ನೈತಿಕ ಪೊಲೀಸ್ ಗಿರಿ ನಡೆಸಿದರೆ ಪೊಲೀಸ್ ಇಲಾಖೆ ಸುಮ್ಮನಿರೋಲ್ಲ…..
1 min read
ನೈತಿಕ ಪೊಲೀಸ್ ಗಿರಿ ನಡೆಸಿದರೆ ಪೊಲೀಸ್ ಇಲಾಖೆ ಸುಮ್ಮನಿರೋಲ್ಲ
@

ನೆನ್ನೆ ಬಿಳಗುಳ ರಂಗಮಂದಿರದಲ್ಲಿ ಪೊಲೀಸ್ ಇಲಾಖೆ ಗ್ರಾಮಸ್ಥರ ಸಭೆ ಕರೆದಿತ್ತು, ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೂಡಿಗೆರೆ ಪೊಲೀಸ್ ಠಾಣೆ ಉಪ ನೀರಿಕ್ಷಕರಾದ ಶ್ರೀನಾಥ್ ರೆಡ್ಡಿ, ಕಾನೂನು ತುಂಬಾ ಬಲಿಷ್ಠವಾಗಿದೆ, ಇತ್ತಿಚಿನ ದಿನಗಳಲ್ಲಿ ಮೂಡಿಗೆರೆಯಲ್ಲಿ ನೈತಿಕ ಪೊಲೀಸ್ ಗಿರಿ ಕಂಡು ಬರುತಿದ್ದು ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ, ಯಾವುದೇ ಕಾರಣಕ್ಕೂ ನೈತಿಕ ಪೊಲೀಸ್ ಗಿರಿಗೆ ಪಟ್ಟು ಹಾಕೆ ಹಾಕುತ್ತೇವೆ, ಜೊತೆಗೆ ಅಸ್ಸಾಂ ವಲಸಿಗರು ಅತೀ ಹೆಚ್ಚು ಬರುತ್ತಿದ್ದು ಇವರಿಗೆ ಬಾಡಿಗೆ ಮನೆ ನೀಡಬೇಕಾದರೆ ಮಾಲೀಕರು ಅವರ ಸಂಪೂರ್ಣ ದಾಖಲೆಗಳನ್ನು ಪಡೆದುಕೊಳ್ಳಬೇಕು ಹಾಗೂ ಅವರುಗಳ ಚಟುವಟಿಕೆ ಬಗ್ಗೆ ಗಮನ ಹರಿಸಬೇಕು, ಅಕ್ರಮ ಮಧ್ಯ, ಗಾಂಜಾ, ಜೂಜು ಇವುಗಳಿಂದ ಎಲ್ಲರೂ ದೂರ ಉಳಿಯಬೇಕು ಇಲ್ಲವಾದಲ್ಲಿ ಒಂದು ದಿನ ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರಾ, ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ, ಸಾರ್ವಜನಿಕರು ತಮಗೆ ನಡೆಯುವ ಅಕ್ರಮಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ ಸಮಾಜದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಎಂದು ನುಡಿದರು, ಈ ಸಮಯದಲ್ಲಿ ASI ಅಶೋಕ್, ಉಮೇಶ್, ಮೇಘರಾಜ್, ಹಾಗೂ ಇನ್ನಿತರ ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮದ ಮುಖ್ಯಸ್ಥರು ಸಭೆಯಲ್ಲಿ ಹಾಜರಿದ್ದರು.
ವರದಿ….
ಮಗ.

