ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಭೀಮ್, ಜೈ ಸಂವಿಧಾನ್ ಎಂಬುದು ನಮ್ಮೆಲ್ಲರ ಮೂಲ ಷೋಷಣೆಯಾಗಲಿ…..
1 min read
“ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಭೀಮ್, ಜೈ ಸಂವಿಧಾನ್ ಎಂಬುದು ನಮ್ಮೆಲ್ಲರ ಮೂಲ ಷೋಷಣೆಯಾಗಲಿ
”
💪💪💪💪💪💪💪💪💪
ಕೋಟ್ಯಾಂತರ ಭಾರತೀಯರು ನೆಮ್ಮದಿಯಿಂದ ಭಯ ಭೀತಿ ಇಲ್ಲದೆ ಈ ದೇಶದಲ್ಲಿ ಬದುಕಲು ರಕ್ಷಣೆ ಕವಚದಂತಿರುವರು ಈ ದೇಶವನ್ನು ಕಾಯುವ ಯೋಧರು ಹಾಗೆಯೇ ಹಗಲಿರುಳೆನ್ನದೆ ಅನ್ನವ ಕಾಣದೆ ಅನ್ನಕ್ಕಾಗಿ ದುಡಿದು ಕೋಟ್ಯಂತರ ಜೀವರಾಶಿಗಳ ಹೊಟ್ಟೆ ತುಂಬಿಸುತ್ತಿರುವವರು ಈ ದೇಶದ ಶ್ರಮಜೀವಿಗಳು ಅದಕ್ಕಾಗಿ ಲಾಲ್ ಬಹುದ್ದೂರ್ ಶಾಸ್ತ್ರಿ, ಜೈ ಜವಾನ್, ಜೈ ಕಿಸಾನ್ ಎಂದರು ಮುಂದುವರೆದು ಭಾರತ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರಿಯಬೇಕು ಎಂಬುವ ಉದ್ದೇಶದಿಂದಲೇ ಅಟಲ್ ಬಿಹಾರಿ ವಾಜಪೇಯಿಯವರು ಜೈ ವಿಜ್ಞಾನ್ ಎಂಬುವ ಘೋಷಣೆಯನ್ನು ನೀಡಿದರು.
ಬಹಳ ಹಿಂದೆಯೇ
ಜೈ ಭೀಮ್ ಎಂದರು ವ್ಯವಸ್ಥೆ ವಿರುದ್ಧ ದಿಟ್ಟತನದಿಂದ ಹೋರಾಡಿ ವಿಜಯ ಸಾಧಿಸಿದ ದಿನ ಅದಕ್ಕೆ ಉದಾಹರಣೆ ಮಹಾರ್ ಸೈನಿಕರು ಜೀವ ವಿರೋಧಿ ನೀತಿಯ ವಿರುದ್ಧ ವಿಜಯ ಸಾಧಿಸಿದ ವಿಜಯದ ಸಂಕೇತವೇ ಜೈ ಭೀಮ್,
ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ಕಲ್ಲು, ಮಣ್ಣು, ಮರ,ಗಿಡ, ನದಿ ,ತೊರೆ, ಭಾಷೆ, ಧರ್ಮ ಪ್ರತಿಯೊಂದಕ್ಕೂ ರಕ್ಷಣೆ ನೀಡುತ್ತಿರುವ ಸಂವಿಧಾನವನ್ನು ನಾವೆಲ್ಲರೂ ಇಂದು ಒಗ್ಗಟ್ಟಿನಿಂದ ಘೋಷಿಸಬೇಕಾಗಿದೆ ಜೈ ಸಂವಿಧಾನ್ ಎಂದು.
ಒಟ್ಟಾರೆ ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಭೀಮ್, ಜೈ ಸಂವಿಧಾನ್ ನಮ್ಮೆಲ್ಲರ ಘೋಷಣೆಯಾಗಲಿ…
ಪೂರ್ಣ ಸ್ವರಾಜ್ ನೆನಪಿಗಾಗಿ ಸಂವಿಧಾನ ಜಾರಿಯಾದ ದಿನದ ಶುಭಾಶಯಗಳು…..
💐💐

