ಫೆಬ್ರವರಿ 09 ರಿಂದ 11 ರವರೆಗೆ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ವಿಚಾರ ಸಂಕಿರಣ.*
1 min read


ಅವಿನ್ ಟಿವಿ ಸುದ್ದಿಜಾಲ ✒️: *ಫೆಬ್ರವರಿ 09 ರಿಂದ 11 ರವರೆಗೆ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ವಿಚಾರ ಸಂಕಿರಣ.*
ಚಿಕ್ಕಮಗಳೂರು ಫೆ ೦೭: ಮಾನವೀಯ ಸಂಬಂಧಗಳ ಮರುಕಟ್ಟಬೇಕಾದರೆ ಹದಗೆಟ್ಟು ಹೋಗಿರುವ ಮನುಕುಲದ ಮನಸ್ಥಿತಿಯನ್ನು ಮೊದಲು ಸ್ವಚ್ಛ ಗೊಳಿಸಿಕೊಳ್ಳಬೇಕು. ಕೇವಲ ಬೀದಿಗಳು ಸ್ವಚ್ಛವಾದರೆ ಸಾಲದು ಮನಸುಗಳು ಸ್ವಚ್ಛವಾಗಬೇಕು, ವೈಯಕ್ತಿಕ ಪರಿವರ್ತನೆ ಆಗದ ಹೊರೆತು ಸಾಮಾಜಿಕ ಬದಲಾವಣೆ ಅಸಾಧ್ಯ.
ಈ ನಿಟ್ಟಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇದೇ 2026ರ ಫೆಬ್ರವರಿ 09,10 ಮತ್ತು 11 ರಂದು, ಮೂರು ದಿನಗಳ ಕಾಲ ನಗರದ ಎಐಟಿ ವೃತ್ತದ ಬಳಿ ಇರುವ ಒಕ್ಕಲಿಗರ ಭವನದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪನೆಯಾಗಿ 40 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಆ 40ರ ಸಂಭ್ರಮಕ್ಕಾಗಿ ಈ ವಿಚಾರಗೋಷ್ಠಿ ರೂಪಗೊಂಡಿದೆ.
ಹಗಲರ್ಧ ಮುಗಿದು ಇಳಿ ಸಂಜೆ ಬಂದಂತೆ ವಿಚಾರ ಸಂಕಿರಣದ ಪೂರ್ವಸಿದ್ಧತೆಗಳು ಬಹುತೇಕ ಮುಕ್ತಾಯಗೊಂಡಿದ್ದು ಈ 40ರ ಸಂಭ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸುತ್ತಿರುವ ಪ್ರತಿನಿಧಿಗಳನ್ನು ಸ್ವಾಗತಿಸಲು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಣಿಯಾಗಿದೆ.
ಹಲವು ಮಠಾಧೀಶರು ಸೇರಿದಂತೆ ನಾಡಿನ ಘನ ವಿದ್ವಾಂಸರುಗಳು, ವಿಷಯ ತಜ್ಞರು, ಮೇರು ಸಾಹಿತಿಗಳು, ಜನಪರ ~ ಶರಣಪರ ಚಿಂತಕರು ಆಗಮಿಸಿ ನಡೆಸಿಕೊಡುವ ಈ ಮೂರು ದಿನದ ವಿಚಾರ ಸಂಕಿರಣದಲ್ಲಿ ವಿಚಾರಗೋಷ್ಠಿಗಳು ಸೇರಿದಂತೆ, ಹಲವು ಸಾಧಕರಿಗೆ ಸಾಧನೆ ಮನ್ನಣೆ, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಲೋಕಾರ್ಪಣೆ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, 40ರ ಸಂಭ್ರಮದ ಜೊತೆಗೆ ಶರಣ ಸಾಹಿತ್ಯ ಪರಿಷತ್ತಿಗಾಗಿ ದುಡಿದು ನಿಧನರಾದ ಹಲವು ಗಣ್ಯರ ಸಂಸ್ಮರಣೆ ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ವೇದಿಕೆಯ ಜಿಲ್ಲಾಧ್ಯಕ್ಷರು ಸೇರಿದಂತೆ ಇತರೆ ರಾಜ್ಯಗಳ ಕೆಲವು ಜಿಲ್ಲಾ ಘಟಕದ ಹಾಲಿ ಮತ್ತು ಮಾಜಿ ಅಧ್ಯಕ್ಷರುಗಳಿಗೆ ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗೌರವಿಸಲಾಗುತ್ತದೆ ಜೊತೆಗೆ ಈ ಭಾಗದ ಚಿಕ್ಕಮಗಳೂರಿನ ವಿಶಿಷ್ಟ ಖಾದ್ಯಗಳನ್ನು ಶುಚಿ ಮತ್ತು ರುಚಿಯೊಂದಿಗೆ ಉಣ ಬಡಿಸಲಾಗುತ್ತದೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರವೀಶ್ ಕ್ಯಾತನಬೀಡು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಮತ್ತು ಈ ಯಾವುದೇ ಪ್ರತಿನಿಧಿ ಶುಲ್ಕ ಇಲ್ಲದ ಈ ವಿಚಾರಗೋಷ್ಠಿಗೆ ಜಿಲ್ಲೆಯ ಜನತೆ ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ಯಶಸ್ವಿ ಮಾಡಿಕೊಡಬೇಕೆಂದು ಮಾಧ್ಯಮದ ಮೂಲಕ ಮನವಿ ಮಾಡಿದರು.
ಪರಿಷತ್ತಿನ ಹಿರಿಯ ಗೌರವ ಸಲಹೆಗಾರ ಗುರುಶಾಂತಪ್ಪ. ಖಜಾಂಚಿ ನಟರಾಜ ಎಸ್ ಕೊಪ್ಪಲು, ಜಿಲ್ಲಾ ಸಂಚಾಲಕ ವಿಜಯ್ ಕುಮಾರ್ ಪಿಳ್ಳೆನಳ್ಳಿ , ಪ್ರಧಾನ ಕಾರ್ಯದರ್ಶಿ ಡಿ ಎಂ ಮಂಜುನಾಥಸ್ವಾಮಿ ಉಪಸ್ಥಿತರಿದ್ದರು.
•••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✒️
ಚಿಕ್ಕಮಗಳೂರು

