लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನ್ಯಾ.ನಾಗಮೋಹನ್ ದಾಸ್ ವರದಿ ಖಂಡಿಸಿ ಮಾ.13 ರಂದು ಪಂಜಿನ ಮೆರವಣಿಗೆ : ಬಾನುಪ್ರಕಾಶ್….

1 min read

ಮೂಡಿಗೆರೆ, ಮಾರ್ಚ .09:
ನ್ಯಾ.ನಾಗಮೋಹನ್ ದಾಸ್ ವರದಿ ಖಂಡಿಸಿ ಮಾ.13 ರಂದು ಪಂಜಿನ ಮೆರವಣಿಗೆ : ಬಾನುಪ್ರಕಾಶ್.
ಮೂಡಿಗೆರೆ : ಬಾಬಾಸಾಹೇಬ್ ಅಂಬೇಡ್ಕರ್ ರವರ ನಿರಂತರ ಶ್ರಮದ ಫಲವಾಗಿ ಈ ದೇಶಕ್ಕೆ ನೀಡಿದ ಸಂವಿಧಾನದಿಂದಾಗಿ ದೊರೆತ ಮೀಸಲಾತಿಯಿಂದ ಒಂದೆರಡು ತಲೆಮಾರಿನಿಂದ ಶಿಕ್ಷಣ, ಉದ್ಯೋಗಗಳಲ್ಲಿ ಅವಕಾಶವನ್ನು ಪಡೆದು ಪರಿಶಿಷ್ಟ ಸಮುದಾಯ ಸಮಾಜ ಮಂಚೂಣಿಗೆ ಬರುತ್ತಿರುವುದನ್ನು ಸಹಿಸದ ಜತಿವಾದಿಗಳು ಒಳಮೀಸಲಾತಿ ಹೆಸರಿನಲ್ಲಿ ಆದಿಕರ್ನಾಟಕ ಆದಿ ದ್ರಾವೀಡ, ಆದಿ ಆಂದ್ರ, ಹಾಗೂ ಬಲಗೈ ಸಂಬಂಧಿತ ಜಾತಿಗಳನ್ನು ಮೀಸಲಾತಿಯಿಂದ ಹೊರಗಿರಿಸುವ ನ್ಯಾ.ನಾಗಮೋಹನ್ ದಾಸ್ ಅವೈಜ್ಞಾನಿಕ ವರದಿಯನ್ನು ಖಂಡಿಸಿ ಮಾ.13 ರ ಶುಕ್ರವಾರದಂದು ಸಂಜೆ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸುತ್ತಿರುವುದಾಗಿ ಬಲಗೈ ಸಮುದಾಯಗಳ ಯುವ ಒಕ್ಕೂಟದ ಸಂಚಾಲಕ ಬಾನುಪ್ರಕಾಶ್ ತಿಳಿಸಿದ್ದಾರೆ.
ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ತಾಲ್ಲೂಕಿನಲ್ಲಿ 80 ಸಾವಿರಕ್ಕೂ ಅಧಿಕ ಜನ ಸಂಖ್ಯೆಯನ್ನು ಹೊಂದಿರುವ ಬಲಗೈ ಸಮುದಾಯಗಳಿಗೆ ನ್ಯಾ.ನಾಗಮೋಹನ ದಾಸ್ ಅವೈಜ್ಞಾನಿಕ ವರದಿಯಿಂದ ಬಹಳ ಅನ್ಯಾಯವಾಗುತ್ತಿದ್ದು, ಪ್ರಥಮವಾಗಿ ಮೂಡಿಗೆರೆ ಮೀಸಲು ಕ್ಷೇತ್ರದಿಂದಲೇ ಹೋರಾಟವನ್ನು ಆರಂಬಿಸಿದ್ದು ಮಾರ್ಚ್ 13ರ ರಂದು ಪಂಜಿನ ಮೆರವಣಿಗೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಮೈಸೂರಿನ ಅತಿಥಿ ಉಪನ್ಯಾಸಕರಾದ ಡಾ.ರಮೇಶ್ ರವರ ದಿಕ್ಸೂಜಿ ಭಾಷಣ ನಡೆಯಲಿದ್ದು ಸಾರ್ವಜನಿಕರು ಮತ್ತು ಸಮುದಾಯದ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡುವಂತೆ ಮನವಿ ಮಾಡಿಕೊಂಡರು.
ರಾಘವೇಂದ್ರ ಚಿನ್ನಿಗಾ ಮಾತನಾಡಿ. ನಮ್ಮ ಹಕ್ಕುಗಳನ್ನು ನಾವು ಕೇಳಬೇಕಾದರೆ ಯಾರಿಗೂ ಮುಲಾಜು ಮಾಡೋಲ್ಲಾ. ಇಲ್ಲಿ ಬಲಗೈ ಸಮುದಾಯದ ನಾಲ್ಕು ಜನ ಎಂಎಲ್‌ಎ ಗಳಿದ್ದರೂ ಸಹ ಜಾತಿಯ ಸಮೀಕ್ಷೆ ಸಂಬಂಧದಲ್ಲಿ ಯಾರು ಮಾರ್ಗದರ್ಶನ ಮಾಡಿಲ್ಲ. ನಾಳೆ ನಮ್ಮ ಮಕ್ಕಳ ಭವಿಷ್ಯಕ್ಕೆ ಮತ್ತು ನಾಳಿನ ಭವಿಷ್ಯಕ್ಕೊಸ್ಕರ ನಾವು ಹೋರಾಟ ಮಾಡುತ್ತಿರುವುದಾಗಿ ತಿಳಿಸಿದರು.
