लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಮ್ಮನೆ ಕಥೆ. ಮಾಜಿ ಮಂತ್ರಿಗಳ ಜೊತೆ…

‎ಹಳೆಮೂಡಿಗೆರೆಯಿಂದ ಬಂದು ಮಗ್ಗಲಮಕ್ಕಿಯಲ್ಲಿ ನೆಲೆಸಿದ ಮೂಡಿಗೆರೆ ಸುಬ್ಬೆಗೌಡ ಎಂದೆ ಹೆಸರಾಗಿದ್ದ ನಮ್ಮ ಅಜ್ಜನಿಂದ ಹಿಡಿದು ಇಲ್ಲಿಯವರೆಗೆ ಸುಮಾರು 74.ವರ್ಷಗಳ ಕಾಲದ ಅನುಭವವನ್ನು ಹಂಚಿಕೊಂಡ ಶ್ರೀಮತಿ.ಮೋಟಮ್ಮನವರ ಕಥೆ ಇದಾಗಿತ್ತು.

‎ಮಗ್ಗಲಮಕ್ಕಿಯಲ್ಲಿರುವ ಸ್ವಂತ ಮನೆಗೆ ಬೇಟಿ ಕೊಟ್ಟು ನಂತರ ನಮ್ಮ ನೂತನ ಮನೆಗೆ ಬಂದರು.ಅಂದಿನ ಬಡತನದ ವಿಚಾರ ಮಾಡುತ್ತಾ ನಮ್ಮ ಕುಟುಂಬವು ಕೆಲಸ ಅರಸಿ ನಾಗರಸೀಮೆಯಿಂದ ಬಂದಿದ್ದು ಮಗ್ಗಲಮಕ್ಕಿಯಲ್ಲಿ ನೆಲಸಿದೆವು.

ದಿ.ಸುಬ್ಬೆಗೌಡರು.ದಿ.ಸಣ್ಣಮ್ಮ.ಅವರ ಮಗನಾದ ದಿ.ಎಂ.ಎಸ್.ಕಾಳೇಗೌಡ ಮತ್ತು ದಿ.ಸುಶೀಲಮ್ಮನವರನ್ನು ನೆನಸಿಕೊಂಡರು.

‎ನಾನು ಕೂಲಿ ಕೆಲಸ ಮಾಡುವಾಗ ಗದ್ದೆಗೆ ಸಗಣಿ ಗೊಬ್ಬರ ಹಂಚಿ ಹಾಕುವುದು.ಸಸಿ ಕೀಳುವುದು.ನಾಟಿ ಮಾಡುವುದು.ಕಳೆ ಕೀಳುವುದು.ಎಡಿ ಹಿಡಿಯುವುದು ನನಗೆ ಗೊತ್ತು ಎಂದರು..

‎ತೋಟದಲ್ಲಿ ಅಗತೆ.ದೂಳಗತೆ.ಹಳ ಹೊಡೆಯುವುದು.ಬಡ್ಡೆ ಬಿಡಿಸುವುದು.ರಸ ಗೊಬ್ಬರ ಹಾಕುವುದು.ಎಲಕ್ಕಿ ಕುಯ್ಯುವುದು ನನಗೆ ಗೊತ್ತಿತ್ತು ಅಂದರು….

‎ಅಂದಿನನಾಟಿಕೋಳಿ.ಹಂದಿಮಾಂಸ.ಶಿಕಾರಿಮಾಂಸ.ಮಣಸಿನತೋಟದಲ್ಲಿ ಸಿಗುತಿದ್ದ ಚಿಲಕನ ಸೊಪ್ಪು.ಹರಿವೆಸೊಪ್ಪು.ಮುಳ್ಳುಹರಿವೆ.ದಂಟುಹರಿವೆ.ಗಣಿಕೆಸೊಪ್ಪು. ಮತ್ತು ಚೊಗಟೆಸೊಪ್ಪು.ಕೊಕ್ಕಣಿಸೊಪ್ಪು.ಕಾಡುಬಸಲೆ.ಬಸಲೆಸೊಪ್ಪು.ಚಿಮ್ಮೆಸೊಪ್ಪು.ತೊಂಡೆಕಾಯಿ.ಸೀಮೆಬದನೆ ಕಾಯಿ.ಕಾಡಿನಲ್ಲಿ ಸಿಗುತ್ತಿದ್ದ ಕಾಡುಹಾಗಲಕಾಯಿ.ಹಾಗಲಕಾಯಿ.ಹುಲುಬುರ ಹಣ್ಣು.ಈಚಲಹಣ್ಣು.ಜೇಪಲಹಣ್ಣು.ಪನ್ನೆರಲಹಣ್ಣು.ಬಕ್ಕಲಹಣ್ಣು.ನೆಲ್ಲಿಕಾಯಿ.ಅಂಕಾಲಿಹಣ್ಣು.ಜೀರಿಕೆ ಹಣ್ಣು.ಚೊಟ್ಟೆಹಣ್ಣು.ಹಲಸಿನ ಹಣ್ಣು.ಹಲಸಿನಕಾಯಿ.ಹಲಸಿನಬಡುಕು.ಹಲಸಿನಹಿಟ್ಟು.ಹಲಸಿನಗಾಳ.ನೆರಲೆಹಣ್ಣು.ಜಮ್ ನೆರಲೆಹಣ್ಣು.ಸೀಬೆಕಾಯಿ ಮತ್ತು ಹಣ್ಣು.ಮುಸುಂಬೆ.ಸಿಹಿಸೊರೆಕಾಯಿ.ಹಾಲುಸೊರೆಕಾಯಿ.ಸೌತೆಕಾಯಿ.ಹೀರೆಕಾಯಿ.ಕಾಡುಹೀರೆಕಾಯಿ.ಪಪ್ಪಾಯಿಕಾಯಿ.ನಟ್ಟಿಗೆಣಸು.ಬೀಳುಗೆಣಸು.ಸುವರ್ಣಗೆಡ್ಡೆ.ನಟ್ಟಿಕೆಸ.ನೀರುಕೆಸ.ಹಾಲುಕೆಸ.ಕರಿಕೆಸ. ಹುಲ್ಲೆಡಿ.ಕಲ್ಲೆಡಿ.ಹಾಲೆಡಿ.ಮುಂಡೆಡಿ. ಬೂತಾಯಿ.ಬಂಗಾಡಿ.ಓಣಗಲ ಮೀನುಗಳಾದ.ನಂಗುಮೀನು.ಬಳಗರಮೀನು.ಸೊಡೆಮೀನು..ಸೀಗಡಿಮೀನು.

