लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶವು ದಿನಾಂಕ 23/02/2026 ರಂದು…..

1 min read

ದಿನಾಂಕ 18/02/2026 ರಂದು ಶ್ರೀ ಬಿ.ಎಸ್‌ ಜಯರಾಮ್‌ ಮಾನ್ಯ ಅಧ್ಯಕ್ಷರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ನಡಾವಳಿ. ಉಪಸ್ಥಿತಿ:
1. ಶ್ರೀ ಬಿ.ಎಸ್.‌ ಜಯರಾಮ್‌ ಮಾನ್ಯ ಅಧ್ಯಕ್ಷರು, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
2. ಶ್ರೀಮತಿ ದಯಾವತಿ ಎಂ. ಸದಸ್ಯ ಕಾರ್ಯದರ್ಶಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
3. ಶ್ರೀ ಹೆಚ್.ಪಿ. ರಮೇಶ್‌, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
4. ಶ್ರೀ ಗುರುವಪ್ಪ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
5. ಶ್ರೀ ಶ್ರೀನಿವಾಸ್‌, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
6. ಶ್ರೀ ನವೀನ್‌, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
7. ಶ್ರೀ‌ ಭರತ್ ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
8. ಶ್ರೀಮತಿ ಜಯಮ್ಮ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
9. ಶ್ರೀ ನಾರಾಯಣ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
10. ಶ್ರೀ ಚಂದ್ರಯ್ಯ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ

ಗೃಹಲಕ್ಷ್ಮಿ ಯೋಜನೆ:
ಇಲಾಖಾಧಿಕಾರಿಗಳು ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 29078 ಗೃಹಲಕ್ಷ್ಮಿ ಫಲಾನುಭವಿಗಳು ಇದ್ದು, ಇದರಲ್ಲಿ 28350 ಫಲಾನುಭವಿಗಳಿಗೆ ಯೋಜನೆಯ ಹಣ ಬರುತ್ತಿರುವುದಾಗಿ ಹಾಗೂ ಯೋಜನೆಯಿಂದ ಬಾಕಿ ಉಳಿದ ರೇಷನ್‌ ಕಾರ್ಡ್‌ಗಳು NPCI-158, IT/GST-210, ತಿದ್ದುಪಡಿ/ಮರಣ-360 ಒಟ್ಟು 728 ಇರುತ್ತದೆ. ನವಂಬರ್-2025 ರ ಮಾಹೆಯವರೆಗೆ ಗೃಹಲಕ್ಷ್ಮೀ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಿರುವುದಾಗಿ ತಿಳಿಸಿದರು.

ಅನ್ನಭಾಗ್ಯ ಯೋಜನೆ:
ಆಹಾರ ಶಿರಸ್ತೇದಾರರು ಸಭೆಗೆ ಅನ್ನ ಭಾಗ್ಯ ಯೋಜನೆಯ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 843 ಬಿಪಿಎಲ್‌ ಪಡಿತರಚೀಟಿಯನ್ನು ರದ್ದುಪಡಿಸಿ ಎಪಿಎಲ್‌ ಕಾರ್ಡಿಗೆ ವರ್ಗಾಯಿಸಲಾಗಿದೆ. 18212 ಬಿಪಿಎಲ್‌ ಪಡಿತರಚೀಟಿ ಪ್ರಸ್ತುತ ಇರುತ್ತದೆ. ಪಡಿತರ ಚೀಟಿಗೆ E-KYC ನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ತಿಳಿಸಿದರು. ಅನ್ನಭಾಗ್ಯ ಯೋಜನೆಯ 3 ತಿಂಗಳ ಹಂಚಿಕೆಯಾದ ಅಕ್ಕಿ ಬಂದಿರುವುದಿಲ್ಲವೆಂದು ಸಭೆಗೆ ಮಾಹಿತಿ ನೀಡಿದರು.

ಗೃಹಜ್ಯೋತಿ ಯೋಜನೆ:
ಇಲಾಖಾಧಿಕಾರಿಗಳು ಗೃಹಜ್ಯೋತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 25959 ಗೃಹಜ್ಯೋತಿ ಫಲಾನುಭವಿಗಳು ಇದ್ದು, 22531 ಫಲಾನುಭವಿಗಳಿಗೆ ಸರ್ಕಾರದಿಂದ ರೂ. 9379517/- ಅನುದಾನ ಬಿಡುಗಡೆಯಾಗಿರುತ್ತದೆ. ಹಾಗೂ ಸರ್ಕಾರದ ಆದೇಶದಂತೆ 127 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಹಾಗೂ ಗೃಹಜ್ಯೋತಿ ಯೋಜನೆಯಲ್ಲಿ ಅಧಿಕ ವಿದ್ಯುತ್‌ ಬಳಸಿರುವ ಫಲಾನುಭವಿಗಳ ಸಂಖ್ಯೆ 3301 ಇದ್ದು, ರೂ.929973/- ಬಿಲ್‌ ಪಾವತಿಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಯುವನಿಧಿ ಯೋಜನೆ:
ಯುವನಿಧಿ ಯೋಜನೆಯಡಿ ಈವರೆಗೂ ಪದವಿ ವಿಭಾಗದಲ್ಲಿ 2751 ಹಾಗೂ ಡಿಪ್ಲೊಮೋ ವಿಭಾಗದಲ್ಲಿ 30 ವಿಧ್ಯಾರ್ಥಿಗಳು ನೊಂದಣಿಯಾಗಿರುತ್ತಾರೆ. ಸರ್ಕಾರದಿಂದ ರೂ.76,83,006 ಅನುದಾನ ಬಿಡುಗಡೆಯಾಗಿರುತ್ತದೆ. ಕೌಶಲ್ಯಾಭಿವೃದ್ದಿ ತರಭೇತಿಗೆ ನೊಂದಣಿ ಮಾಡಿಕೊಂಡ ವಿಧ್ಯಾರ್ಥಿಗಳು ತರಭೇತಿಗೆ ಹಾಜರಾಗದಿದ್ದಲ್ಲಿ ಅವರು ಉದ್ಯೋಗದಲ್ಲಿರುವ ಬಗ್ಗೆ ಖಚಿತಪಡಿಸಿಕೊಂಡು ಯೋಜನೆಯಿಂದ ಕೈ ಬಿಡಲು ಮಾನ್ಯ ಅಧ್ಯಕ್ಷರು ತಿಳಿಸಿದರು.

 

 

ಶಕ್ತಿ ಯೋಜನೆ:
ಇಲಾಖಾಧಿಕಾರಿಗಳು ಶಕ್ತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಫೆಬ್ರವರಿ ಮಾಹೆಯಲ್ಲಿ ಪ್ರಸ್ತುತ 145049 ಫಲಾನುಭವಿಗಳು ಬಸ್‌ ನಲ್ಲಿ ಪ್ರಯಾಣಿಸಿದ್ದು, ರೂ.7381778/- ಸರ್ಕಾರದಿಂದ ಅನುದಾನ ಬಿಡುಗಡೆಯಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.

ಇತರೆ ವಿಷಯಗಳು:
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶವು ದಿನಾಂಕ 23/02/2026 ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿದ್ದು, ಮೂಡಿಗೆರೆ ತಾಲ್ಲೂಕಿನ ಗ್ಯಾರಂಟಿ ಯೋಜನೆ ಫಲಾನುಭವಿಗಳು ಸಮಾವೇಶದಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಿಕೊಡುವಂತೆ ಶ್ರೀ ಬಿ.ಎಸ್. ಜಯರಾಮ್‌ ಅಧ್ಯಕ್ಷರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರವರು ಕೋರಿದರು.

About Author

Leave a Reply

Your email address will not be published. Required fields are marked *

You may have missed