……ನಿಧನ…..
1 min read
ಅವಿನ್ ಟಿವಿ ಸುದ್ದಿಜಾಲ ✒️: ದಿಣ್ಣೇಕೆರೆಯ ಡಿ. ಬಿ ನಾಗರಾಜ್ ನಿಧನ.
ಆಲ್ದೂರು ಫೆ ೨೭: ಸಮೀಪದ ವಸ್ತಾರೆ ಗ್ರಾಮ ಪಂಚಾಯತಿಯ ನೀರು ಗಂಟಿಯಾಗಿ ಕೆಲಸ ಮಾಡುತ್ತಿದ್ದ ದಿಣ್ಣೇಕೆರೆ ಗ್ರಾಮದ ಡಿ ಬಿ ನಾಗರಾಜ್ ಅನಾರೋಗ್ಯದ ಕಾರಣ ನೆನ್ನೆ ಮಧ್ಯ ರಾತ್ರಿ ನಿಧನರಾಗಿದ್ದಾರೆ.
ಹಲವು ವರ್ಷಗಳಿಂದ ವಸ್ತಾರೆ ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಗ್ರಾಮದ ಪ್ರೀತಿಗೆ ಪಾತ್ರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು,
60ರ ವಯೋಮಾನದ ಡಿ. ಬಿ.ನಾಗರಾಜ್ ಅವರು ಪತ್ನಿ ಮತ್ತು ಓರ್ವ ಮಗ ಸೇರಿದಂತೆ ದೊಡ್ಡ ಕುಟುಂಬ ವರ್ಗವನ್ನು, ಅಪಾರವಾದ ಸ್ನೇಹ ಬಳಗವನ್ನು ಬಿಟ್ಟು ಅಗಲಿದ್ದಾರೆ.
ಇಂದು ಮಧ್ಯಾಹ್ನ ಘಂಟೆ 3:00ಕ್ಕೆ ಸ್ವಗ್ರಾಮ ದಿಣ್ಣೇಕೆರೆಯಲ್ಲಿ ಮೃತರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
••••••••••••••
ಡಿ. ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✒️
ಚಿಕ್ಕಮಗಳೂರು

