लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಪ್ರತಿ ಜಿಲ್ಲೆಯಲ್ಲಿ 2 ಕಲಾ ಗ್ಯಾಲರಿ ತೆರೆಯಿರಿ: ಬಿ.ಎಲ್.ಶಂಕರ್….

1 min read

‎ಪ್ರತಿ ಜಿಲ್ಲೆಯಲ್ಲಿ 2 ಕಲಾ ಗ್ಯಾಲರಿ ತೆರೆಯಿರಿ: ಬಿ.ಎಲ್.ಶಂಕರ್

‎ಸರ್ಕಾರಕ್ಕೆ ಚಿತ್ರಕಲಾ ಪರಿಷತ್ತು ಅಧ್ಯಕ್ಷ ಮನವಿ

‎ಪ್ರತಿ ಜಿಲ್ಲೆಯಲ್ಲಿ ಸಾಧಕರ ಮ್ಯೂಸಿಯಂ ಮತ್ತು ಕನಿಷ್ಠ 2 ಕಲಾ ಗ್ಯಾಲರಿಗಳನ್ನು ತೆರೆಯಬೇಕು ಎಂದು ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್.ಶಂಕರ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಭಾನುವಾರ ಕುಮಾರಕೃಪ ರಸ್ತೆಯಲ್ಲಿ ರುವ ಪರಿಷತ್ತಿನ ಆವರಣದಲ್ಲಿ ಆಯೋಜಿಸಿದ್ದ 23ನೇ ಚಿತ್ರಸಂತೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಧಕರ ವಸ್ತು ಸಂಗ್ರಹಾಲಯದಲ್ಲಿ ಆಯಾ ಜಿಲ್ಲೆಯ ಎಲ್ಲಾ ಸಾಧಕರ ಪರಿಚಯವನ್ನು ಮುಂದಿನ ಪೀಳಿಗೆಗೆ ಮಾಡಿಕೊಡಲು ಆ ಸಂಗ್ರಹಾಲಯ ಇರಬೇಕು. ಆ ಜಿಲ್ಲೆಗಳ ಕಲಾವಿದರು ರಚಿಸಿದಕಲಾಕೃತಿಗಳನ್ನು ಪ್ರದರ್ಶಿಸಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಎರಡು ಕಲಾಗ್ಯಾಲರಿಗಳು ಇರುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದರು. ಇದೇ ವೇಳೆ ದೇವರಾಜ್ ಅರಸು ಅವರು ಚಿತ್ರಕಲಾ ಪರಿಷತ್ತಿನ ಕುಮಾರಕೃಪ ರಸ್ತೆಯ ಕ್ಯಾಂಪಸ್‌ ನಿರ್ಮಾಣಕ್ಕೆ ಜಾಗ ಮತ್ತು ಅನುದಾನವನ್ನು ಕೊಟ್ಟಿ ದ್ದರು. ಅದೇ ರೀತಿ ಸಿದ್ದರಾಮಯ್ಯ ಅವರು ರಾಜರಾಜೇಶ್ವರಿ ನಗರದಲ್ಲಿರುವ ಹೊಸ ಕ್ಯಾಂಪಸ್ ಕಟ್ಟಲು 20 ಕೋಟಿ ರು. ಕೊಟ್ಟಿದ್ದಾರೆ. ಹಾಗಾಗಿ ಇವರಿಬ್ಬರು ಕೂಡ ಚಿತ್ರ ಕಲಾ ಪರಿಷತ್ತಿನ ಬೆಳವಣಿಗೆಗೆ ಸಹಾಯ ಮಾಡಿದ್ದಾರೆ. ಅದರ ಜೊತೆಗೆ ದೇವರಾಜ್‌ ಅರಸು ಅವರು ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದ ದಾಖಲೆ ಹೊಂದಿದ್ದಾರೆ. ಆ ದಾಖಲೆ ಯನ್ನು ಸಿದ್ದರಾಮಯ್ಯ ಅವರು ಮುರಿದು ಮುನ್ನಡೆಯಲಿದ್ದಾರೆ ದಾರೆ ಎಂದು ಹೇಳಿದರು.

About Author

Leave a Reply

Your email address will not be published. Required fields are marked *

You may have missed