लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಡೆಯುವ ಅಪ್ಪನ ಜಾತ್ರೆಯ ವೇದಿಕೆಯಲ್ಲಿ “ಅಪ್ಪ ಪ್ರಶಸ್ತಿ” ಪ್ರದಾನ ಸಮಾರಂಭ avintv.com

1 min read
Featured Video Play Icon

ಶಂಕರ ಕಲ್ಲೋಳಿಕರ, ಡಾ. ಪ್ರಕಾಶ ಕುಮಠಳ್ಳಿ, ಕುಮಾರ ಹಾಡಕರ ಸೇರಿ ಏಂಟು ಜನರಿಗೆ 2020ರ ಸಾಲಿನ ಪ್ರತಿಷ್ಠಿತ ಅಪ್ಪ ಪ್ರಶಸ್ತಿ ಪ್ರಕಟಣೆ

ಕೊಹಳ್ಳಿ :

ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ಶ್ರೀ ಬುದ್ಧ ಬಸವ ಅಂಬೇಡ್ಕರ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಇವರ ಆಶ್ರಯದಲ್ಲಿ ಬರುವ ಜನವರಿ 03, 2021 ರಂದು ಅಥಣಿ ತಾಲೂಕಿನ ಚಮಕೇರಿಯಲ್ಲಿ  ಲಿಂ :  ರಾಮಗೌಡ ಬಸಗೌಡ ಬಿರಾದಾರ ಐದನೆಯ ಸ್ಮರಣಾರ್ಥವಾಗಿ ನಡೆಯುವ “ಅಪ್ಪನ ಜಾತ್ರೆ” 2020 ನೇ ಸಾಲಿನ ಪ್ರತಿಷ್ಠಿತ ಅಪ್ಪ ಪ್ರಶಸ್ತಿ  ಪ್ರಕಟಗೊಂಡಿವೆ.

ಆಡಳಿತ ಸೇವೆಯಲ್ಲಿ  ಶಂಕರ ಕಲ್ಲೋಳಿಕರ, ವೈದ್ಯಕೀಯ ಸೇವೆಯಲ್ಲಿ ಡಾ. ಪ್ರಕಾಶ ಕುಮಠಳ್ಳಿ, ಆಡಳಿತ ಸೇವೆಯಲ್ಲಿ  ಕುಮಾರ ಹಾಡಕರ, ಸಮಾಜಸೇವೆಯಲ್ಲಿ ಅನೀಲ ಸುಣದೋಳಿ, ಧಾರ್ಮಿಕ ಸೇವೆಯಲ್ಲಿ ಧರೆಪ್ಪಾ ಠಕ್ಕಣ್ಣವರ, ಸಂಘಟನಾಸೇವೆಯಲ್ಲಿ ಅರುಣ ಐಹೊಳೆ, ಆದರ್ಶ ದಂಪತಿ ಸತ್ಯಪ್ಪಾ ಪೂಜಾರಿ, ಸಮಾಜಸೇವೆಯಲ್ಲಿ ನಿಜಪ್ಪ ಹಿರೇಮನಿ ಸೇರಿದಂತೆ ಏಂಟು ಜನ ಸಾಧಕರಿಗೆ ಜನವರಿ 03, 2021 ರಂದು ನಡೆಯುವ ಅಪ್ಪನ ಜಾತ್ರೆಯ ವೇದಿಕೆಯಲ್ಲಿ “ಅಪ್ಪ ಪ್ರಶಸ್ತಿ” ಪ್ರದಾನ ಸಮಾರಂಭವು ಜರಗುತ್ತಿದೆ ಎಂದು ಧುರೀಣ, ನ್ಯಾಯವಾದಿ ಶ್ರೀಕಾಂತ ಪೂಜಾರಿ ತಿಳಿಸಿದರು.

ರವಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅಪ್ಪನ ಇರುವಿಕೆಯ ಮೂಲಕ ಅಪ್ಪನನ್ನು ಗುರುತಿಸಲು ಹೊರಟಿರುವ ಬಿರಾದಾರ ಅವರ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಸಮಾಜ ಮುಖಂಡ ರಾಜೇಂದ್ರ ಐಹೊಳೆ, ಚಿದಾನಂದ ತಳಕೇರಿ, ಹನುಮಂತ ಅರ್ದಾಊರ,

ಟ್ರಸ್ಟನ ಅಧ್ಯಕ್ಷ ಮಹಾದೇವ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

About Author

You may have missed