लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಚಿಕ್ಕಮಗಳೂರಿನ ಮೂಗ್ತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್‌ ಪೋಸ್ಟ್ ವರೆಗೂ ಒನ್ ವೇ ಡಬಲ್ ರೋಡ್….

1 min read

‎ಚಿಕ್ಕಮಗಳೂರಿನಿಂದ ಮೂಗ್ತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್‌ ಪೋಸ್ಟ್ ವರೆಗೂ ಒನ್ ವೇ ಡಬಲ್ ರೋಡ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಹೈವೆ ಪ್ರಾಧಿಕಾರಕ್ಕೆ 3 ವರ್ಷಗಳ ಹಿಂದೆಯೇ 480 ಕೋಟಿ ರೂಗಳನ್ನು ಮಂಜೂರು ಮಾಡಿರುವುದು ಆದರೆ ಹೈವೆ ಪ್ರಾಧಿಕಾರ ಮತ್ತು ಚಿಕ್ಕಮಗಳೂರು ಜಿಲ್ಲಾಡಳಿತ ಯಾವುದೆ ಪೂರ್ವಭಾವಿ ಕೆಲಸಗಳನ್ನು ಪ್ರಾರಂಭ ಮಾಡದೆ ತಮ್ಮ ಸಮಯ ಕಳೆಯುತ್ತಿದ್ದಾರೆ ಈ ಕೆಲಸ ಕಾರ್ಯಗಳು ಮಲೆನಾಡು ಭಾಗದಲ್ಲಿ ನಡೆಯುವುದರಿಂದ ಮತ್ತು ಮಳೆಗಾಲ ಪ್ರಾರಂಭ ಆದರೆ ಮತ್ತೆ 6 ತಿಂಗಳು ಮಳೆಗಾಲದ ಕಾರಣ ಕೊಡುತ್ತಾ ಸಮಯವನ್ನು ಪ್ರತಿ ವರ್ಷ ಕಳೆಯುತ್ತಿದ್ದಾರೆ ಕೆ ಎಂ ರಸ್ತೆಗೆ ಸಂಬಂಧಪಟ್ಟಂತೆ ರಸ್ತೆಯೂ ಎರಡು ಬದಿಯ ಸಾಲಮರಗಳು ಕೆಎಂ ರೋಡ್ ಲಿಮಿಟ್ ಒಳಗೆ ಬರುವುದರಿಂದ ಮತ್ತು ಈ ಮರಗಳನ್ನು ಅರಣ್ಯ ಇಲಾಖೆ ನಾಟಿ ಮಾಡಿ ಬೆಳೆಸಿದ ಮರಗಳು ಅಲ್ಲಿ ಈ ಮರಗಳು ಹಿಂದೆ ರಾಜರುಗಳ ಆಡಳಿತ ಕಾಲದಲ್ಲಿ ಊರಿನವರು ಬೆಳೆಸಿದ ಮರಗಳು ಆದ್ದರಿಂದ ಈ ವಿಚಾರದಲ್ಲಿ ಅರಣ್ಯ ಇಲಾಖೆಗೆ ಯಾವುದೆ ಲಾಬಿ ಮಾಡಲು ಅವಕಾಶವನ್ನು ಕೊಡದಂತೆ ರಾಜ್ಯ ಸರ್ಕಾರ ಆದೇಶ ಮಾಡಬೇಕಾಗಿದೆ ಬೇರೆ ಜಿಲ್ಲೆಗಳಲ್ಲಿ ಹೈವೆ ರಸ್ತೆ ನಿರ್ಮಾಣ ಆದಾಗಲೂ ಸಹ ಸಾಲು ಮರಗಳನ್ನು ತೆಗೆದು ರಸ್ತೆ ನಿರ್ಮಾಣ ಮಾಡಿದ್ದಾರೆ ಆದ್ದರಿಂದ ಅರಣ್ಯ ಇಲಾಖೆಗೆ ಈ ಮರಗಳಿಗೂ ಯಾವುದೆ ಸಂಬಂಧವಿರುವುದಿಲ್ಲ ನಮ್ಮ ಜಿಲ್ಲೆಯ ಜನ ಪ್ರತಿನಿಧಿಗಳಾದ ಲೋಕಸಭಾ ಸದಸ್ಯರು ಮತ್ತು ನಮ್ಮ ಜಿಲ್ಲೆ ಶಾಸಕರುಗಳು ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕಾಗಿದೆ ರಸ್ತೆ ನಿರ್ಮಾಣ ಕೆಲಸ ರಸ್ತೆ ನಿರ್ಮಾಣದ ಬಗ್ಗೆ ವಿಳಂಬ ಆಗುತ್ತಿರುವುದರಿಂದ ರಾಜ್ಯ ರೈತ ಸಂಘ ಮತ್ತು ಇತರ ಪ್ರಗತಿಪರ ಸಂಘಗಳ ನೆರವಿನಿಂದ ರಾಜ್ಯ ಸರ್ಕಾರದ ವಿರುದ್ಧ ಮತ್ತು ಜಿಲ್ಲೆಯು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ.

‎ಡಿ ಎಸ್ ರಮೇಶ್ ಗೌಡ ದಾರದಹಳ್ಳಿ ರೈತಸಂಘ ಹಸಿರುಸೇನೆ ಜಿಲ್ಲಾ ಸಂಚಾಲಕರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು

‎ ಕೆಂಪೇಗೌಡ ಒಕ್ಕಲಿಗ ತಾಲ್ಲೂಕು ಕಾರ್ಯದರ್ಶಿ ಬಕ್ಕಿಪ್ರಸಾದ್. ಮತ್ತು ಡಿ ಆರ್ ಪುಟ್ಟಸ್ವಾಮಿಗೌಡ. ತಾಲ್ಲೂಕು ರೈತಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು..

About Author

Leave a Reply

Your email address will not be published. Required fields are marked *

You may have missed