ನು ಕುರಿತು ವೈಜ್ಞಾನಿಕವಾಗಿ ಚಿಂತನೆ ಮಾಡಿದರು.
ಮಸ್ಟ್ ಈಟ್ ಮಶ್ರೂಮ್ ಸಂಸ್ಥೆಯ ವ್ಯವಸ್ಥಾಪಕ ಏನ್ ಎಂ ನಂದೀಶ್ ಕುಮಾರ್ ಮಾತನಾಡಿ , ಮಸ್ಟ್ ಈಟ್ ಉತ್ಪಾದನಾ ಕಂಪನಿಯು ಅಣಬೆ ಬೇಸಾಯದಲ್ಲಿ ಅತ್ಯಂತ ಯಶಸ್ಸನ್ನು ಕಂಡು ಜಗತ್ತಿನಾದ್ಯಂತ ಒಂದು ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ, ಈ ಅಣಬೆಯಲ್ಲಿ ಬರುವ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಉತ್ಕೃಷ್ಟ ಗುಣಮಟ್ಟದದಿಂದ ಸಾವಯುವ ಗೊಬ್ಬರವನ್ನಾಗಿ ಪರಿವರ್ತಿಸಿ, ಸೇವಾ ಮನೋಭಾವನೆಯಿಂದ ಕೇವಲ ಉತ್ಪಾದನಾ ವೆಚ್ಚವನ್ನಷ್ಟೇ ಗೊಬ್ಬರದ ಮೇಲೆ ದರ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದರು.
ಕೃಷಿಕ ಡಿ ಎಂ ಮಂಜುನಾಥ ಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು.ಬೆಂಗಳೂರು ಯಲಹಂಕದ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಗುರುಪ್ರಸಾದ್ ಉಪಸ್ಥಿತರಿದ್ದರು.
ಜಿಲ್ಲೆಯ ಹಲವು ಭಾಗಗಳಿಂದ ಆಗಮಿಸಿದ ಕೃಷಿಕರು, ಬೆಳಗಾರರು ಈ ವಿಚಾರ ಸಂಕಿರಣದ ಸಂವಾದದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಮಸ್ಟ್ ಈಟ್ ಮಶ್ರೂಮ್ ಕಂಪನಿ ಹೊರ ತಂದ ಸಾಯಿಲ್ ರಾಜ ಸಾವಯುವ ಗೊಬ್ಬರವನ್ನು ಲೋಕಾರ್ಪಣೆ ಮಾಡಲಾಯಿತು.
••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