. ಬಲಗೈ ಸಮುದಾಯಕ್ಕೆ ಬಹಳಷ್ಟು ಅನ್ಯಾಯವಾಗುತ್ತಿದೆ. ನಾಗಮೋಹನ್ ದಾಸ್ ವರದಿ ವೈಜ್ಞಾನಿಕವಾಗಿ ಪರಿಗಣನೆ ಆಗಿಲ್ಲ. ಈಗ ಸಾಮಾನ್ಯವಾಗಿ ಎಲ್ಲರೂ ಕೂಡ ವಿದ್ಯಾವಂತರಾಗಿದ್ದಾರೆ. ಎಲ್ಲರಿಗೂ ಅಂಕಿ ಅಂಶಗಳ, ಸಾಧಕ ಬಾಧಕಗಳು ಗೊತ್ತಿರುತ್ತದೆ ಅಂತದರಲ್ಲೂ ಬಲಗೈ ಸಮುದಾಯಕ್ಕೆ ಬಹಳ ಅನ್ಯಾಯವಾಗಿದೆ. . ಈ ವರದಿಯಗ್ಗೆ ವಿಶ್ಲೇಷಣೆ ಅಗತ್ಯವಾಗಿದೆ ಎಂದರು. ನೈಜವಾದ ಅಸ್ಪರ್ಶ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ನ್ಯಾಯಕೊಡಿಸುವ ಕೆಲಸವಾಗಬೇಕಾಗಿದೆ ಎಂದರು.
ಈ ವರದಿಯಲ್ಲಿ ಲಂಬಾಣಿ ಮತ್ತು ಬೋವಿಗಳನ್ನು ಸೇರಿಸಿದ್ದರ ಪರಿಣಾಮ ಬಲಗೈ ಸಮುದಾಯಕ್ಕೆ ಬಹಳ ಅನ್ಯಾಯವಾಗಿದೆ. ನ್ಯಾ.ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಬೇಕು. ಪ್ರಸ್ತುತ ನೀಡುತ್ತಿರುವ ಜಾತಿ ಪ್ರಮಾಣ ಪತ್ರದಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿಗಳಿಗೆ ಅನಾನು ಕೂಲವಾಗುತ್ತಿದ್ದು ಕೂಡಲೇ ಇದನ್ನು ರದ್ದುಗೊಳಿಸಿ ಈ ಹಿಂದಿನಂತೆಯೇ ಆದಿ ಕರ್ನಾಟಕ ಪರಿಶೀಷ್ಟ ಜಾತಿ ಎಂದು ಕೂಡಲೇ ಸರ್ಕಾರ ಆದೇಶಿಸಬೇಕು. ಉದ್ಯೋಗದಲ್ಲಿ ರೋಷ್ಟರ್ ಬಿಂದುವಿನಲ್ಲಿ ಆಗಿರುವ ಲೋಪದೋಷಗಳನ್ನು ಸರಿ ಪಡಿಸಬೇಕು.
ಬಲಗೈ ಸಮುದಾಯದ ಸಚಿವರು, ಶಾಸಕರ ಮೇಲೆ ಬೇರೆ ಯಾರು ಕೂಡ ಒತ್ತಡ ಹೇರದಂತೆ ತಡೆದು, ಅವಹೇಳನವಾಗಿ ನಿಂದಿಸುವುದನ್ನು ಕೂಡಲೇ ನಿಲ್ಲಿಸಬೇಕು. ಕೇಂದ್ರ ಸರ್ಕಾರ ಸ್ಪರ್ಷ ಜಾತಿಗಳನ್ನು ಅಸ್ಪೃಷ್ಯ ಜಾತಿಗಳ ಪಟ್ಟಿಗೆ ಸೇರಿಸಿದ್ದು, ಕೂಡಲೇ ಸ್ಪರ್ಷ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬೀಡಬೇಕು. ಲಂಬಾಣಿ, ಬೋವಿ ಇತ್ಯಾದಿ, ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಹುಸಂಕ್ಯಾತವಾಗಿರುವ ಬಲಗೈ ಸಮುಧಾಯದವರಿಗೆ ಎಲ್ಲಾ ರಾಜಕೀಯ ಪಕ್ಷಗಳು ಆದ್ಯತೆ ನೀಡಬೇಕೆಂಬ ಹಕ್ಕೋತ್ತಾಯಗಳನ್ನು ಮಂಡಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬಲಗೈ ಒಕ್ಕೂಟದ ಸದಸ್ಯರಾದ ವೆಂಕಟೇಶ್, ಸುಂದರೇಶ್ ಹೊಯ್ಸಳಲು, ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು.

About Author

More Stories

Leave a Reply

Your email address will not be published. Required fields are marked *

You may have missed