ಧ್ವನಿ ಪ್ರಪಂಚದಲ್ಲಿ ರೇಡಿಯೋಕ್ಕೆ ಮಹತ್ವ ಹೆಚ್ಚು….
1 min read
ಅವಿನ್ ಟಿವಿ ಸುದ್ದಿಜಾಲ ✒️: ಧ್ವನಿ ಪ್ರಪಂಚದಲ್ಲಿ ರೇಡಿಯೋಕ್ಕೆ ಮಹತ್ವ ಹೆಚ್ಚು, ಕಾರಣ ಅದು ಅಚ್ಚುಮೆಚ್ಚಿನ ಸಂಗಾತಿಯಂತೆ ನಿತ್ಯ ಕಾರ್ಯನಿರ್ವಹಿಸುತ್ತೆ, ಇಷ್ಟು ಮಾತ್ರವಲ್ಲ ಇದು ಅತ್ಯಂತ ಹಳೆಯ ಪ್ರಭಾವಿಶಾಲಿ ಮಾಧ್ಯಮ ಕೂಡ ಹೌದು.
ಫೆಬ್ರವರಿ 13 ವಿಶ್ವ ರೇಡಿಯೋ ದಿನ,,,,,
ಒಬ್ಬ ಮಧುರ ಮಾತಿನ ಮಾತುಗಾರನಾಗಿ~ ಮಾತುಗಾರಳಾಗಿ ರಮ್ಯ ಮನದ ರಾಗ ಲಾಪದೊಂದಿಗೆ ಮನಮೋಹಕವಾದ ಕಲ್ಪನೆಯ ಭಾವ ಬಿತ್ತುತ್ತಾ ಮನೋರಂಗಭೂಮಿಯಂತೆ ಕೇಳುವ ಕಿವಿಗಳಿಗೆ ಇಂಪು ಮನಸ್ಸಿಗೆ ತಂಪು ನೀಡುವ ಬಾನುಲಿ ಅತ್ಯಂತ ಸಶಕ್ತ ಮಾಧ್ಯಮ ಎನ್ನುವುದರಲ್ಲಿ ಎರಡು ಮಾತಿಲ್ಲ.
ಟೆಲಿವಿಜನ್ ಅನ್ನು ಎದೆಗೆ ಅವಚಿಕೊಂಡು ಮಲಗಲು ಸಾಧ್ಯವಿಲ್ಲ ಆದರೆ ರೇಡಿಯೋವನ್ನು ಮಕ್ಕಳನ್ನು ಎದೆಯ ಮೇಲೆ ಮಲಗಿಸಿಕೊಂಡಂತೆ ಎದೆ ಗೂಡಿನ ಮೇಲೆ ಅವಚಿಕೊಂಡು ಅದಕ್ಕೆ ದನಿಯಾಗಿ ಪ್ರಭಾವಗೊಂಡವರು ಅದೆಷ್ಟೋ ಜನ.
ಆಧುನಿಕತೆಯ ಭರಾಟೆಯಲ್ಲಿಯೂ ಕೂಡ ತನ್ನತನವನ್ನು ಇಂದಿಗೂ ರಾಜಿಯಾಗದಂತೆ ಕಾಪಿಟ್ಟುಕೊಂಡು ಬರುತ್ತಿರುವ ರೇಡಿಯೋ ಅದೆಷ್ಟೋ ಸಂವಹನವನ್ನು ಸಾಧ್ಯವಾಗಿಸಿದೆ, ಮನುಷ್ಯ ಮನುಷ್ಯರನ್ನು ಹತ್ತಿರವಾಗಿಸಿದೆ, ಮನಸ್ಸು ಮನಸ್ಸನ್ನು ಅರಳಿಸಿದೆ, ಹಗಲಿಡಿ ಬಯಲಲ್ಲಿ ದುಡಿದು ಮನೆಗೆ ಬಂದ ಶ್ರಮಿಕರ ದಣಿವನ್ನು ನಿವಾರಿಸಿದೆ, ಈ ಎಲ್ಲ ಕಾರಣಕ್ಕಾಗಿ ರೇಡಿಯೋವನ್ನು ಮತ್ತಷ್ಟು ಬೆಳೆಸೋಣ.
ಅವಿನ್ ಟಿವಿ ಸುದ್ದಿಜಾಲದ ಪರವಾಗಿ ವಿಶ್ವ ರೇಡಿಯೋ ದಿನದ ಶುಭಾಶಯಗಳು.
••••••••••••
ಡಿ. ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

