ಬಿಸಿಸಿಐ ಏಕದಿನ ಟ್ರೋಫಿಗೆ ಕಾಫಿನಾಡಿನ ಯುವ ಆಟಗಾರ್ತಿ ಚಿಕ್ಕಮಗಳೂರಿನ ಶಿಶಿರ ಎ ಗೌಡ ಆಯ್ಕೆ….
1 min read
ಅವಿನ್ ಟಿವಿ ಸುದ್ದಿಜಾಲ ✒️: ಬಿಸಿಸಿಐ ಏಕದಿನ ಟ್ರೋಫಿಗೆ ಕಾಫಿನಾಡಿನ ಯುವ ಆಟಗಾರ್ತಿ ಚಿಕ್ಕಮಗಳೂರಿನ ಶಿಶಿರ ಎ ಗೌಡ ಆಯ್ಕೆ.
ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಇತ್ತೀಚೆಗೆ ಪ್ರಕಟಿಸಿರುವ ಹಿರಿಯ ಮಹಿಳಾ ಏಕದಿನ ಟ್ರೋಫಿ ಪಂದ್ಯಾವಳಿಯ ತಂಡದಲ್ಲಿ ಚಿಕ್ಕಮಗಳೂರಿನ ಪ್ರತಿಭಾನ್ವಿತ ಆಟಗಾರ್ತಿ ಶಿಶಿರ ಎ. ಗೌಡ ಸ್ಥಾನ ಪಡೆದಿದ್ದಾರೆ.
ಫೆಬ್ರವರಿ 6 ರಿಂದ 18 ರವರೆಗೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಬಿಸಿಸಿಐ ಟೂರ್ನಿಯಲ್ಲಿ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಜಿಲ್ಲಾ ಆರೋಗ್ಯಧಿಕಾರಿ ಅಶ್ವತ್ ಬಾಬು ಅವರ ಪುತ್ರಿಯಾಗಿರುವ ಶಿಶಿರ ಅವರ ಆಯ್ಕೆಯು ಕಾಫಿನಾಡಿನ ಕ್ರೀಡಾ ವಲಯಕ್ಕೆ ಹೆಮ್ಮೆ ತಂದಿದೆ.
ಶುಭಾ ಸತೀಶ್ ನಾಯಕತ್ವದ ಮತ್ತು ಮೋನಿಕಾ ಸಿ ಪಟೇಲ್ ಉಪನಾಯಕತ್ವದ ಈ ಪ್ರಬಲ ತಂಡದಲ್ಲಿ ಅನುಭವಿ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರಂತಹ ಪ್ರಮುಖ ಆಟಗಾರ್ತಿಯರು ಇದ್ದಾರೆ.
ಮುಖ್ಯ ತರಬೇತುದಾರ ಅಮೀತ್ ಎಸ್.ಎನ್ ನೇತೃತ್ವದ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡವು ಕಣಕ್ಕಿಳಿಯುತ್ತಿದ್ದು, ಶಿಶಿರ ಅವರು ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಯಶಸ್ಸಿಗೆ ನೆರವಾಗಲಿ ಎಂಬ ಆಶಯ ವ್ಯಕ್ತವಾಗಿದೆ.
ಕ್ರೀಡಾಭಿಮಾನಿಗಳು ಮತ್ತು ಜಿಲ್ಲೆಯ ಜನರು ಈ ಯುವ ಪ್ರತಿಭೆಗೆ ಅಭಿನಂದನೆ ಸಲ್ಲಿಸಿದ್ದಾರೆ.
•••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

