ದೇವರ ಸೇವೆ ಮಾಡಲು ದೇವಾಲಯಕ್ಕೇ ಹೋಗಬೇಕು ಎನ್ನುವುದಿಲ್ಲ;….
1 min read
ದೇವರ ಸೇವೆ ಮಾಡಲು ದೇವಾಲಯಕ್ಕೇ ಹೋಗಬೇಕು ಎನ್ನುವುದಿಲ್ಲ;
ಪ್ರಕೃತಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಭೂಮಿಯ ಮೇಲೆ ಕಸ ಬಿಸಾಡದೇ ಪರಿಸರವನ್ನು ಕಾಪಾಡುವುದು ನಮ್ಮ ಮೊದಲ ಕರ್ತವ್ಯ.
ಕಳೆದ ಮಹಾಶಿವರಾತ್ರಿ ಹಬ್ಬದ ದಿನ ಪಾದಯಾತ್ರೆ ಮೂಲಕ ತೆರಳಿದ ಭಕ್ತರು ಹಾಗೂ ಸ್ಥಳೀಯರು ಬಿಸಾಡಿದ ಪ್ಲಾಸ್ಟಿಕ್, ಗಾಜು ಹಾಗೂ ಇತರ ತ್ಯಾಜ್ಯಗಳನ್ನು ತೆರವುಗೊಳಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶೌರ್ಯ ತಂಡದ ಸಹಭಾಗಿತ್ವದಲ್ಲಿ, ತೋಟಗಾರಿಕೆ ಇಲಾಖೆಯ ವಿದ್ಯಾರ್ಥಿಗಳು ಹಾಗೂ ಹಲವು ಸಂಘ–ಸಂಸ್ಥೆಗಳೊಂದಿಗೆ ಸೇರಿ ಗೋಣಿಬೀಡುದಿಂದ ಕೊಟ್ಟಿಗೆಹಾರವರೆಗೆ ಮಹಾ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಅಭಿಯಾನದ ವೇಳೆ ಸುಮಾರು ನಾಲ್ಕರಿಂದ ಐದು ಗಾಡಿಗಳಷ್ಟು ಕಸವನ್ನು ಸಂಗ್ರಹಿಸಿ ತೆರವುಗೊಳಿಸಲಾಯಿತು. ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ನಿರಂತರವಾಗಿ ನಡೆದ ಈ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು.
ಈ ಸಂದರ್ಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರರು, ಮೂಡಿಗೆರೆ ತಾಲೂಕಿನ ಯೋಜನಾ ಅಧಿಕಾರಿ ಸುದೀರ್ ಕುಮಾರ್ ಜೈನ್, ಚಿತ್ರದುರ್ಗ ಜಿಲ್ಲೆಯ ಜನಜಾಗೃತಿ ವಿಭಾಗದ ನಾಗರಾಜ್ ಕುಲಾಲ್, ಶೌರ್ಯ ತಂಡದ ಸದಸ್ಯರು, ಗೋಣಿಬೀಡು, ಮೂಡಿಗೆರೆ ಕಸಬಾ, ಆಲ್ದೂರು, ಬಣಕಲ್, ಬಕ್ಕಿ ಘಟಕಗಳ ಶೌರ್ಯ ತಂಡದ ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ಸಂಸ್ಥೆಯ ಮೇಲಾಧಿಕಾರಿಗಳು ಮತ್ತು ಅನೇಕ ಸ್ವಯಂಸೇವಕರು ಭಾಗವಹಿಸಿದರು.
ಎಲ್ಲರ ಸಮನ್ವಯ ಮತ್ತು ಸಹಕಾರದಿಂದ ಈ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನೆರವೇರಿತು.
“ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ” ಎಂಬ ಮಹತ್ವದ ಸಂದೇಶವನ್ನು ಈ ಕಾರ್ಯಕ್ರಮ ಮತ್ತೊಮ್ಮೆ ಸಾರಿ ಹೇಳಿತು. 🌿
<span;>