ಹಳ್ಳದಲ್ಲಿ ಕಡ್ಲುಕಟ್ಟಿ ಹಿಡಿಯುತ್ತಿದ್ದ  ಹಾವುಮೀನು.ಕೊರೆಮೀನು.ಗೊಜಳಿಮೀನು.ಕೈಂಕಲಮೀನು.ಪಟ್ಲಿಮೀನು..ಅವುಲುಮೀನು.ಬಾಳೆಮೀನುಗಳನ್ನು ನೆನಪಿಸಿಕೊಂಡರು.

‎ನನ್ನ ರಾಜಕೀಯ ಜೀವನ ಶುರುವಾದಲ್ಲಿಂದ ಚುನಾವಣೆಗೆ ಮೊದಲು ಈ ಮನೆಗೆ ಬೇಟಿ ನೀಡಿ ಆಶಿರ್ವಾದ ಪಡೆಯುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು..

‎ತಂದೆ.ತಾಯಿ ಮತ್ತು ಅಣ್ಣನ ಅಭಿಲಾಷೆಯಂತೆ ನನಗೂ ಓದಿ ಸರ್ಕಾರಿ ಕೆಲಸ ಪಡೆಯಬೇಕೆಂಬ ಹೆಬ್ಬಯಕೆಯಂತೆ ಕಷ್ಟಪಟ್ಟು ಎಂ.ಎ.ಪಧವಿ ಪಡೆದೆ.

‎ನನ್ನ ವಿದ್ಯಬ್ಯಾಸದ ಸಂದರ್ಭದಲ್ಲಿ ಸಹಾಯ ಮಾಡಿದವರನ್ನೂ ನೆನಪಿಸಿಕೊಂಡರು.

‎ಕೆಲವು ಕಡೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿದರು.

‎ನಂತರ ಸಭ್ ರೀಜಿಸ್ಟರ್ ಹುದ್ದೆ ಗಿಟ್ಟಿಸಿಕೊಂಡ ಬಗ್ಗೆ ರಾಜಕಾರಣಕ್ಕಾಗಿ ರಾಜಿನಾಮೆ ಕೊಟ್ಟ ಅನುಭವ ಹಂಚಿಕೊಂಡರು…

‎ಶಾಸಕಿಯಾಗಿ.ಮಂತ್ರಿಯಾಗಿ.ವಿದಾನ ಪರಿಷತ್ತ್ ಸದಸ್ಯೆಯಾಗಿ.ವಿರೋದ ಪಕ್ಷದ ನಾಯಕಿಯಾಗಿ.

‎CWC.(Congress working Comity) ಕಾಂಗ್ರೆಸ್ ಪಕ್ಷದ ಅತ್ಯುನ್ನತವಾದ  ಪದವಿ ಸಿಕ್ಕಿದರು ಅಹಂಕಾರ ಪಡಲಿಲ್ಲ ಅಂದರು.

‎”ಓಕ್ಕಲಿಗರ ವಿರೋದಿ” ಅಂತ ಪಟ್ಟ ಕಟ್ಟಿದರೂ  ಅತಿ ಹೆಚ್ಚು ಕಾಫ಼ಿ ಬೆಳೆಗಾರರಾದ ಓಕ್ಕಲಿಗರ ಸಮಸ್ಯೆಗಳಿಗೆ ಕೇಂದ್ರಕ್ಕೆ ನೀಯೊಗವನ್ನು ಕರೆದುಕೊಂಡು ಹೋಗಿ ಪರಿಹಾರ ಕೊಡಿಸಿದ್ದೆನೆಂದರು.

‎ಇಂದಿಗೂ ಸ್ವಾಭಿಮಾನಿಯಾಗಿ ಭ್ರಸ್ಟಚಾರ ಮುಕ್ತವಾಗಿ ಬದುಕುತಿದ್ದೆನೆಂದರು.

ಮೂಡಿಗೆರೆ ಕ್ಷೇತ್ರದ ಎಲ್ಲಾ ಪಕ್ಷದವರು ನನಗೆ ಗೌರವ ಕೊಡುತ್ತಾರೆ ಅದೆ ನನಗೆ ಸಂತಸವಾದ ವಿಚಾರ ಎಂದರು.

‎ಇನ್ನು ಹೆಚ್ಚು ವಿಚಾರಗಳು ನಾನು ಬರೆದ ಪುಸ್ತಕವಾದ “ಬಿದಿರು ನಾನಾರಿಗಲ್ಲದವಳು” ಎಂಬ ಪುಸ್ತಕದಲ್ಲಿದೆ ಓದಿ ನೊಡು ಎಂದು ಎದ್ದು ಹೊರಟೆ ಬಿಟ್ಟರು.

‎ಕೋಳಿಮಾಂಸ ಸಾರು.ಕಡುಬು ಇದೆ

‎ಬನ್ನಿ ಎಂದು ನನ್ನ ಹೆಂಡತಿ ಮಮತ ಹೇಳಿದಾಗ ಆರೋಗ್ಯ ದೃಷ್ಟಿಯಿಂದ ನಾನು ನಾನ್ ವೆಜ್ಜಿನಿಂದ ದೂರ ಎಂದು ಅಗ್ರಹಾರ ಜಾತ್ರೆಯಿಂದ ತಂದಿದ್ದ ಪುರಿಕಡಲೆ ತಿಂದು.ಲೆಮನ್ ಟೀ ಕುಡಿದು ನಮ್ಮನೆ ಹಿರಿಯರ ಪೊಟೊ ನೋಡುತ್ತಾ ಬಾವುಕರಾಗಿ ನನ್ನ ಮಗ ಮಿಲನ್ ಗೆ ಉತ್ತಮ ವ್ಯಕ್ತಿಯಾಗಿ ಹಿರಿಯರ ಗೌರವ ಉಳಿಸು ಎಂದು, ಇತ್ತಿಚಿಗೆ ಮದುವೆಯಾದ ನನ್ನ ಮಗಳು ಅಷ್ಟಮಿ ಮತ್ತು ಅಳಿಯ ಅನುದೀಪ್.ಮುಗ್ರಹಳ್ಳಿ ಬಗ್ಗೆ ಕೇಳುತ್ತಾ.

‎ಬೆಂಗಳೂರಿನಲ್ಲಿರುವ ನನ್ನ ಅಣ್ಣ ರಮೇಶ್ ಮತ್ತು ಅತ್ತಿಗೆ ಶೈಲ ದಂಪತಿಗಳ ಮಗಳು ಪೂಜಾ ಜರ್ಮನ್ ನಲ್ಲಿ ಕೆಲಸದಲ್ಲಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

‎ಮನೆ ಮುಂದಿರುವ ಹೂವಿನ ಗಿಡಗಳನ್ನು ನೊಡುತ್ತಾ ಮಲೆನಾಡಿನ ಮಹಿಳೆಯರು ಹೂವಿನಗಿಡಗಳ ಬಗ್ಗೆ, ಮನೆಯ ಸ್ವಚ್ಚತೆಯ ಬಗ್ಗೆ, ಅಥಿತಿಗಳ ಸತ್ಕಾರಗಳ ಬಗ್ಗೆ ಇರುವ ಕಾಳಜಿಗೆ ಪ್ರಶಂಸೆ ವ್ಯಕ್ತ ಪಡಿಸುತ್ತಾ ಮೆಟ್ಟಿಲು ಇಳಿದು ನೂತನ ಮನೆ ಚೆನ್ನಾಗಿದೆ ಎಂದು ಸಮಾಜ ಸೇವೆಗೆ ನಿನ್ನ ಸಮಯ ಮೊದಲಿನಂತಿರಲಿ.ದುಡುಮೆಗೆ ಹೆಚ್ಚು ಗಮನ ಕೊಡು ಎಂದಾಗ ನನಗೆ ನನ್ನ ತಾಯಿ ಹೇಳುತ್ತಿದ್ದ ಮಾತು ನೆನಪಾಯಿತು.

ನಾನು ಪ್ರಾಥಮಿಕ ಶಾಲೆಯಲ್ಲಿ ಓದುತಿದ್ದಾಗ (1971)ಶಾಲೆಗೆ ಬಂದು ಪಾಠ ಮಾಡಿ.ನಾಟಕ ಕಲಿಸುತಿದ್ದರು.

ವರದಿ…,

ಮಗ್ಗಲಮಕ್ಕಿಗಣೇಶ್.

About Author

Leave a Reply

Your email address will not be published. Required fields are marked *

You may have missed