लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಾಜಿ ಮಂತ್ರಿ, ಹಾಲಿ ವಿಧಾನ ಪರಿಷತ್ತು ಸದಸ್ಯರಾಗಿರುವ ಸಿ ಟಿ ರವಿಗೆ ಪಿಎಚ್‌ಡಿ ಪದವಿ ಪ್ರಧಾನ….

1 min read

ಅವಿನ್ ಟಿವಿ ಸುದ್ದಿಜಾಲ ✒️: ಮಾಜಿ ಮಂತ್ರಿ, ಹಾಲಿ ವಿಧಾನ ಪರಿಷತ್ತು ಸದಸ್ಯರಾಗಿರುವ ಸಿ ಟಿ ರವಿಗೆ ಪಿಎಚ್‌ಡಿ ಪದವಿ ಪ್ರಧಾನ.

ಚಿಕ್ಕಮಗಳೂರು ಜ 31: ಪ್ರಾರ್ಥಮಿಕ,ಪ್ರೌಢಶಾಲೆ,ಕಾಲೇಜು ಶಿಕ್ಷಣವೂ ಸೇರಿದಂತೆ ಈ ಎಲ್ಲ ಶಿಕ್ಷಣವನ್ನು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಓದಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸಿ ಕೆಲಸ ಮಾಡುತ್ತಾ, ಈ ರಾಜಕಾರಣದ ಕೆಲಸಗಳ ಒತ್ತಡದ ಮಧ್ಯೆಯೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮೂಲಕ ರಾಜ್ಯ ಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಮಹಾ ಪ್ರಬಂಧ ಮಂಡಿಸದ ಸಿ ಟಿ ರವಿ ಅವರು ಈಗ ಪಿ ಎಚ್ ಡಿ ಪದವಿಯನ್ನು ಗಳಿಸಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತ ಗಂಗೋತ್ರಿಯ 21ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ರಾಜ್ಯಪಾಲ ತಾವರ ಚಂದ್ ಗೆಹ್ಲೋಟ್ ಅವರಿಂದ ಪಿಎಚ್‌ಡಿ ಪದವಿ ಸ್ವೀಕರಿಸಿದರು.

ಸಿ.ಟಿ.ರವಿ ಮುಕ್ತ ಗಂಗೋತ್ರಿಯಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ.ಕೆ.ಜೆ. ಸುರೇಶ್ ಅವರ ಮಾರ್ಗದರ್ಶನದಲ್ಲಿ *“ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ ಒಂದು ಅಧ್ಯಯನ”* ಎಂಬ ವಿಷಯದಲ್ಲಿ ಅಧ್ಯಯನ ನಡೆಸಿ, ಮಹಾಪ್ರಬಂಧ ಮಂಡಿಸಿದ್ದರು.

ಕಲಿಕೆ ಒಂದು ನಿರಂತರವಾದ ಪ್ರಕ್ರಿಯೆ,ಓದುವುದು ನನ್ನ ಪ್ರಮುಖ ಆಸಕ್ತಿ. ನಾನೊಬ್ಬ ನಿರಂತರ ಕಲಿಕಾ ವಿದ್ಯಾರ್ಥಿ,ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತಗಂಗೋತ್ರಿ ಅಡಿಯಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರಾದ ಡಾ.ಕೆ.ಜೆ.ಸುರೇಶ್ ಅವರ ಮಾರ್ಗದರ್ಶನದಲ್ಲಿ “ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳ ಒಂದು ಅಧ್ಯಯನ” ಎಂಬ ಪ್ರಬಂಧವನ್ನು ನಿರಂತರವಾದ ನಾಲ್ಕು ವರ್ಷಗಳ ಅಧ್ಯಯನದೊಂದಿಗೆ 2023 ರಲ್ಲಿ ಪೂರ್ಣಗೊಳಿಸಿ, ಮಂಡಿಸಿದ್ದೇನೆ.

ಅಧ್ಯಯನದ ಸಂದರ್ಭದಲ್ಲಿ ತಿದ್ದಿ, ತೀಡಿ ಅತ್ಯುತ್ತಮವಾಗಿ ಮಾರ್ಗದರ್ಶನ ಮಾಡಿದ ಡಾ.ಕೆ.ಜೆ ಸುರೇಶ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಯುಪಿಎ ಮತ್ತು ಎನ್‌ಡಿಎ ಒಕ್ಕೂಟಗಳ ಮೈತ್ರಿಕೂಟ ಸರ್ಕಾರಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿದ್ದು, ಮಹಾ ಪ್ರಬಂಧ ರಚಿಸಿದ್ದೇನೆ ಎಂದಿರುವ ಅವರು, ರಾಜಕೀಯ ಕಾರ್ಯದೊತ್ತಡಗಳ ನಡುವೆ ಪಿಎಚ್‌ಡಿ ಅಧ್ಯಯನ ಕೊಂಚ ನಿಧಾನವಾಗಿತ್ತು. ಆದರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತನಾದ ಬಳಿಕ ಕೊಂಚ ಹೆಚ್ಚಿನ ಸಮಯ ಲಭಿಸಿತು. ಇದನ್ನು ಬಳಸಿಕೊಂಡು ಪಿಎಚ್‌ಡಿ ಅಧ್ಯಯನ ಪೂರ್ಣಗೊಳಿಸಿದೆ ಎಂದು ತಿಳಿಸಿದ್ದಾರೆ.
••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed