लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಧರ್ಮ ಸಹಿಷ್ಣತೆಯನ್ನು ಮೆರೆದೆ ಮುಸ್ಲಿಂ ದಂಪತಿಗಳು~ ಬೆಳಗಾವಿಯಲ್ಲಿ ಹೀಗೊಂದು ಮದುವೆ……

1 min read

ಅವಿನ್ ಟಿವಿ ಸುದ್ದಿಜಾಲ ✒️: ಧರ್ಮ ಸಹಿಷ್ಣತೆಯನ್ನು ಮೆರೆದೆ ಮುಸ್ಲಿಂ ದಂಪತಿಗಳು~ ಬೆಳಗಾವಿಯಲ್ಲಿ ಹೀಗೊಂದು ಮದುವೆ.

ತಂದೆ ತಾಯಿಗಳನ್ನು ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡು ಅನಾಥರಾದ ಇಬ್ಬರು ಲಿಂಗಾಯಿತ ಸಮುದಾಯದ ಮಕ್ಕಳನ್ನು ಮುಸಲ್ಮಾನ್ ಕುಟುಂಬವೊಂದು ಮಾನವೀಯ ನೆಲೆಗಟ್ಟಿನೊಂದಿಗೆ ಅ ಇಬ್ಬರು ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಸಾಕಿ ಸಲಹಿ ವಿದ್ಯಾಭ್ಯಾಸ ಜೊತೆಗೆ ನೌಕರಿ ಕೊಡಿಸಿ, ಈಗ ಲಿಂಗಾಯಿತ ಧರ್ಮದ ಸಂಪ್ರದಾಯದಂತೆಯೇ ಈ ಮುಸಲ್ಮಾನ್ ಸಮುದಾಯದ ದಂಪತಿಗಳು ತಂದೆ ತಾಯಿ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ್ದಾರೆ.

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಬಸ್ತವಾಡ ಗ್ರಾಮದ ಮುಸ್ಲಿಂ ದಂಪತಿಯು ಹಿಂದೂ ಧರ್ಮದ ಇಬ್ಬರು ಅನಾಥ ಮಕ್ಕಳನ್ನು ಸಾಕಿ ಬೆಳೆಸಿ, ಶಿಕ್ಷಣ ಮತ್ತು ಉದ್ಯೋಗ ಕೊಡಿಸಿ ಈಗ ಅನಾಥ ಮಕ್ಕಳಲ್ಲಿ ಒಬ್ಬರ ಮದುವೆಯನ್ನೂ ಹಿಂದೂ ಸಂಪ್ರದಾಯದಂತೆಯೇ ಎಲ್ಲ ಖರ್ಚು ವೆಚ್ಚಗಳನ್ನು ಬರಿಸಿ ತಂದೆ ತಾಯಿಗಳ ಸ್ಥಾನದಲ್ಲಿ ನಿಂತು ಮದುವೆ ಮಾಡಿದ್ದಾರೆ.

ಗ್ರಾಮದ ಕಾಡಸಿದ್ದೇಶ್ವರ ಸಭಾಭವನದಲ್ಲಿ ಭಾನುವಾರ ಹಾಕಿದ್ದ ಮದುವೆ ಮಂಟಪದಲ್ಲಿ ವಧು-ವರರಷ್ಟೇ ಹಿಂದೂಗಳು. ಮದುವೆ ಜವಾಬ್ದಾರಿ, ಖರ್ಚು- ವೆಚ್ಚ, ಓಡಾಟ ಎಲ್ಲವೂ ಮುಸ್ಲಿಮರದ್ದು.

ಗ್ರಾಮದ ಮೆಹಬೂಬ್ ಹಸನ್ ನಾಯಿಕವಾಡಿ (ಮುಲ್ಲಾ) ಹಾಗೂ ನೂರಜಾನ್ ದಂಪತಿಯೇ ಭಾವೈಕ್ಯ ಮೆರೆದವರು. ದಂಪತಿಯ ನಿರ್ಧಾರಕ್ಕೆ ಅವರ ಇಡೀ ಕುಟುಂಬದವರು ಬೆಂಬಲವಾಗಿ ನಿಂತರು.

ಪೂಜಾರ ದಂಪತಿಗೆ ಇಬ್ಬರು ಪುತ್ರರಿದ್ದರು. ಹಿರಿಯ ಪುತ್ರ ಸೋಮಶೇಖರಗೆ ನಾಲ್ಕು ವರ್ಷ, ಕಿರಿಯ ಪುತ್ರ ವಸಂತಗೆ ಎರಡು ವರ್ಷ ಇದ್ದಾಗ ಪೂಜಾರ ದಂಪತಿ ನಿಧನರಾದರು.

ಅನಾಥರಾದ ಲಿಂಗಾಯಿತ ಸಮುದಾಯದ ಈ ಮಕ್ಕಳನ್ನು ಮುಸಲ್ಮಾನ್ ಸಮುದಾಯದ ನಾಯಿಕವಾಡಿ ದಂಪತಿಗಳು ತಮ್ಮ ಮಡಿಲಿಗೆ ಹಾಕಿಕೊಂಡರು. ಇಬ್ಬರನ್ನೂ ಸಾಕಿ, ಸಲುಹಿ, ಉತ್ತಮ ಶಿಕ್ಷಣ ಕೊಡಿಸಿದರು. ನಾಯಿಕವಾಡಿ ದಂಪತಿಗೂ ನಾಲ್ವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಏಳು ಮಕ್ಕಳನ್ನು ದಂಪತಿ ಒಂದೇ ಮನೆಯಲ್ಲಿಟ್ಟುಕೊಂಡು ಸಲಹಿದ್ದಾರೆ.

ಮೆಹಬೂಬ್ ಹಸನ್ ನಾಯಿಕವಾಡಿ ಅವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಶಿವಾನಂದ ಕಾಡಯ್ಯ ಪೂಜಾರ ಕೂಡ ಖಾಸಗಿ ಬಸ್ ಚಾಲಕರಾಗಿದ್ದರು.

ಪದವಿ ಶಿಕ್ಷಣ ಪಡೆದಿರುವ ಸೋಮಶೇಖರ್ ಮತ್ತು ಪಿಯು ಶಿಕ್ಷಣ ಮುಗಿಸಿದ ವಸಂತ ಇಬ್ಬರೂ ವಿಶೇಷ ಆರ್ಥಿಕ ವಲಯದ (ಎಸ್.ಇ.ಝಡ್) ಏಕಸ್ ಕಂಪನಿಯ ಉದ್ಯೋಗಿಗಳು.

ಈಗ ಸೋಮಶೇಖರ್‌ಗೆ ಕನ್ಯ ನೋಡಿದ್ದಿ. ಗ್ರಾಮದಲ್ಲಿ ಹಿಂದೂ – ಲಿಂಗಾಯತ ಸಂಪ್ರದಾಯದಂತೆಯೇ ಮದುವೆ ಮಾಡಿದ್ದಾರೆ. ಕರುಳಕುಡಿಯಂತೆ ಸಾಕಿ ಬೆಳೆಸಿದ ಮಗನ ಮದುವೆ ಕಂಡು ನಾಯಿಕವಾಡಿ ದಂಪತಿ ಭಾವುಕರಾದರು.

ಕುಟುಂಬದವರು ಹಾಗೂ ಊರಿನ ಹಿರಿಯರು ಇದಕ್ಕೆ ಸಾಕ್ಷಿಯಾದರು.

ಮನುಷ್ಯರೆಲ್ಲ ಒಂದೇ ಎಂಬುದು ನನ್ನ ಭಾವನೆ. ಇಬ್ಬರೂ ಮಕ್ಕಳು ನಮ್ಮ ಮನೆಯಲ್ಲಿ ನಮ್ಮ ಮಕ್ಕಳಂತೆಯೇ ಬೆಳೆದರು. ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಮೆಹಬೂಬ್ ಹಸನ್ ನಾಯಿಕವಾಡಿ (ಮುಲ್ಲಾ) ದಂಪತಿಗಳು ಭಾವುಕರಾಗಿ ಹೇಳಿದರು.

“ಧರ್ಮ ಸಂಘರ್ಷಗಳು ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಮುಸಲ್ಮಾನ್ ಸಮುದಾಯದ ನಾಯಿಕವಾಡಿ ಕುಟುಂಬದವರು ತಗೆದುಕೊಂಡ ನಿರ್ಧಾರ ಇಡೀ ದೇಶಕ್ಕೆ ಮಾದರಿ”

ಸುದ್ದಿ & ಫೋಟೋ ಕೃಪೆ :ಮಲ್ಲು ಗಣಾಚಾರಿ
••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed